
ಹಿರಿಯ ವರ್ತಕ ಪಿ.ರಘುವೀರ್ ಪ್ರಭು ನಿಧನ
Team Udayavani, Feb 5, 2023, 1:37 PM IST

ತೀರ್ಥಹಳ್ಳಿ: ಪಟ್ಟಣದ ಗೌಡ ಸಾರಸ್ವತ ಸಮಾಜದ ಪ್ರಮುಖ, ಹಿರಿಯ ವರ್ತಕ ಪಿ. ರಘುವೀರ್ ಪ್ರಭು (78 ವರ್ಷ) ಶನಿವಾರ ತಡರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು ಎಂದು ತಿಳಿದು ಬಂದಿದೆ.
ಇವರು ತಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳ ಮೂಲಕ ತಾಲೂಕಿನ ಚಿರಪರಿಚಿತ ವ್ಯಕ್ತಿಯಾಗಿದ್ದವರು.
ರಥಬೀದಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ನಿರ್ಮಾಣದ ಮೂಲ ಪ್ರೇರಕರಲ್ಲೊಬ್ಬರಾಗಿದ್ದರು. ತಮ್ಮ ವ್ಯವಹಾರಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆ ದಾರ್ಮಿಕ ಕಾರ್ಯಗಳಿಗೂ ಕೊಟ್ಟಿರುವುದು ಗಮನಾರ್ಹ.ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
