ʼಹುಲಿ ಹೆಜ್ಜೆ’ಯ ಮೋಡಿ!; ತಾಸೆಯ ಶಬ್ದಕ್ಕೆ ಹುಲಿ ವೇಷದ ಮೆರುಗು

Team Udayavani, Sep 29, 2022, 2:47 PM IST

12

ಮಹಾನಗರ: ಒಂದೆಡೆ ನವರಾತ್ರಿ ಸಂಭ್ರಮಕ್ಕೆ ಮಂಗಳೂರು ಸಿದ್ಧವಾಗುತ್ತಿರುವಂತೆ, ಮತ್ತೂಂದೆಡೆ ತಾಸೆಯ ಶಬ್ದದೊಂದಿಗೆ ಹುಲಿ ವೇಷದ ಅಬ್ಬರವೂ ಕರಾವಳಿಯಾದ್ಯಂತ ಮೋಡಿ ಮಾಡಲಿದೆ. ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿರುವ ಹುಲಿ ವೇಷದ ಸೊಬಗು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಲ್ಲ; ಬದಲಾಗಿ ಅದರ ಹಿಂದೆ ನಂಬಿಕೆ ಹಾಗೂ ಆರಾಧನೆಯೂ ಅಡಕವಾಗಿದೆ.

ಕಷ್ಟ ಕಾಲದಲ್ಲಿ ದೇವಿಯನ್ನು ಸ್ಮರಿಸಿ ʼವೇಷ ಹಾಕುವುದಾಗಿ’ ಹರಕೆ ಹೇಳುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ. ಅದರಂತೆ ಹುಲಿ ವೇಷ ಪ್ರಾಧಾನ್ಯ ಪಡೆದಿದೆ. ಪಟ್ಟೆ ಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪೆ ಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ ಹೀಗೆ ನಾನಾ ರೀತಿಗಳಿವೆ. ಕೆಲವೆಡೆ ಲಲಿತ ಪಂಚಮಿಯಂದು ಹುಲಿವೇಷ ಹಾಕುವ ಪದ್ಧತಿ ಇತ್ತು. ಆದರೆ ಇತ್ತೀಚೆಗೆ ದಿನ ಕಡಿಮೆಯಾಗಿದೆ. ಕೊನೆಯ ದಿನದಂದೇ ವೇಷ ಹಾಕುತ್ತಾರೆ.

ರಂಗ್‌ಗೆ ಕುಳಿತುಕೊಳ್ಳುವ ಮುನ್ನ…

ಮೊದಲೆಲ್ಲ ಚೌತಿ ಅಥವಾ ನವರಾತ್ರಿಯ 40 ದಿನಗಳ ಮುನ್ನವೇ ಹುಲಿ ವೇಷ ಹಾಕುವವರು ಮುಹೂರ್ತ ಮಾಡುತ್ತಾರೆ. ಇದಕ್ಕೆ “ಊದು’ ಇಡುವುದು ಎನ್ನುತ್ತಾರೆ. ದೇವರ ಫೋಟೋವನ್ನಿಟ್ಟು, ಹುಲಿ ಕುಣಿತಕ್ಕೆ ಬಳಸಲಾಗುವ ಟೊಪ್ಪಿ, ಚಡ್ಡಿ, ಜಂಡೆಯನ್ನು ದೇವರ ಮುಂದಿರಿಸಿ ಪೂಜೆ ಮಾಡುವುದು ಕ್ರಮ. ಅಂದಿನಿಂದಲೇ ಹುಲಿ ವೇಷಧಾರಿ ವ್ರತಾಚರಣೆಯಲ್ಲಿ ಇರುತ್ತಿದ್ದರು. ಆದರೆ ಈಗ ರಂಗ್‌ಗೆ ಕುಳಿತುಕೊಳ್ಳುವ ಮುನ್ನಾ ದಿನವೇ “ಊದು’ ಇಡಲಾಗುತ್ತದೆ. ಅದಕ್ಕಾಗಿ ಕನಿಷ್ಠ 1 ವಾರ ವೇಷಧಾರಿ ವ್ರತಾಚರಣೆಯಲ್ಲಿ ಇರುತ್ತಾರೆ. ಊದು ಇಡುವ ದಿನ ಪೂಜೆ ಆದ ಬಳಿಕ ಗುರು ಹಿರಿಯರ ಆಶೀರ್ವಾದ ಪಡೆದು, ವೇಷ ಹಾಕದೆ ಹುಲಿ ವೇಷಧಾರಿ ನರ್ತನ ಮಾಡಬೇಕಿದೆ.

ಅಗಸೆ ಕಾಯಿಯ ಬೀಜದಿಂದ ಬಣ್ಣ!

ಹಲವು ವರ್ಷದ ಹಿಂದೆ ಹುಲಿ ವೇಷದ ಬಣ್ಣ ಹಾಕಲು ಈಗಿನಂತೆ ಪೈಂಟ್‌ ಬಳಸುತ್ತಿರಲಿಲ್ಲ. ಅಗಸೆ ಕಾಯಿಯ ಬೀಜವನ್ನು ಕಲ್ಲಿನಲ್ಲಿ ಅರೆದು ಬಣ್ಣ ಹಚ್ಚಲಾಗುತ್ತಿತ್ತು. ಆಗ ಬಣ್ಣ ಹಚ್ಚಲು ಕೆಲವೊಮ್ಮೆ ಒಂದು ದಿನ ಕೂಡ ತಗಲುತ್ತಿತ್ತು. ಹುಲಿಗೆ “ಪಟ್ಟಿ’ ಬಣ್ಣ ಹಾಕಲು ಚಿಮಿಣಿಯ ಕರಿಯನ್ನು ಬಳಸಲಾಗುತ್ತಿತ್ತು. ಆದರೆ ಈಗ ಪೈಂಟ್‌, ಸ್ಪ್ರೆ ಬಳಸಲಾಗುತ್ತಿದೆ. ಹುಲಿ ವೇಷದ ಜತೆಗೆ ಇತರ ವೇಷಗಳು ಕೂಡ ನವರಾತ್ರಿಯಲ್ಲಿ ಕಾಣಸಿಗುತ್ತದೆ. ಶಾರ್ದುಲ, ಕರಡಿ, ಚಂಡಮುಂಡರು, ಶೂರ್ಪನಖೀ, ಬ್ರಹ್ಮಕಪಾಲ, ಪ್ರೇತ, ಕುರು ಕುರು ಮಾಮ, ಡ್ಯಾನ್ಸ್‌, ಜಕ್ಕ ಮದಿನ, ಬೇಡರ ನೃತ್ಯ… ಹೀಗೆ ನೂರಾರು ಬಗೆಯ ವೇಷಗಳನ್ನು ಕಾಣುವುದೇ ಒಂದು ಗಮ್ಮತ್ತು!

ಕುಡ್ಲದಲ್ಲಿ ಜೋಡಿ ಪಿಲಿ ಗೊಬ್ಬು!

ಈ ಬಾರಿಯ ನವರಾತ್ರಿ ಸಡಗರಕ್ಕೆ “ಜೋಡಿ ಪಿಲಿ ಗೊಬ್ಬು’ ರಂಗೇರಿಸಲಿದೆ. ಮಂಗಳೂರಿನ ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಅ. 4ರಂದು ಕರಾವಳಿ ಉತ್ಸವ ಮೈದಾನದಲ್ಲಿ 7ನೇ ವರ್ಷದ “ಪಿಲಿ ನಲಿಕೆ’ ನಡೆಯಲಿದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ “ಕುಡ್ಲದ ಪಿಲಿ ಪರ್ಬ’ ಅ. 2ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ.

ಬಣ್ಣಕ್ಕಾಗಿ ತಾಸುಗಟ್ಟಲೆ!

ಹುಲಿ ವೇಷಧಾರಿ ಬಣ್ಣ ಹಾಕುವಾಗ ಸುಮಾರು 3 ಗಂಟೆ ಎರಡು ಕೈಯನ್ನು ಉದ್ದದ ಕೋಲಿನ ಮೇಲೆ ಇಟ್ಟು ನಿಂತಿರಬೇಕು. ಪೈಂಟ್‌ ಬಳಿಯುವ ಸಂದರ್ಭ ಕೋಲಿನಿಂದ ಆತ ಕೈ ತೆಗೆಯುವಂತಿಲ್ಲ. ಕುಳಿತುಕೊಳ್ಳುವಂತೆಯೂ ಇಲ್ಲ. ಮೈಗೆ ಹಾಕಿದ ಬಣ್ಣ ಯಥಾಸ್ಥಿತಿಯಲ್ಲಿಯೇ ಇದ್ದು ಒಣಗಬೇಕು. ಕೆಲವರ ದೇಹದಲ್ಲಿ ಪೈಂಟ್‌ ಕೆಲವೇ ಗಂಟೆಯಲ್ಲಿ ಒಣಗುತ್ತದೆ. ಬಣ್ಣ ಹಾಕಿದ ಬಳಿಕ ನೇರವಾಗಿ ದೇವಸ್ಥಾನಕ್ಕೆ ಬಂದು “ಜಂಡೆ ಮೆರವಣಿಗೆ’ ಮಾಡಿ ಪೂಜೆ ಸಲ್ಲಿಸಿದ ಬಳಿಕ ಹುಲಿಯ ಟೊಪ್ಪಿ ಹಾಕಬೇಕಾಗುತ್ತದೆ.

-ದಿನೇಶ್‌ ಇರಾ

ಟಾಪ್ ನ್ಯೂಸ್

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.