CONNECT WITH US  

ಪಂಚರ್

ಹಿಂದೂ ಮಹಾಸಭಾ ವಿರುದ್ಧ ಲವ್‌ ಲೆಟರ್‌ ಅಭಿಯಾನ!
-ಪ್ರೀತಿಯನ್ನು ಕೂಡ ಪ್ರತಿಭಟಿಸಿ ಪಡ್ಕೊಬೇಕಾಯ್ತೇ!
ಮಹಿಳೆಯರ ಸೀಟಲ್ಲಿ ಕೂತ್ರೆ ಅಲಾರಾಂ!
-ರಮಾನ ಸೀಟಲ್ಲಿ ರಾಮ ಕೂತ್ರೆ ಅಲಾರಾಮಾ?
ತೊಗಾಡಿಯಾ ನಿಷೇಧಕ್ಕೆ ಬಿಜೆಪಿ ಕಿಡಿ.
-ನಿಷೇಧಿಸೋದು ಮುಕ್ತ ರಾಜಕೀಯ ಪಕ್ಷದ ಹೊಸ ವರಸೆ ಇರಬಹುದೇ!
ಫಿಟ್ನೆಸ್‌ ಪರೀಕ್ಷೆಯಲ್ಲಿ ಇಶಾಂತ್‌ ವಿಫ‌ಲ: ವಿಶ್ವಕಪ್‌ನಿಂದ ಔಟ್‌.
-ಹೊರಹೋಗಿ ಮರ್ಯಾದೆ ಉಳಿಸಿಕೊಂಡಿರಬಹುದಾ?
ಆಪ್‌ ಗೆಲ್ಲಿಸಲು ದಿಲ್ಲಿಗೆ ದೌಡಾಯಿಸಿದ ಕನ್ನಡಿಗರು.
- ಇವರು ಹೋಗದೇ ಇದ್ರೆ ಗೆಲ್ತಿದ್ರೋ ಏನೋ!
ಕೇಜ್ರಿ ಯೋಗ-ಧ್ಯಾನ, ಬೇಡಿ ಲಟ್ಟಿಸಿದರು ರೋಟಿ!
- ಚುನಾವಣೆ ಮುಗಿಯೋ ತನಕ ಲಟ್ಟಿಸ್ತಾರೆ ರೋಟಿ, ಆಮೇಲೆ ಎಬ್ಬಿಸ್ತಾರೆ ಬೋಟಿ!
ಹಾರ್ವರ್ಡ್‌ ವಿವಿಯಲ್ಲಿ ಫೊಫೆಸರ್‌, ವಿದ್ಯಾರ್ಥಿಗಳ ಸೆಕ್ಸ್‌ಗೆ ನಿಷೇಧ!
-"ಕಲಿ'ಗಾಲ!
ಬಾಲ್ಯದ ಗೆಳೆಯನ ಜೊತೆ ಗಾಯಕಿ ಶ್ರೇಯಾ ಘೋಷಾಲ್‌ ವಿವಾಹ.
- ಅರಳುತಿರು ಬಾಲ್ಯದ ಗೆಳೆಯಾ... ಅಂತ ಹಾಡಬಹುದೇ ಹುಡುಗಿ!
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೋರ್‌ವೆಲ್‌ ಕೊರೆಯುವುದು ನಿಷೇಧ: ಸಚಿವ
- ಭಾಷಣ ಕೊರೆಯುವುದನ್ನೂ ನಿಷೇಧಿಸಿ ಅಂತ ಆ ಭಾಗದ ಜನರ ಮೊರೆ!
ಬೆಂಗಳೂರಿನ ಕಬ್ಬನ್‌ ಪಾರ್ಕಲ್ಲಿ ಪೋಲೀಸ್‌ ಔಟ್‌ ಪೋಸ್ಟು.
- ಪ್ರೇಮಿಗಳ ಕೊನೆಯ ನಿಲ್ದಾಣವೂ ಬಂದಾಯ್ತು!
ಎಪಿಎಲ್‌ ಕಾರ್ಡಿಗೂ ಅಕ್ಕಿ ಭಾಗ್ಯ.
- ಐಪಿಎಲ್‌ ಆಟಗಾರರಿಗೆ ಕೊಡೋದೊಂದು ಬಾಕಿ ಇದೆ ಸಾರ್‌!
ಜೈಲಲ್ಲಿರುವ ಮಾಜಿ ಸಚಿವ ಮದನ್‌ ಮಿತ್ರಾಗೆ ನೀರಲ್ಲಿ ಮದ್ಯ ಮಿಕ್ಸ್‌ ಮಾಡಿ ಪೂರೈಕೆ!
- ಅವರು ನಿಜವಾದ ಅರ್ಥದಲ್ಲಿ ಬಿಹೈಂಡ್‌ ದಿ ಬಾರ್‌! ಕಂಬಿ ಕರೆಕ್ಟಾಗಿ ಎಣಿಸೋದು ಕಷ್ಟ ಆಗಿರಬೇಕು ಮಿತ್ರರಿಗೆ!
ಕಾಂಗ್ರೆಸ್‌ ವಿರುದ್ಧ ಜಯಂತಿಯನ್ನು ಛೂ ಬಿಟ್ಟಿರೋದು ಮೋದಿ: ರಾಹುಲ್‌ ಗಾಂಧಿ.
- ಛೇಛೇ... ಥೇಟ್‌ ಬಿಜೆಪಿ ನಾಯಕರ ಥರ ಮಾತಾಡೋದು ಕಲಿತು ಬಿಟ್ರಲ್ಲಪ್ಪಾ!
ಆಪ್‌ ಸೇರಿ ತಪ್ಪು ಮಾಡಿದೆವು. ಕಿವಿ ಹಿಡಿದು ಕ್ಷಮೆಕೋರಿದ ನಾಲ್ವರು ಆಪ್‌ ನಾಯಕರು
- ಇದು ಆಪ್‌ ಅಲ್ಲ, ಪಾಪ್‌ ಅಂತ ಅನ್ನಿಸಿರಬೇಕು!
ಇಂಟರ್‌ನೆಟ್‌ ಚಟದಿಂದ ಪಾರಾಗಲು ಕೈಯನ್ನೇ ಕೊಯ್ದುಕೊಂಡ!
- ಕೈ ಲಾಸ್‌!
ಜಮೀರ್‌ ಬಗ್ಗೆ ಯಾಕೆ ಕೇಳ್ತೀರಾ, ಬಿಟಾಕ್ರೀ: ದೇವೇಗೌಡ
- ಅವ್ರೂ ಜೆಡಿಎಸ್‌ ಬಿಟಾಕೋ ಮಾತಾಡಿದ್ರಲ್ಲ ಗೌಡ್ರೇ?
ಇಡೀ ರೈಲನ್ನೇ ಬಾಡಿಗೆಗೆ ಕೊಡುತ್ತಂತೆ ರೈಲ್ವೇಸ್‌.
- ರೈಲು ಬಿಡೋಕೆ ಅವಕಾಶವಿಲ್ವಂತೆ!
ರಾಜ್ಯದಲ್ಲಿ ಮತ್ತೆ ಲಾಟರಿ ಆರಂಭಕ್ಕೆ ಶಿಫಾರಸು.
- ಸರ್ಕಾರಕ್ಕೆ ಲಾಟರಿ, ಜನರ ಜೇಬಿಗೆ ಕತ್ತರಿ.
ತವರಿನ ಸಮ್ಮೇಳನಕ್ಕೆ ಕೊನೆಗೂ ಬಂದ ದೇವೇಗೌಡ
- ಅವ್ರು ನಿವೃತ್ತಿ ಮಾತಾಡಿದ್ದು ಚುನಾವಣೆಗಂತೆ, ಸಮ್ಮೇಳನಕ್ಕಲ್ಲ!

Pages

Back to Top