ಕೋವಿಡ್ 19 ಸೋಂಕಿತರ ಮಾಹಿತಿ ನೀಡುತ್ತೆ “ಆರೋಗ್ಯ ಸೇತು’ಆ್ಯಪ್
Team Udayavani, Apr 6, 2020, 1:20 PM IST
ಹುಬ್ಬಳ್ಳಿ : ಕೋವಿಡ್ 19 ಸೋಂಕಿತರ ಬಗ್ಗೆ ಹಾಗೂ ಮುಂಜಾಗ್ರತಾ ಮಾಹಿತಿ ನೀಡಿಕೆಯ “ಆರೋಗ್ಯ ಸೇತು ‘ಆ್ಯಪ್ನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ರೈಲ್ವೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದರ ಬಳಕೆಗೆ ಮುಂದಾಗಬೇಕೆಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.
ಈ ಆ್ಯಪ್ ಮೊಬೈಲ್ ಟ್ರ್ಯಾಕರ್ ಮೂಲಕ ಕೋವಿಡ್ 19 ಸೋಂಕಿಂತರು, ಕ್ವಾರೆಟೈನ್ನಲ್ಲಿರುವವರು ಅಕ್ಕಪಕ್ಕ -ಹತ್ತಿರದಲ್ಲಿದ್ದರೆ ಆ ಕುರಿತು ನಿಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಅಲ್ಲದೆ ಆ್ಯಪ್ ಬಳಕೆದಾರರಿಗೆ ರೋಗ ಲಕ್ಷಣ ಅರ್ಥ ಮಾಡಿಕೊಳ್ಳಲು ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡುತ್ತದೆ. ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ಆ್ಯಪ್ ಮೂಲಕ ಅಪ್ ಡೇಟ್ ಮಾಹಿತಿ ನೀಡುವ ಕೆಲಸ ಮಾಡುತ್ತದೆ.
ಆ್ಯಪ್ ಬಳಕೆ ಮಾರ್ಗದರ್ಶಿ: ಆರೋಗ್ಯ ಸೇತು ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ನೀವು ನಿಮ್ಮ ಭಾಷೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಹೆಸರು, ವಯಸ್ಸು ಮತ್ತು ಲಿಂಗದ ವಿವರಗಳನ್ನು ಸಲ್ಲಿಸುವ ಅಗತ್ಯವಿರುವ ವಿಭಾಗವನ್ನು ನೀವು ಬಿಟ್ಟುಬಿಡಬಹುದು. ನಿಮ್ಮ ಡೇಟಾವನ್ನು ಕೇಂದ್ರ ಸರಕಾರದೊಂದಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ಯಾವುದೇ ಸಮಯದಲ್ಲಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಈ ಅಪ್ಲಿಕೇಶನ್ ಸಾರ್ವಜನಿಕರಿಗೆ ಬಹಿರಂಗಪಡಿಸುವುದಿಲ್ಲ. ಅಪ್ಲಿಕೇಶನ್ದಲ್ಲಿ ತೋರಿಸುವ ಬಣ್ಣಗಳಾದ ಹಸಿರ (ಸುರಕ್ಷಿತ), ಹಳದಿ (ಹೆಚ್ಚಿನ ಅಪಾಯ) ಎಂಬ ಸಂಕೇತದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ