CONNECT WITH US  

ಎ.10-20: ಪುತ್ತೂರು ಜಾತ್ರ

ಪುತ್ತೂರು: ಮಹಾಲಿಂಗೇಶ್ವರ ದೇಗುಲದ ವರ್ಷಾವಧಿ ಜಾತ್ರೆ ಎ. 10ರಿಂದ 20ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. 

ಕಳೆದ ಬಾರಿಯಂತೆ ಈ ಬಾರಿಯು ದೇಗುಲದಲ್ಲಿ ಜಾತ್ರೆ ಆರಂಭದ ದಿನದಿಂದ ಮಧ್ಯಾಹ ಅನ್ನಸಂತರ್ಪಣೆ ನಡೆಯ ಲಿದೆ. ಅನ್ನಸಂತರ್ಪಣೆಗೆ ಕ್ಷೇತ್ರದ ವ್ಯಾಪ್ತಿಯ ಗ್ರಾಮ ಗ್ರಾಮಗಳಲ್ಲಿ ಹಸಿರುವಾಣಿ ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ನಡೆದಿದ್ದು,ಎ. 9ರಂದು ಪುತ್ತೂರಿನ ನಾಲ್ಕು ಕಡೆಯಿಂದ ಹೊರೆಕಾಣಿಕೆ ಸಮರ್ಪಣೆ ಕಾರ್ಯ ನಡೆಯಲಿದೆ.

ಲಕ್ಷಾಂತರ ಭಕ್ತರು ಸೇರುವ ಕಾರಣ ಸುವ್ಯವಸ್ಥೆಗಾಗಿ ಪೊಲೀಸ್‌ ಬಂದೋಬಸ್ತ್, ಸ್ವಯಂ ಸೇವಕರ ಜೋಡಣೆ ಮೊದಲಾದ ಪೂರ್ವಭಾವಿ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಸಿ.ಯು.ಪೂವಪ್ಪ ಹೇಳಿದ್ದಾರೆ.

ನಾಲ್ಕು ಕಡೆಗಳಿಂದ ಮೆರವಣಿಗೆ
ಎ. 9ರಂದು ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕಲ್ಲೇಗ ಕಲ್ಕುಡ ದೈವಸ್ಥಾನ, ಬಪ್ಪಳಿಗೆ ಸತ್ಯನಾರಾಯಣ ಕಟ್ಟೆ, ಬೊಳುವಾರು ಶ್ರೀಶಕ್ತಿ ಅಂಜನೇಯ ಮಂತ್ರಾಲಯ ಹಾಗೂ ದರ್ಬೆ ವೃತ್ತದಿಂದ ಅಂಚೆ ಕಚೇರಿ ರಸ್ತೆಯಾಗಿ ಮೆರವಣಿಗೆ ಸಾಗಿ, ದೇವಳಕ್ಕೆ ಸಮರ್ಪಿಸಲಾಗುವುದು ಎಂದು ಹೊರೆಕಾಣಿಕೆ ಸಮಿತಿ ಅಧ್ಯಕ್ಷ ರಾಜೇಶ್‌ ಬನ್ನೂರು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಸತೀಶ್‌ ನಾೖಕ್‌, ವರ್ತಕ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಜಗನ್ನಿವಾಸ್‌ ರಾವ್‌ ಉಪಸ್ಥಿತರಿದ್ದರು.

ಈಗಾಗಲೇ ಕ್ಷೇತ್ರದ 37 ಕಡೆಗಳಲ್ಲಿ ಸಭೆ ನಡೆದಿದೆ. ಅನ್ನದಾನಕ್ಕೆ ಅಕ್ಕಿ ನೀಡುವವರು ಸೋನಾಮಸೂರಿ ಟೈಗರ್‌ ಬ್ರಾಂಡ್‌ ಅಥವಾ ಬಾಲಾಜಿ ಅಕ್ಕಿ ನೀಡಬೇಕು ಎಂಬುವುದು ಸಮಿತಿಯ ಕೋರಿಕೆ.ಅನ್ನಸಂತರ್ಪಣೆಯ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯ ಸ್ವಯಂಸೇವಕರ ಅಗತ್ಯ ಇದೆ. ಭಾಗವಹಿಸುವ ಯುವಕ, ಯುವತಿ ಮಂಡಲ, ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರು ಮುಂಚಿತವಾಗಿ ಸಂಘ-ಸಂಸ್ಥೆಯ ಹೆಸರನ್ನು ದೇವಳದ ಕಚೇರಿಯಲ್ಲಿ ನೊಂದಾಯಿಸಬೇಕು ಎಂದು ಪ್ರಕಟನೆ ತಿಳಿಸಿದೆ.

ಉತ್ಸವದ ವಿವರ
ಎ. 10: ಬೆಳಗ್ಗೆ 10.30ರ ಮಿಥುನ ಲಗ್ನದಲ್ಲಿ ಧ್ವಜಾರೋಹಣ, ರಾತ್ರಿ ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು, ಕಾರ್ಜಾಲು, ಕಲ್ಲೇಗ, ಕರ್ಮಲ, ಕೊಂಬೆಟ್ಟು ಸವಾರಿ

ಎ.11ರಂದು ರಾತ್ರಿ ಉತ್ಸವ, ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ

ಎ.12ರಂದು ರಾತ್ರಿ ಉತ್ಸವ, ತೆಂಕಿಲ, ಏಳ್ನಾಡುಗುತ್ತು, ಬೈಪಾಸ್‌ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ

ಎ.13ರಂದು ರಾತ್ರಿ ಉತ್ಸವ, ಪೇಟೆ ಸವಾರಿ, ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರುಬೈಲ್‌ ಪೇಟೆ ಸವಾರಿ

ಎ.14 ರಂದು ರಾತ್ರಿ ಉತ್ಸವ, ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್‌ ಸವಾರಿ

ಎ.15ರಂದು ಸೌರಮಾನ ಯುಗಾದಿ, ಬೆಳಿಗ್ಗೆ ಉತ್ಸವ, ವಸಂತಕಟ್ಟೆಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ).

ಎ.16ರಂದು ರಾತ್ರಿ ಉತ್ಸವ, ಬಲಾ°ಡಿ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳ ಭೇಟಿ, ಪಾಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ

ಎ.17ರಂದು ಬೆಳಗ್ಗೆ ಉತ್ಸವ, ವಸಂತಕಟ್ಟೆಪೂಜೆ, ದರ್ಶನ ಬಲಿ, ರಾತ್ರಿ 7.30 ಗಂಟೆ ಅನಂತರ ಉತ್ಸವ, ಸಿಡಿಮದ್ದು (ಪುತ್ತೂರು ಬೆಡಿ) ಪ್ರದರ್ಶನ, ಬ್ರಹ್ಮರಥೋತ್ಸವ, ಬಂಗಾರ್‌ ಕಾಯರ್‌ಕಟ್ಟೆ ಸವಾರಿ, ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ

ಎ.18ರಂದು ಬೆಳಿಗ್ಗೆ ಬಾಗಿಲು ತೆಗೆಯುವ ಮುಹೂರ್ತ, ತುಲಾಭಾರ ಸೇವೆ, ಸಂಜೆ ಗಂಟೆ 3.30 ಕ್ಕೆ ವೀರಮಂಗಲ ಅವಭೃತ ಸ್ನಾನಕ್ಕೆ ಸವಾರಿ

ಎ.19ರಂದು ಬೆಳಿಗ್ಗೆ ಧ್ವಜಾವರೋಹಣ, ರಾತ್ರಿ ಚೂಣೊìàತ್ಸವ ವಸಂತ ಪೂಜೆ ಪ್ರಾರಂಭ, ಹುಲಿಭೂತ, ರಕ್ತೇಶ್ವರಿ ನೇಮ

ಎ.20 ರಂದು ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಞಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ

ಮೆ. 14 ಪುನರ್‌ ಪ್ರತಿಷ್ಠಾ ವಾರ್ಷಿಕ ಮಹೋತ್ಸವ.

ಎ.16 ಮತ್ತು 17ರಂದು ಹೆಚ್ಚಿನ ಭಕ್ತರ ಆಗಮನದ ಕಾರಣ 
ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ ಓಡಾಟ.

ಕಿಲ್ಲೆ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ

ಮಾಹಿತಿ ಕೊಠಡಿ, ಪ್ರಥಮ ಚಿಕಿತ್ಸಾ ಕೇಂದ್ರ, ಪೊಲೀಸ್‌ ಮತ್ತು ಅಗ್ನಿಶಾಮಕ ಸಿಬಂದಿಯಿಂದ ಭದ್ರತೆ

ಔಟ್‌ ಪೋಸ್ಟ್‌  ನಿರ್ಮಾಣ
ಶುಚಿತ್ವಕ್ಕೆ ನಗರಸಭೆಗೆ ಮನವಿ
5.95 ಸಾವಿರ ರೂ. ಸಿಡಿಮದ್ದು
ಪ್ರತಿದಿನ 5 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಅನ್ನದಾನ, ಮಧ್ಯಾಹ್ನ 12.30 ರಿಂದ ಅನ್ನದಾನ ಆರಂಭ.

Trending videos

Back to Top