ಹೃದಯ ಶ್ರೀಮಂತಿಕೆಯಿಂದ ಸಂತ್ರಸ್ತರಿಗೆ ಸಹಾಯ ಒದಗಿಸಿದ ಮರಿಯುಮ್ಮ

ಹೀಗೊಂದು ಅರ್ಥಪೂರ್ಣ ಬಕ್ರೀದ್‌ ಆಚರಿಸಿದ ವೃದ್ಧೆ

Team Udayavani, Aug 14, 2019, 8:01 PM IST

ಬದಿಯಡ್ಕ: ಬಿರುಸಿನ ಗಾಳಿ ಮಳೆಯಿಂದ ಕಂಗೆಟ್ಟ ಸಂತ್ರಸ್ತರ ಪುನರ್ವಸತಿಗೆ ಕೈಜೋಡಿಸುವ ಮೂಲಕ 77 ರ ಹರೆಯದ ಮರಿಯುಮ್ಮ ಮಾನವೀಯ ಸ್ಪಂದನದೊಂದಿಗೆ ಅರ್ಥಪೂರ್ಣವಾಗಿ ಬಕ್ರೀದ್ ಹಬ್ಬ ಆಚರಿಸಿಕೊಂಡಿದ್ದಾರೆ. ಇತರರ ಸಂಕಷ್ಟದಿಂದ ನೊಂದು ಸಹಾಯ ಹಸ್ತ ಚಾಚುವುದಕ್ಕೆ ಆರ್ಥಿಕವಾಗಿ ಶ್ರೀಮಂತರೇ ಆಗಬೇಕಿಲ್ಲ. ಹƒದಯ ಶ್ರೀಮಂತಿಕೆ ಇದ್ದರೆ ಸಾಕು ಎಂಬುದನ್ನು ಇವರು ಕೃತಿಯಿಂದ ತೋರಿದ್ದಾರೆ. ಹಬ್ಬಕ್ಕಾಗಿ ಕಷ್ಟಪಟ್ಟು ಸಂಗ್ರಹಿಸಿದ್ದ, ಹಬ್ಬದ ಕೊಡುಗೆಯಾಗಿ ಲಭಿಸಿದ್ದ ಸಾಮಾಗ್ರಿಗಳನ್ನೆಲ್ಲ ಸಂತ್ರಸ್ತರಿಗೆ ಹಸ್ತಾಂತರಿಸುವ ಮೂಲಕ ಮರಿಯುಮ್ಮ ವಿಭಿನ್ನರಾಗಿ ಕಾಣುತ್ತಾರೆ. ಪ್ರಾಕೃತಿಕ ದುರಂತಕ್ಕೆ ನೋಡುನೋಡುತ್ತಿದ್ದಂತೆಯೇ ತುತ್ತಾಗಿ ಎಲ್ಲವನ್ನೂ ಕಳೆದುಕೊಂಡ ಜನರಿಗೆಕೈಲಾದ ಸಹಾಯ ಮಾಡುವ ಮೂಲಕ ಆರ್ಥಿಕವಾಗಿ ಅಷೇrನೂ ಸಂಪನ್ನರಲ್ಲದೇ ಇದ್ದರೂ, ಮಾನವೀಯ ಮೌಲ್ಯಗಳ ಮೂಲಕ ಮರಿಯುಮ್ಮ ಮಾದರಿಯಾಗಿದ್ದಾರೆ. ಹಬ್ಬದ ಅಂಗವಾಗಿ ಪಡನ್ನಕ್ಕಾಡ್‌ ಕೃಷಿ ಕಾಲೇಜಿನ ಕಲೆಕ್ಷನ್‌ ಸೆಂಟರ್‌ ಗೆ ಆಗಮಿಸಿ ಸಂತ್ರಸ್ತರಿಗೆ ಬಟ್ಟೆ, ಇನ್ನಿತರ ಅನಿವಾರ್ಯ ಸಾಮಾಗ್ರಿಗಳನ್ನು ಹಂಚಿ ಹಬ್ಬವನ್ನು ಕೊಂಡಾಡಿದರು. 20 ಕಿಲೋ ಅಕ್ಕಿ, ಅರ್ಧ ಲೀಟರ್‌ ತೆಂಗಿನೆಣ್ಣೆ, ಚಹಾ ಪುಡಿ, ಬಟ್ಟೆಬರೆ ಇತ್ಯಾದಿಗಳನ್ನು ಅವರು ಹಸ್ತಾಂತರಿಸಿದರು. ಪುತ್ರ ಅಮೀರ್‌ ಅವರೊಂದಿಗೆ ತ್ರಿಕರಿಪುರದ ಹರಿಜನ ಕಾಲನಿಯಲ್ಲಿ 4 ಸೆಂಟ್ಸ್‌ ಜಾಗದಲ್ಲಿರುವಪುಟ್ಟ ಮನೆಯಲ್ಲಿ ಮರಿಯುಮ್ಮ ವಾಸವಾಗಿದ್ದಾರೆ. ಪತಿ ಅಬ್ದುಲಾVದರ್‌ ಅವರು ನಿಧನಹೊಂದಿ 50 ವರ್ಷಗಳೇ ಕಳೆದಿವೆ. 6 ಮಕ್ಕಳನ್ನು ಹಡೆದಿದ್ದ ಮರಿಯುಮ್ಮ ಅವರಿಗೆ ಈಗ ಮೂವರು ಮಾತ್ರ ಜೀವಂತವಾಗಿದ್ದಾರೆ. ಒಬ್ಬ ಪುತ್ರಿ ವಿವಾಹಿತರಾಗಿ ಪತಿಯ ಮನೆಯಲ್ಲಿದ್ದಾರೆ. ಹೃದ್ರೋಗಿಯಾದ ಪುತ್ರನ ಜತೆ ಮರಿಯುಮ್ಮ ಬದುಕುತ್ತಿದ್ದಾರೆ. ಕಡಲೆ ಮಾರಾಟಗಾರರಾಗಿದ್ದ ಪುತ್ರನಿಗೆ ಈಗ ರೋಗದ ಹಿನ್ನೆಲೆಯಿಂದ ಕೆಲಸಕ್ಕೆ ತೆರಳಲಾಗುತ್ತಿಲ್ಲ. ಸ್ಥಳೀಯ ಕೆಲವು ಸಂಘಟನೆಗಳು-ಸಾರ್ವಜನಿಕರು ನೀಡುವ ಸಹಾಯವೊಂದೇ ಬದುಕಿಗೆ ಆಸರೆಯಾಗಿದೆ. ಈ ಸಲದ ಬಿರುಸಿನಮಳೆ,ಅದರಿಂದ ತಲೆದೋರಿದ ನೆರೆಹಾವಳಿಗಳು ಮರಿಯುಮ್ಮ ಅವರನ್ನು ತುಂಬಾ ಕಾಡಿತ್ತು. ಬದುಕಿನಲ್ಲಿ ನಿರಂತರ ಬವಣೆ ಕಂಡ ಹಿರಿಯಜೀವಕ್ಕೆ ಇತರರ ಸಂಕಷ್ಟ ಬಲುಬೇಗ ಅರ್ಥವಾಗಿತ್ತು. ಈ ಕಾರಣದಿಂದ ಹಬ್ಬಕ್ಕಾಗಿ ಪಡೆದಿದ್ದ ಹೊಸ ಸಾಮಾಗ್ರಿಗಳನ್ನೆಲ್ಲ ಸಂತ್ರಸ್ತರಿಗೆ ದಾನ ಮಾಡುವ ಮೂಲಕ ಮನೋನೆಮ್ಮದಿ ಪಡೆದಿದ್ದಾರೆ. ತಮಗೆ ಬೇಕಾದುದನ್ನು ದೇವರೇ ನೀಡುವನು ಎಂಬ ವಿಶ್ವಾಸ ಅವರದು. ಇತತರಿಗೆ ಸಹಾಯ ಮಾಡುವ ಮನಸ್ಸನ್ನು ಮನುಷ್ಯ ಬೆಳೆಸಿಕೊಳ್ಳಬೇಕು ಎಂಬುದು ಮರಿಯುಮ್ಮ ಸಮಾಜಕ್ಕೆ ನೀಡುವ ಸಂದೇಶ.

– ಅಖೀಲೇಶ್‌ ನಗುಮುಗಂ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ