ಬಿಸಿಲಿನ ಬೇಗೆಯಿಂದ ಎ ಮ್ಮೆಗಳನ್ನೂ  ರಕ್ಷಿಸಿ


Team Udayavani, Apr 14, 2019, 6:00 AM IST

j-24

ಬೇಸಗೆ ಎಂಬುದು ಅನಿವಾರ್ಯವಾದ ಋತುಮಾನ. ಇಸ್ರೇಲ್‌ ದೇಶದಲ್ಲಿ 40 ಡಿಗ್ರಿ ಸೆ. ಉಷ್ಣತಾಮಾನವಿದ್ದರೂ ಅಲ್ಲಿ ಆಕಳು (ಎಚ್‌ಎಂ ಜರ್ಸಿ) ಮಿಶ್ರ ತಳಿಗಳಿಂದ 40 ಲೀ. ಗಿಂತಲೂ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಾರೆ. ಅವರು ಕೆಲವು ವೈಜ್ಞಾನಿಕ ವಿಧಾನಗಳಾದ ಏರ್‌ಕಂಡೀಶನ್‌, ಕೂಲರ್‌, ಫ್ಯಾನ್‌ ಉಪಯೋಗಿಸುತ್ತಾರೆ. ನಾವು ಸುಲಭವಾಗಿ ನಮ್ಮಲ್ಲಿರುವ ಸಾಧನ ಬಳಸಿ ಬೇಸಗೆಯ ಅಡ್ಡ ಪರಿಣಾಮಗಳಿಂದ ಎಮ್ಮೆಗಳನ್ನು ಉತ್ತಮ ರೀತಿಯಿಂದ ನಿರ್ವಹಿಸಬಹುದು.

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿ ಜತೆಗೆ ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಸಾಕಣೆ ಸಾಮಾನ್ಯ. ಆದರೆ ಕಾಲಕ್ರಮೇಣ ಹೆಚ್ಚು ಹಾಲು ನೀಡುವ ಹಸುವಿನ ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸಿರುವುದರಿಂದ ರೈತರು ಅವುಗಳಿಗೆ ಆಕರ್ಷಣೆಗೊಂಡು ಎಮ್ಮೆಗಳನ್ನು ಅವಗಣಿಸುತ್ತಾ ಬಂದಿದ್ದಾರೆ.

ವಿಶೇಷತೆ
ಎಮ್ಮೆಗಳು ಯಾವುದೇ ಹವಾಮಾನಕ್ಕೆ ಒಗ್ಗಿಕೊಳ್ಳುವುದು ಸೇರಿದಂತೆ ಹಲವು ವಿಶೇಷತೆ ಹೊಂದಿದೆ. ಅಲ್ಲದೆ ದೇಶದ ಒಟ್ಟಾರೆ ಹಾಲಿನ ಉತ್ಪಾದನೆ ಯ ಶೇ. 60ರಿಂದ 65ರಷ್ಟು ಹಾಲು ಇವುಗಳಿಂದಲೇ ದೊರೆಯುತ್ತದೆ. ಇದರ ಹಾಲಿನಲ್ಲಿ ಅಧಿಕ ಪ್ರಮಾಣದ ಸಾರಜನಕ, ಕೊಬ್ಬಿನ ಅಂಶ, ಘನ ವಸ್ತುವಿನ ಅಂಶಗಳಿದ್ದು ಕೊಲೆಸ್ಟ್ರಾಲ್‌ ಅಂಶ ಕಡಿಮೆ. ಇವು ಉಷ್ಣ, ಶೀತ ಪ್ರದೇಶಗಳೆರಡರಲ್ಲೂ ಚೆನ್ನಾಗಿ ಬದುಕುತ್ತದೆ.

ತಾಪ ಕಡಿಮೆ ಮಾಡುವ ವಿಧಾನ
ಹವಾಮಾನದಲ್ಲಿ ಏರುಪೇರು ಉಂಟಾದಾಗ ಜೀವಿಗಳ ಮೇಲೆ ಪ್ರಭಾವ ಉಂಟಾಗುತ್ತದೆ. ದನಕರುಗಳು ಕೂಡ ಲವಲವಿಕೆ ಕುಂಠಿತಗೊಂಡು ಕಳೆಗುಂದಿದಂತಾಗುತ್ತದೆ. ಅದರಲ್ಲೂ ಎಮ್ಮೆಗಳಲ್ಲಿ ಅವು ತಿನ್ನುವ ಆಹಾರದಲ್ಲಿ ಇಳಿಕೆ ಕಂಡು ಬರುವ ಮೂಲಕ ಹಾಲಿನ ಉತ್ಪಾದನೆಯ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ. ಬೇಸಗೆಯಲ್ಲೂ ಎಮ್ಮೆಗಳ ಸಮರ್ಪಕ ನಿರ್ವಹಣೆ, ಅವುಗಳಿಗೆ ಬಿಸಿಲಿನ ತಾಪ ಕಡಿಮೆಯಾಗುವಂತೆ ಮಾಡುವ ಅನೇಕ ಸುಲಭ ವಿಧಾನಗಳಿವೆ. ಲಭ್ಯ ಸೌಕರ್ಯ ಬಳಸಿ ರೈತರು ಎಮ್ಮೆಗಳ ದೇಹ ತಂಪಾಗಿಸಿ ಅವುಗಳನ್ನು ಸಂರಕ್ಷಿಸಬಹುದು.

1 ಎಮ್ಮೆಗಳನ್ನು ಕಟ್ಟುವ ದೊಡ್ಡಿಯಲ್ಲಿ ಸಾಕಷ್ಟು ಗಾಳಿ, ಬೆಳಕು, ಇರಬೇಕು. ಅಲ್ಲದೆ ಕೊಟ್ಟಿಗೆ ಎತ್ತರದಲ್ಲಿ ಇರುವುದು ಉತ್ತಮ. ಝಿಂಕ್‌ ಶೀಟು, ತಗಡುಗಳನ್ನು ಬೇಸಗೆ ಸಮಯದಲ್ಲಿ ಬಳಸಬಾರದು. ಉಪಯೋಗಿಸಿದರೆ ಅದರ ಮೇಲೆ ಒಂದಿಷ್ಟು ತ್ಯಾಜ್ಯ ವಸ್ತುಗಳನ್ನು (ತೆಂಗಿನ ಗರಿ, ಭತ್ತದ ಹುಲ್ಲು, ದಂಟು) ಅದರ ಮೇಲೆ ಹರಡಿ ಶಾಖವನ್ನು ತಗ್ಗಿಸಬಹುದು.

2 ಎಮ್ಮೆಗಳನ್ನು ತಂಪಾದ ಸಮಯದಲ್ಲಿ ಬೆಳಗ್ಗೆ ಅಥವಾ ಸಂಜೆಯ ಹೊತ್ತು ಅಡ್ಡಾಡಲು ಬಿಡಬೇಕು. ಮಧ್ಯಾಹ್ನದ ಬಿಸಿಲಿಗೆ ಎಂದೂ ಹೊರಗೆ ಅಡ್ಡಾಡಲು ಬಿಡಕೂ ಡದು. ಬಿಟ್ಟರೂ ಹೊರಗೆ ಸಾಕಷ್ಟು ನೆರಳು ಇರಬೇಕು. ಹೊರಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿ ಇದನ್ನು ಕಟ್ಟಬಹುದು.

3 ನೀರಿನ ಸೌಲಭ್ಯವಿದ್ದರೆ ಪೈಪ್‌, ಸ್ಪ್ರಿಂಕ್ಲರ್‌ಗಳ ಮೂಲಕ ಎಮ್ಮೆಯ ಮೈಯನ್ನು ತಂಪಾಗಿಸಲು ಸಹಕರಿಸಬಹುದು ಅಥವಾ ಬಕೆಟ್‌ನಿಂದ ನೀರನ್ನು ತುಂಬಿ ಅದರ ಮೇಲೆ ಹೊಯಬಹುದು. ದಿನಕ್ಕೆ 3ರಿಂದ 4 ಬಾರಿ ಬಿಸಿಲಿನ ಸಮಯದಲ್ಲಿ ಇದನ್ನು ಮಾಡುವುದು ಉತ್ತಮ. ಇದರಿಂದ ಅವುಗಳಲ್ಲಿ ಉಷ್ಣತೆಯ ಪ್ರಭಾವ ಕಡಿಮೆಯಾಗುತ್ತದೆ.

4 ಒಂದು ಅಂದಾಜು ಪ್ರಕಾರ ಪ್ರಾಣಿಗಳು ಒಂದು ಲೀಟರ್‌ ಹಾಲು ಉತ್ಪಾದನೆ ಮಾಡಲು ಕನಿಷ್ಠ 4 ಲೀಟರ್‌ ನೀರು ಕುಡಿಯಬೇಕಾಗುತ್ತದೆ. ಆದರೆ ಬೇಸಗೆಯಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚು. ಇದಕ್ಕಾಗಿ ಕುಡಿಯುವ ನೀರಿನ ತೊಟ್ಟಿಗಳು ನೆರಳಿನಲ್ಲಿ ಆದಷ್ಟು ಅದರ ಸಮೀಪವೇ ಇರಬೇಕು. ಇವುಗಳಿಗೆ ಅಲ್ಲಲ್ಲಿ ಸಣ್ಣ ತೊಟ್ಟಿಗಳನ್ನು ಇಟ್ಟರೆ ಇನ್ನೂ ಉತ್ತಮ.

5 ಬೇಸಗೆಯಲ್ಲಿ ಎಮ್ಮೆಗಳನ್ನು ಕಾಡುವ ಇನ್ನೊಂದು ಅಂಶ ಪೌಷ್ಟಿಕ ಆಹಾರದ ಕೊರತೆ. ಈ ಸಮಯದಲ್ಲಿ ಹಸಿರು ಮೇವು ಕಡಿಮೆ ಸಿಗುವುದರಿಂದ ಹಸಿರು ಮೇವನ್ನು ರಸಮೇವನ್ನಾಗಿ ಸಂಗ್ರಹಿಸಿ ಇಡಬೇಕು. ಬೇಸಗೆಯ ಸಂದರ್ಭದಲ್ಲಿ ಈ ರಸಮೇವನ್ನು (ಸೈಲೇಜ್‌) ಒಣಮೇವಿನೊಂದಿಗೆ ಸೇರಿಸಿ ಕೊಟ್ಟಾಗ ಅದು ರುಚಿಕರವಾಗಿ ಅದು ಆಹಾರವನ್ನು ಹೆಚ್ಚಿಗೆ ತೆಗೆದುಕೊಳ್ಳಲು ಆರಂಭಿಸುತ್ತದೆ. ರಸಮೇವಿಗೆ ಉಪ್ಪು ಇಲ್ಲವೇ ಬೆಲ್ಲದ ನೀರು ಸಿಂಪಡಿಸುವುದು ಉತ್ತಮ. ಪೌಷ್ಟಿಕಾಂಶ ಕೊರತೆಯಾಗದಂತೆ ಆಹಾರ ಪೂರೈಕೆ ಮಾಡುವುದು ಅತ್ಯಗತ್ಯ.

7 ಬೇಸಗೆಯಲ್ಲಿ ಬೆಳಗ್ಗೆ ಅಥವಾ ಸಂಜೆ ವೇಳೆ ಹೆಚ್ಚು ಆಹಾರ ನೀಡುವುದು ಉತ್ತಮ.

8 ಅಸಂಪ್ರದಾಯಿಕ ಆಹಾರಗಳಾದ ಸುಬಾಬುಲ್‌ನ ಕಾಯಿಗಳನ್ನು ಕತ್ತರಿಸಿ ಅದನ್ನು ಮೇವಿ ನೊಂದಿಗೆ ಬೆರೆಸಿ ನೀಡಬೇಕು. ಖನಿಜ ಲವಣಗಳನ್ನು ಪಶು ವೈದ್ಯರ ಸಲಹೆ ಮೇರೆಗೆ ನೀಡಬಹುದು.

9 ಕಾಲ ಕಾಲಕ್ಕೆ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಿಸ ಬೇಕು. ಪಶು ವೈದ್ಯ ಇಲಾಖೆಯವರು ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಲಸಿಕೆ ಹಾಕುವ ಕಾರ್ಯ ಕ್ರಮ ನಡೆಸುತ್ತಾರೆ. ಅದರ ಉಪಯೋಗ ಪಡೆಯಬಹುದು.

10 ಬೇಸಗೆಯ ಅಂತ್ಯದಲ್ಲಿ ಸುರಿಯುವ ಮಳೆಯಿಂದ ಎಮ್ಮೆಗಳಿಗೆ ಗಂಟಲು ಬೇನೆ ಕಂಡುಬರುತ್ತದೆ. ಇದಕ್ಕೆ ಮೇ ತಿಂಗಳಲ್ಲಿ ರೈತರು ತಮ್ಮ ಇಲಾಖೆಯ ಪಶುವೈದ್ಯರನ್ನು ಸಂಪರ್ಕಿಸಿ ಲಸಿಕೆ ಹಾಕಿಸಬಹುದು.

11 ಬೇಸಗೆಯ ಸಂದರ್ಭದಲ್ಲಿ ಎಮ್ಮೆಗಳಿಗೆ ಗರ್ಭ ಧಾರಣೆ ಸಮಸ್ಯೆ ಕಂಡುಬರಬಹುದು. ಆಗ ಬೆದೆಗೆ ಬಂದ ಎಮ್ಮೆಗಳನ್ನು ಗುರುತಿಸಿ ಬೆಳಗ್ಗೆ ಅಥವಾ ಸಂಜೆ ಕೃತಕ ಗರ್ಭಧಾರಣೆ ಮಾಡಿಸುವುದು ಉತ್ತಮ.

12 ಎಮ್ಮೆ ಕರುಗಳಿಗೆ ಉತ್ತಮ ಆರೈಕೆ ಅತ್ಯಗತ್ಯ. ಇದರ ಕರುಗಳಲ್ಲಿ ಜಂತುಹುಳುಗಳ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಕರು ಹುಟ್ಟಿದ 10 ದಿನಗಳಲ್ಲಿ ಒಂದು ಬಾರಿ ಮತ್ತು 21 ದಿನಗಳ ಅನಂತರ ಮತ್ತೂಮ್ಮೆ ಔಷಧ ನೀಡಿದರೆ ಹುಳುಗಳು ನಾಶವಾಗಿ ಕರುಗಳು ಚೆನ್ನಾಗಿ ಆರೋಗ್ಯವಂತವಾಗಿ ಬೆಳೆಯುತ್ತದೆ.

ರೈತರು ಎಮ್ಮೆಗಳಿಗೆ ಸೂಕ್ತ ಸಮಯದಲ್ಲಿ ಶುದ್ಧ ನೀರು, ಪೌಷ್ಟಿಕ ಆಹಾರ ನೀಡಿ ಬೇಸಗೆಯ ತಾಪ ಕಡಿಮೆ ಮಾಡಲು ಕ್ರಮ ಕೈಗೊಂಡಲ್ಲಿ ಎಮ್ಮೆಗಳ ಹಾಲಿನ ಪ್ರಮಾಣ ಜಾಸ್ತಿಯಾಗುವುದಲ್ಲದೆ ಅವುಗಳು ಅರೋಗ್ಯ ವಾಗಿರುತ್ತದೆ.

ಸುಧಾರಿತ ಎಮ್ಮೆ ತಳಿ
ನಾಗ್ಪುರಿ, ಮೆಹ್ಸಾನಾ, ಪಂಡರಪುರಿ, ಮುರ್ರಾ, ಸೂರ್ತಿ, ಜಹರ್‌ಬಾದಿ ಹಾಗೂ ಉತ್ತರ ಕರ್ನಾಟಕದ ಕೆಲವು ಸ್ಥಳೀಯ ತಳಿಗಳು ಉತ್ತಮ ಹಾಲು ಕೊಡುವ ಎಮ್ಮೆ ತಳಿಗಳಾಗಿವೆ. ರೈತರು ಇಂತಹ ಸುಧಾರಿತ ಎಮ್ಮೆ ತಳಿಗಳನ್ನು ಕೊಂಡು ಉತ್ತಮ ಲಾಭ ಗಳಿಸಬಹುದು.

ಜಯಾನಂದ ಅಮೀನ್‌ ಬನ್ನಂಜೆ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.