ಎನ್.ಆರ್.ಸಿ.ಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಬೊಮ್ಮಾಯಿ ಸ್ಪಷ್ಟನೆ

Team Udayavani, Oct 22, 2019, 4:07 PM IST

ಬೆಂಗಳೂರು: ನಾಗರಿಕರ ರಾಷ್ಟ್ರೀಯ ನೋಂದಣಿ (NRC) ಪ್ರಕ್ರಿಯೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಸಚಿವ ಬೊಮ್ಮಾಯಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಎನ್.ಆರ್.ಸಿ. ನೀತಿಯನ್ನು ಭಾರತ ಸರ್ಕಾರ ನಿರ್ಧಾರ ಮಾಡುತ್ತೆ. ನಾವೀಗ ಸಧ್ಯಕ್ಕೆ ರಾಜ್ಯದಲ್ಲಿ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡುತ್ತಿದ್ದೇವೆ ಬಳಿಕ ಈ ಮಾಹಿತಿಯನ್ನು ಕೇಂದ್ರದ ಗೃಹ ಸಚಿವಾಲಯಕ್ಕೆ ಕಳಿಸಲಿದ್ದೇವೆ ಅಲ್ಲಿ ಕೇಂದ್ರ ಗೃಹ ಸಚಿವರು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಸಚಿವ ಬೊಮ್ಮಾಯಿ ಅವರು ಮಾಹಿತಿ ನೀಡಿದರು.

ಡಿಟೆನ್ಷನ್ ಸೆಂಟರ್ ಬೇರೆಯದ್ದೇ ವಿಚಾರವಾಗಿದೆ. ವಿದೇಶಿ ಪ್ರಜೆಗಳಲ್ಲಿ ಯಾರ ಪಾಸ್ ಪೋರ್ಟ್ ಅವಧಿ ಮುಗಿದ ಬಳಿಕವೂ ಇಲ್ಲಿ ಇರುತ್ತಾರೋ, ಮತ್ತು ಸೂಕ್ತ ದಾಖಲಾತಿಗಳಿಲ್ಲದೆ ಉಳಿದುಕೊಳ್ಳುವವರನ್ನು ಗುರುತಿಸಿ ಅವರನ್ನು ಡಿಟೆನ್ಷನ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಬಳಿಕ ಅವರನ್ನು ದೆಹಲಿ ರಾಯಭಾರ ಕಛೇರಿಗೆ ಕಳುಹಿಸಲಾಗುತ್ತದೆ ಮತ್ತು ಅಲ್ಲಿಂದ ಅವರನ್ನು ಅವರ ದೇಶಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂಬ ಮಾಹಿತಿಯನ್ನು ಸಚಿವ ಬೊಮ್ಮಾಯಿ ಅವರು ನೀಡಿದರು.

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಪೋಟ ಪ್ರಕರಣ ತನಿಖೆ ಪ್ರಗತಿಯಲ್ಲಿ
ಈ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಆಂದ್ರ ಪ್ರದೇಶ ಹಾಗೂ ಮಹಾರಾಷ್ಟ್ರ ಪೋಲಿಸ್ ಜೊತೆಗೆ ನಮ್ಮ ಪೊಲೀಸರು ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯನ್ನು ಗೃಹ ಸಚಿವರು ನೀಡಿದರು. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದೂ ಸಚಿವ ಬೊಮ್ಮಾಯಿ ಅವರು ಹೇಳಿದರು. ಆದರೆ ತನಿಖೆ ಪೂರ್ಣಗೊಳ್ಳುವವರೆಗೆ ಯಾವ ಮಾಹಿತಿಯನ್ನೂ ಬಹಿರಂಗಪಡಿಸುವುದಿಲ್ಲ ಎಂದು ಗೃಹ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ರಚನೆಗೆ ನೆರವಾದರೆಂಬ ಕಾರಣರಾದ ಅನರ್ಹ ಶಾಸಕರ ಪೈಕಿ 13 ಮಂದಿಗೆ ಬಿಜೆಪಿಯಿಂದ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ...

  • ಡಿ.5ರಂದು ನಡೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಚುರುಕುಗೊಂಡಿದೆ. ಇದೇ ವೇಳೆ, ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪದ...

  • ಚಿಕ್ಕಬಳ್ಳಾಪುರ: ಉಪ ಚುನಾವಣೆ ಘೋಷಣೆಯಾದ ಬಳಿಕ ಸುಧಾಕರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌...

  • ಬೆಂಗಳೂರು: "ನಾಟಕ ಕಂಪನಿ ಆರ್ಥಿಕ ನಷ್ಟದಲ್ಲಿದ್ದಾಗ ಸಾಲ ಕೊಟ್ಟವರು ನಾನು ತಲೆ ಮರೆಸಿಕೊಳ್ಳುತ್ತೇನೆ ಅಂದುಕೊಂಡು ನನ್ನ ಎರಡೂ ತೋಳು ಗಳಿಗೆ ಹಗ್ಗ ಕಟ್ಟಿ ಕತ್ತಲೆಯ...

  • ಶಿವಮೊಗ್ಗ: ಬಿಜೆಪಿ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಸಂಕಷ್ಟ ಎದುರಾಗಲ್ಲ. ಉಪ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲಲಿದ್ದೇವೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು....

ಹೊಸ ಸೇರ್ಪಡೆ

  • ಅರಂತೋಡ: ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ. ಅದೆಷ್ಟೋ ಆಕಸ್ಮಿಕ ತಿರುವುಗಳು ಘಟಿಸುತ್ತವೆ. ಆದರೂ ಎದೆಗುಂದದೆ ಸಾಧನೆ ಮಾಡುವವರಿದ್ದಾರೆ. ಒಂದು ಕಾಲು ಹಾಗೂ...

  • ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾಜನತೆ ಅಭೂತಪೂರ್ವ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೊರಿಸಿದ್ದಾರೆ. ಜನತೆಯ...

  • ನಿಶ್ಮಿತಾ, ನಿನ್ನನ್ನು ತುಂಬಾ ಎಣಿಸ್ತಾ ಇದ್ದೇನೆ. ಯಾವಾಗ ಬರ್ತೀಯಾ?'' ""ಯಾವ ಪುರುಷಾರ್ಥಕ್ಕೆ ಬರ್ಬೇಕು ನಾನು?'' ""ಹಾಗಂದ್ರೆ ಹೇಗೆ ಮಗಾ? ನಂಗೆ ನಿನ್ನನ್ನು ಮತ್ತು...

  • ಪುತ್ತೂರು: ಪ್ರತಿಯೊಬ್ಬನ ಜೀವನದಲ್ಲಿ ಆತ ಅರಿತಿರುವ ಸಾಮಾನ್ಯ ಜ್ಞಾನ ಮುಖ್ಯವೆನಿಸುತ್ತದೆ. ಏಕೆಂದರೆ ಬದುಕಿಗೆ ಅನ್ನ ನೀಡುವುದು ಸಾಮಾನ್ಯ ಜ್ಞಾನ ಎಂದು ಮಾಜಿ...

  • ಪಣಜಿ: ಗೋವಾದ ಪೊಲೀಸ್‌ ಮಹಾ ನಿರ್ದೇಶಕ(ಡಿಜಿಪಿ) ಪ್ರಣಬ್‌ ನಂದಾ(57) ಅವರು ಕರ್ತವ್ಯಕ್ಕೆಂದು ದಿಲ್ಲಿಗೆ ತೆರಳಿದ್ದಾಗ ಹೃದಯಾಘಾತದಿಂದ ಅಸುನೀಗಿದ್ದಾರೆ. ಶುಕ್ರವಾರ...