ಒನ್‌ಪ್ಲಸ್‌ನಿಂದ ಒಂದು ಮತ್ತಿನ್ನೊಂದು!


Team Udayavani, May 25, 2020, 4:59 AM IST

one-plus-8

ಒನ್‌ಪ್ಲಸ್‌, ಇಂದು ಪ್ರೀಮಿಯಂ ದರ್ಜೆಯ ಫೋನ್‌ ಗಳಿಗೆ ಹೆಸರಾದ ಬ್ರಾಂಡ್‌ ಆಗಿದೆ. ಲಕ್ಷ ರೂ. ಬೆಲೆಯ ಮೊಬೈಲ್‌ಗ‌ಳಲ್ಲಿ ನೀಡುವ ತಾಂತ್ರಿಕ ಗುಣಮಟ್ಟವನ್ನು 50 ಸಾವಿರ ರೂ. ದರಕ್ಕೆ ನೀಡುತ್ತಿರುವುದು ಒನ್‌ ಪ್ಲಸ್‌ನ ಹೆಗ್ಗಳಿಕೆ.  ಒನ್‌ಪ್ಲಸ್‌, ಇದೀಗ 8 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಅವು ಮೇ 29ರಿಂದ ಲಭ್ಯವಾಗಲಿವೆ.

ಅತ್ಯುನ್ನತ ದರ್ಜೆಯ (ಫ್ಯಾಗ್‌ಶಿಪ್‌) ಫೋನ್‌ಗಳಲ್ಲಿ, ಒನ್‌ಪ್ಲಸ್‌ ಕಂಪನಿ ತನ್ನದೇ ಆದ ಸ್ಥಾನ ಗಳಿಸಿದೆ. 80 ಸಾವಿರದಿಂದ 1 ಲಕ್ಷ ರೂ. ವರೆಗೂ ಇದ್ದ ಫ್ಲ್ಯಾಗ್‌ಶಿಪ್‌ ಮೊಬೈಲ್‌ ಗಳಲ್ಲಿರುವ ತಾಂತ್ರಿಕತೆಯನ್ನು 20 ಸಾವಿರಕ್ಕೆ ನೀಡಲು  ಆರಂಭಿಸಿದ್ದು ಒನ್‌ಪ್ಲಸ್‌. ಈಗ, ಸರಾಸರಿ 50 ಸಾವಿರಕ್ಕೆ ಅದರ ದರ ಬಂದು ನಿಂತಿದೆ. ಅತ್ಯುನ್ನತ ದರ್ಜೆಯ ಫೋನ್‌ಗಳನ್ನು, ಕಡಿಮೆ ದರಕ್ಕೆ ನೀಡುತ್ತಿರುವ ಹೆಗ್ಗಳಿಕೆ ಈಗಲೂ ಅದಕ್ಕಿದೆ. ಒನ್‌ಪ್ಲಸ್‌ನ ಅಭಿಮಾನಿಗಳು ಕಾತುರದಿಂದ  ಕಾಯುತ್ತಿದ್ದ ಒನ್‌ಪ್ಲಸ್‌ 8 ಪ್ರೊ ಮತ್ತು ಒನ್‌ಪ್ಲಸ್‌ 8 ಮಾದರಿಗಳು ಬಿಡುಗಡೆಯಾಗಿದ್ದು, ಮೇ 29ರಿಂದ ಅಮೆಜಾನ್‌.  ಇನ್‌ ಮತ್ತು ಒನ್‌ಪ್ಲಸ್‌ ಸ್ಟೋರ್‌ಗಳಲ್ಲಿ ಲಭ್ಯವಾಗಲಿವೆ. ಈಗಾಗಲೇ ಮುಂಗಡ ಬುಕ್ಕಿಂಗ್‌ ಆರಂಭವಾಗಿದೆ.

ಒನ್‌ಪ್ಲಸ್‌ 8 ಪ್ರೊ: ಇದು ಎರಡು ಆವೃತ್ತಿಗಳಲ್ಲಿ ಲಭ್ಯ. 8ಜಿಬಿ ರ್ಯಾಮ್‌ + 128 ಜಿಬಿ ಅಂತರಿಕ ಸಂಗ್ರಹ (55,000 ರೂ.), ಮತ್ತು 12 ಜಿಬಿ+256 ಜಿಬಿ (60,000 ರೂ.).

ಪರದೆ ಮತ್ತು ಪ್ರೊಸೆಸರ್‌: ಇದರಲ್ಲಿ ಸ್ನಾಪ್‌ ಡ್ರ್ಯಾಗನ್‌ನ ನೂತನ 865 ಅತ್ಯುನ್ನತ ದರ್ಜೆಯ ಪ್ರೊಸೆಸರ್‌ ಇದೆ. ಇದರಲ್ಲಿ ಮೊಬೈಲ್‌ನ ಕಾರ್ಯಾಚರಣೆ ಅತ್ಯಂತ ವೇಗವಾಗಿರುತ್ತದೆ. ಇದು ಕ್ಯೂಎಚ್‌ಡಿ ಪ್ಲಸ್‌ (1440×3168ಪಿಕ್ಸಲ್‌ಗ‌ಳು, 513 ಪಿಪಿಐ) 6.78 ಇಂಚಿನ ಅಮೋಲೆಡ್‌ ಡಿಸ್ಪ್ಲೇ ಹೊಂದಿದೆ. ಪರದೆಯು 120 ಹಟ್ಜ್ ರಿಫ್ರೆಶ್‌ ರೇಟ್‌ ಹೊಂದಿದೆ. ಅಂಡ್ರಾಯ್ಡ್‌ 10, ಆಕ್ಸಿಜನ್‌ ಓಎಸ್‌ ಇದೆ. ಪರದೆಯ ಮೇಲೆಯೇ ಬೆರಳಚ್ಚು ಸ್ಕ್ಯಾನರ್‌ ಇದೆ. ಪರದೆಯ ಎಡ ಮೂಲೆಯಲ್ಲಿ ಸೆಲ್ಫೀಗಾಗಿ ಪಂಚ್‌ ಹೋಲ್‌ ಕ್ಯಾಮೆರಾ ಇದೆ. 5ಜಿ ನೆಟ್ವರ್ಕ್‌ ಭಾರತಕ್ಕೆ ಬಂದಾಗ, ಈ ಫೋನ್‌ನಲ್ಲಿ ಆ ಸಿಮ್‌ ಹಾಕಿಕೊಳ್ಳಬಹುದಾಗಿದೆ.

ಕ್ಯಾಮೆರಾ: ಈ ಫೋನ್‌, ಹಿಂಬದಿಯಲ್ಲಿ ನಾಲ್ಕು ಲೆನ್ಸ್ಗಳ ಕ್ಯಾಮೆರಾ ಹೊಂದಿದೆ. ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸಲ್‌ ಇದ್ದು, ಸೋನಿ ಐಎಂಎಕ್ಸ್ 689 ಸೆನ್ಸರ್‌ ಹೊಂದಿದೆ. 48 ಮೆಗಾಪಿಕ್ಸಲ್‌ ವೈಡ್‌ ಅಂಗಲ್‌ ಲೆನ್ಸ್, 8 ಮೆಗಾಪಿಕ್ಸಲ್‌  ಟೆಲಿಫೋಟೋ ಲೆನ್ಸ್ ಹಾಗೂ 5 ಮೆ.ಪಿ. ಕಲರ್‌ μಲ್ಟರ್‌ ಲೆನ್ಸ್ ಹೊಂದಿದೆ. 4ಕೆ ವಿಡಿಯೋ ರೆಕಾರ್ಡಿಂಗ್‌ ಹಾಗೂ ಸೂಪರ್‌ ಸ್ಲೋ ಮೋಷನ್‌ ವಿಡಿಯೊ ತೆಗೆಯಬಹುದಾಗಿದೆ. ಸೆಲ್ಫೀ ಕ್ಯಾಮೆರಾ 16 ಮೆಗಾ ಪಿಕ್ಸಲ್‌ ಇದ್ದು, ಸೋನಿ ಐಎಂಎಕ್ಸ್  471 ಸೆನ್ಸರ್‌ ಹೊಂದಿದೆ.

ವೈರ್‌ಲೆಸ್‌ ಚಾರ್ಜರ್‌: ಈ ಮೊಬೈಲ್‌ 4510 ಎಂಎಎಚ್‌ ಬ್ಯಾಟರಿ ಹೊಂದಿದೆ. ವೈರ್‌ಲೆಸ್‌ ಚಾರ್ಜರ್‌ ಸೌಲಭ್ಯ ಹೊಂದಿರು ವುದು ಇದರ ವಿಶೇಷ. ಇದು, ಶೇ.50ರಷ್ಟು ಬ್ಯಾಟರಿಯನ್ನು 30 ನಿಮಿಷದಲ್ಲಿ ಚಾರ್ಜ್‌ ಮಾಡುತ್ತದೆ. ಅದಲ್ಲದೇ  ಮಾಮೂಲಿ ವೈರ್‌ ಸಹಿತ ಚಾರ್ಜರ್‌ ಸಹ ಇದೆ. ಇದು ಶೇ.50ರಷ್ಟು ಚಾರ್ಜನ್ನು 23 ನಿಮಿಷದಲ್ಲಿ ಮಾಡುತ್ತದೆ. ಆದರೆ, ವೈರ್‌ಲೆಸ್‌ ಚಾರ್ಜರ್‌ ಅನ್ನು, ಗ್ರಾಹಕರು ಪ್ರತ್ಯೇಕವಾಗಿ ಖರೀದಿಸಬೇಕು! ಆಡಿಯೊ ಪ್ರಿಯ ರಿಗಾಗಿ, ಮೊಬೈಲ್‌ನಲ್ಲಿ  ಎರಡು ಸ್ಪೀಕರ್‌ ಇವೆ. ಡಾಲ್ಬಿ ಅಟೂಸ್‌ ಸೌಂಡ್‌ ಇದೆ.

ಒನ್‌ ಪ್ಲಸ್‌ 8: ಇದು 8 ಪ್ರೊಗಿಂತ ಸ್ವಲ್ಪ ಕಡಿಮೆ ವಿಶೇಷಣಗಳನ್ನು ಹೊಂದಿರುವ ಮಾಡೆಲ್, ಮೂರು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. 6 ಜಿಬಿ + 128 ಜಿಬಿ (42000 ರೂ.), 8 ಜಿಬಿ+ 128 ಜಿಬಿ (45000 ರೂ.) ಮತ್ತು 12 ಜಿಬಿ+ 256 ಜಿಬಿ. (50,000 ರೂ.).

ಕ್ಯಾಮೆರಾ: ಈ ಫೋನ್‌ನಲ್ಲಿಯೂ ಸ್ನಾಪ್‌ ಡ್ರ್ಯಾಗನ್‌ನ 865 ಹೊಚ್ಚ ಹೊಸದಾದ ಫ್ಲಾಗ್‌ಶಿಪ್‌ ಪ್ರೊಸೆಸರ್‌ ಇದೆ. ಈ ಮೊಬೈಲ್, ಹಿಂಬದಿಯಲ್ಲಿ ಮೂರು ಕ್ಯಾಮೆರಾ ಹೊಂದಿದೆ. 48 ಮೆ.ಪಿ. ಸೋನಿ ಐಎಂಎಕ್ಸ್ 586 ಸೆನ್ಸರ್‌ ಇರುವ  ಮುಖ್ಯ ಕ್ಯಾಮೆರಾ, 16 ಮೆ.ಪಿ. ವೈಡ್‌ ಆ್ಯಂಗಲ್ಸ… ಲೆನ್ಸ್ ಮತ್ತು 2 ಮೆ.ಪಿ. ಸೂಕ್ಷ್ಮ ಲೆನ್ಸ್ಗಳ ಉಪಕ್ಯಾಮೆರಾ ಹೊಂದಿದೆ. ಸೆಲ್ಫೀಗೆ 16 ಮೆಗಾ ಪಿಕ್ಸಲ್‌ 1 ಸೋನಿ ಐಎಂಎಕ್ಸ್ 471 ಲೆನ್ಸ್ ಇದೆ. ಅಂಡ್ರಾಯ್ಡ್‌ 10 ಇದ್ದು, ಇದಕ್ಕೆ ಒನ್‌ಪ್ಲಸ್‌ನ ಪ್ರಸಿದಟಛಿ ಆಕ್ಸಿಜನ್‌ ಕಾರ್ಯಾಚರಣೆ ವ್ಯವಸ್ಥೆಯನ್ನು ಬೆಸೆಯಲಾಗಿದೆ.

ಪರದೆ: ಇದು 6.55 ಇಂಚಿನ ಅಮೋಲೆಡ್‌ ಫ‌ುಲ್‌ ಎಚ್‌ಡಿ ಪ್ಲಸ್‌ ಪರದೆ ಹೊಂದಿದೆ. 90 ಹಟ್ಜ್ ರಿಫ್ರೆಶ್‌ ರೇಟ್‌ ಹೊಂದಿದೆ. ಪರದೆಯ  ಮಧ್ಯದಲ್ಲಿ, ಮುಂಬದಿ ಕ್ಯಾಮೆರಾ ಲೆನ್ಸ್ ಇರುವ ಪಂಚ್‌ ಹೋಲ್‌ ಡಿಸ್‌ಪ್ಲೇ ಹೊಂದಿದೆ. ಪರದೆಯಲ್ಲೇ  ಬೆರಳಚ್ಚು ಸ್ಕ್ಯಾನರ್‌ ಸಹ ಇದೆ. ಬ್ಯಾಟರಿ: 8 ಮತ್ತು 8 ಪ್ರೊ ಎರಡೂ ಒನ್‌ಪ್ಲಸ್‌ನ ಮೊದಲ 5ಜಿ ನೆಟ್ವರ್ಕ್‌ ಫೋನ್‌ ಗಳು ಎಂಬುದು ಗಮನಾರ್ಹ. ಆದರೆ, ಭಾರತದಲ್ಲಿ ಇನ್ನೂ 5ಜಿ ನೆಟ್ವರ್ಕ್‌ ಲಭ್ಯವಿಲ್ಲ. ಇದರ ಬ್ಯಾಟರಿ ಎಷ್ಟು ಎಂಬ ಪ್ರಶ್ನೆ ಬಂದೇ ಬರುತ್ತದೆ. ಇದು 4300 ಎಂಎಎಚ್‌ ಬ್ಯಾಟರಿ ಹೊಂದಿದ್ದು, ಟೈಪ್‌ ಸಿ ಚಾರ್ಜಿಂಗ್‌ ಫೋರ್ಟ್‌ ಹೊಂದಿದೆ. ಇದಕ್ಕೆ ಒನ್‌ಪ್ಲಸ್‌ನ ವಾರ್ಪ್‌ ಚಾರ್ಜರ್‌ ಇದೆ. ಇದು ಕೇವಲ 22 ನಿಮಿಷ ದಲ್ಲಿ, ಶೇ. 50ರಷ್ಟು ಬ್ಯಾಟರಿ ಚಾರ್ಜ್‌  ಮಾಡುವ ಸಾಮರ್ಥ್ಯ ಹೊಂದಿದೆ.

* ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.