ನಮ್ಮ ಶಾಲೆ ನಮ್ಮ ಹೆಮ್ಮೆ: ಇದು ಅವಿಭಜಿತ ದಕ್ಷಿಣಕನ್ನಡದ ಅತೀ ಪುರಾತನ ಸರಕಾರಿ ಶಾಲೆಗಳಲ್ಲೊಂದು

154 ವಸಂತಗಳನ್ನು ಕಂಡ ಕುಂದಾಪುರ ಬೋರ್ಡ್‌ ಹೈಸ್ಕೂಲ್‌

Team Udayavani, Nov 1, 2019, 3:52 PM IST

Namma-Shaale—Kundapura-Board-High-School

ಮುದ್ದಣ ಕಲಿಸಿದ್ದು ಇಲ್ಲೇ ; ಕಾರಂತರಿಗೇ ಕಲಿಸಿದ ವಿದ್ಯಾಲಯ

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

— ಲಕ್ಷ್ಮೀ ಮಚ್ಚಿನ

ಕುಂದಾಪುರ: ಸುತ್ತಲಿನ ಹತ್ತೂರಿಗೆ ಇದೊಂದೇ ಪ್ರೌಢಶಾಲೆ – ಕುಂದಾಪುರದ ಬೋರ್ಡ್‌ ಹೈಸ್ಕೂಲ್‌. ಕವಿ ಮುದ್ದಣ ಶಾರೀರಿಕ ಶಿಕ್ಷಕರಾಗಿದ್ದ, ಕವಿ ಗೋಪಾಲಕೃಷ್ಣ ಅಡಿಗರು, ಕೋಟ ಶಿವರಾಮ ಕಾರಂತರು ಕಲಿತ ಶಾಲೆ ಇದು. ಇಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಬಂಟ್ವಾಳ ರಘುನಾಥ ರಾಯರ ಹೆಸರಿನಲ್ಲೇ ಎದುರು ಇನ್ನೊಂದು ಶಾಲೆಯಿದೆ. ಇಂಥ ಭವ್ಯ ಇತಿಹಾಸದ ಶಾಲೆ 1865ರಲ್ಲಿ ಸ್ಥಾಪನೆಯಾಯಿತು.

ಬೋರ್ಡ್‌ ಹೈಸ್ಕೂಲ್‌
ಕುಂದಾಪುರ ಸಬ್‌ ಕಲೆಕ್ಟರ್‌ ಮೇಲ್ವಿಚಾರಣೆಯಲ್ಲಿ 1874ರಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಅತಿ ಪುರಾತನ ಶಾಲೆಯಾಗಿ ಯೂನಿಯನ್‌ ಶಾಲೆ ಎಂಬ ನಾಮಧೇಯದಲ್ಲಿ ಇಲ್ಲಿ ಪಾಠ ಪ್ರವಚನ ಆರಂಭವಾಯಿತು. ಬೋರ್ಡ್‌ ಹೈಸ್ಕೂಲ್‌ ಆಗಿ ಮೇಲ್ದರ್ಜೆಗೇರಿದ್ದು 1887ರಲ್ಲಿ, ಪ.ಪೂ. ಕಾಲೇಜು ಆರಂಭವಾದ್ದು 1972ರಲ್ಲಿ. 1955ರಲ್ಲಿ ಶಿಕ್ಷಣ ಸಚಿವರಾಗಿದ್ದ ಸಿ. ಸುಬ್ರಹ್ಮಣ್ಯಮ್‌ ಅವರು ಕಲಾಮಂದಿರಕ್ಕೆ, 1987ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರು ಶತಮಾನೋತ್ಸವ ಭವನಕ್ಕೆ ಶಿಲಾನ್ಯಾಸಗೈದಿದ್ದರು. ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಯೋಜನೆಗಳಿಗೆ ಚಾಲನೆ ನೀಡಿದ್ದರು. ಶಾಸಕರಾಗಿದ್ದ ಎಸ್‌.ಎಸ್‌. ಕೊಳ್ಕೆಬೈಲು, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೂಡ ಇಲ್ಲಿನ ಹಳೆ ವಿದ್ಯಾರ್ಥಿಗಳು.

ಅತೀ ಹೆಚ್ಚು ಮಕ್ಕಳು
ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆ ಎಂಬ ಹೆಗ್ಗಳಿಕೆ ಇದರದ್ದು. ಪ್ರೌಢಶಾಲೆ ಮತ್ತು ಪ.ಪೂ.ವಿನಲ್ಲಿ ಒಟ್ಟು 2,058 ವಿದ್ಯಾರ್ಥಿಗಳಿದ್ದಾರೆ. ಸರಕಾರದ ಎಲ್ಲ ಸೌಲಭ್ಯಗಳು, ವಿದ್ಯಾರ್ಥಿವೇತನ ಅಲ್ಲದೆ ಎರಡೂವರೆ ದಶಕಕ್ಕೂ ಹೆಚ್ಚು ಬೋಧನಾನುಭವ ಹೊಂದಿದ ಶಿಕ್ಷಕರು ಇಲ್ಲಿನ ಸಂಪನ್ಮೂಲವೇ ಸರಿ. ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಮತ್ತು ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳೇ ತಯಾರಿಸಿದ ತರಕಾರಿ ತೋಟದಿಂದ ಬಿಸಿಯೂಟಕ್ಕಾಗಿ ತರಕಾರಿ ದೊರೆಯುತ್ತದೆ.

ಬೇಡಿಕೆ
125ನೇ ವರ್ಷದ ನೆನಪಿನಲ್ಲಿ ಮುದ್ದಣ, ಕಾರಂತ, ಅಡಿಗರ ಸ್ಮಾರಕ ರಚನೆ, ಪುತ್ಥಳಿ ಸ್ಥಾಪನೆ, ಸಮಗ್ರ ಕೃತಿಗಳ ಸಂಗ್ರಹ ಯೋಜನೆಗೆ ನೆರವು ನಿರೀಕ್ಷಿಸಲಾಗಿದೆ. ಕಂಪ್ಯೂಟರ್‌ಗಳನ್ನು ದಾನಿಗಳಿಂದ ಅಪೇಕ್ಷಿಸಲಾಗಿದ್ದು ಮೈದಾನ ಅಭಿವೃದ್ಧಿಗೆ ಯೋಜನೆಯಿದೆ.

ವಿಶೇಷ
ಪಠ್ಯದ ಜತೆಗೆ ರಾಷ್ಟ್ರೀಯ ಕೌಶಲ ಆಧಾರಿತ ಶಿಕ್ಷಣ ಯೋಜನೆಯಲ್ಲಿ 9, 10ನೇ ತರಗತಿಯವರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಅಟೊಮೊಬೈಲ್‌ ವಿಷಯಗಳಲ್ಲಿ ಕಲಿಯುತ್ತಿದ್ದಾರೆ. ಕರಾಟೆ, ಯಕ್ಷಗಾನ ಶಿಕ್ಷಣ ನೀಡಲಾಗುತ್ತಿದೆ. 200 ಕಾಲೇಜು ವಿದ್ಯಾರ್ಥಿಗಳಿಗೆ ದಾನಿಗಳು ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಿದ್ದಾರೆ. ದಾನಿಗಳ ಮೂಲಕ ಶಾಲೆಗೆ ಅಗತ್ಯವಿರುವ ಕಟ್ಟಡ, ಕಂಪ್ಯೂಟರ್‌ ಪ್ರಯೋಗಾಲಯವೂ ನಿರ್ಮಾಣವಾಗಿದೆ. ಸ್ವತ್ಛಭಾರತ ಅಭಿಯಾನದಿಂದ 1.25 ಲಕ್ಷ ರೂ. ವೆಚ್ಚದ ಶೌಚಾಲಯ ನಿರ್ಮಾಣವಾಗಿದ್ದು, 1.5 ಲಕ್ಷ ರೂ. ವೆಚ್ಚದಲ್ಲಿ ಮೈದಾನದಲ್ಲಿ ಪ್ರೇಕ್ಷಕರ ಗ್ಯಾಲರಿಯಿದೆ.

ಇಲ್ಲಿ ಕಲಿತ ವಿದ್ಯಾರ್ಥಿಗಳು ಬೇರೆ ಬೇರೆ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಅದರ ಪ್ರಭಾವ ಈಗಿನ ವಿದ್ಯಾರ್ಥಿಗಳ ಮೇಲೆ ಕೂಡ ಆಗುತ್ತಿದೆ. ಜಿಲ್ಲೆಯಲ್ಲಿ ಹೆಸರು ಪಡೆದ ಶಿಕ್ಷಣ ಸಂಸ್ಥೆ ಇದು.
– ಮೋಹನ್‌ ರಾವ್‌ ಎಂ.ಜೆ., ಉಪಪ್ರಾಂಶುಪಾಲರು

9ನೇ ತರಗತಿಯಲ್ಲಿ ಉಪನಾಯಕ, 10ರಲ್ಲಿ ಶಾಲಾ ನಾಯಕನಾಗಿದ್ದೆ. ಸದಾ ಸ್ಮರಣೀಯರಾದ ಅಧ್ಯಾಪಕ ರಾಜೀವ ಶೆಟ್ಟಿ, ಮುಖ್ಯೋಪಾಧ್ಯಾಯ ಪಿ.ಎಸ್‌. ಕಾರಂತರು ನಮಗಿದ್ದರು. ಆಗ 1 ಸಾವಿರ ವಿದ್ಯಾರ್ಥಿಗಳಿದ್ದರು, ಶಿಸ್ತು ಕಲಿಸಿದ ನನ್ನ ಪ್ರೀತಿಯ ಪ್ರೌಢಶಾಲೆಯಿದು. ನಾನು ರಾಜಕೀಯದಲ್ಲಿ ಈ ಹಂತಕ್ಕೇರಲು ಅಲ್ಲಿನ ಶಿಕ್ಷಣ ಬುನಾದಿಯಾಗಿದೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು, ಹಳೆ ವಿದ್ಯಾರ್ಥಿ

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.