CONNECT WITH US  

ಎಚ್‌ಐವಿ: ಔಷಧಿಗೆ ಪ್ರಯೋಗಾಲಯ

ಚಾಮರಾಜನಗರ: ಮಾರಕ ರೋಗ ಎಚ್‌ಐವಿ ಸೋಂಕು ತಡೆಗೆ ಔಷಧಿ ಕಂಡು ಹಿಡಿಯಲು ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪನೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಸ್‌.ಎ. ರಾಮ್‌ದಾಸ್‌ ತಿಳಿಸಿದರು.

ನಗರದ ಚೈತನ್ಯ ನೆಟ್‌ವರ್ಕ್‌ ಹಾಗೂ ಅನಂತ ಭಾರತ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನಡೆದ ಕ್ಯಾಂಡಲ್‌ ಲೈಟ್‌ ಸ್ಮರಣಾ ದಿನದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಚ್‌ಐವಿ ಔಷಧಿ ಇಲ್ಲದ ಮಾರಕ ರೋಗವಾಗಿದೆ. ತಮ್ಮದಲ್ಲದ ತಪ್ಪಿಗೆ ಮಕ್ಕಳೂ ಕೂಡ ಇದಕ್ಕೆ ತುತ್ತಾಗುತ್ತಿರುವುದು ವಿಷಾದನೀಯ ಎಂದರು.

ಎಚ್‌ಐವಿ ಸೋಂಕನ್ನು ತಡೆಯಲು ಹೊಸ ಸಂಶೋಧನೆಯನ್ನು ಕೈಗೊಳ್ಳಲಾಗುತ್ತಿದೆ. ಭಾರತೀಯ ವೈದ್ಯ ಪದ್ಧತಿಯೊಂದಿಗೆ ಅಮೆರಿಕಾ, ಜರ್ಮನ್‌ ಹಾಗೂ ಭಾರತದ ಮೂವರು ವಿಜಾnನಿಗಳು ಈ ಪ್ರಯೋಗಾಲಯದಲ್ಲಿ ಕಾರ್ಯಪ್ರವೃತ್ತರಾಗಿ ಎಚ್‌ಐವಿ ನಿವಾರಕ ಔಷಧಿ ಕಂಡು ಹಿಡಿಯಲು ಯತ್ನಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 30 ಲಕ್ಷ ಎಚ್‌ಐವಿ ಪೀಡಿತರಿದ್ದು, ಅದರಲ್ಲಿ 2 ಲಕ್ಷ ಮಕ್ಕಳಿದ್ದಾರೆ. ಕಳೆದ ವರ್ಷದಲ್ಲಿ 7 ಲಕ್ಷ ಜನರಿಗೆ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲಿ ಇಬ್ಬರಂತೆ ಒಟ್ಟು 87 ಮಕ್ಕಳನ್ನು ನಮ್ಮ ಟ್ರಸ್ಟ್‌ನಿಂದ ದತ್ತು ತೆಗೆದುಕೊಂಡು ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಾರಂಭದಲ್ಲಿ ಚಾಮರಾಜನಗರದಲ್ಲಿ ಐವರು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ ಅವರು, ಕರ್ನಾಟಕದ ನಂತರ ಭಾರತದಲ್ಲೇ ಈ ಅಭಿಯಾನವನ್ನು ಕೈಗೊಂಡು ಭಾರತವನ್ನು ಏಡ್ಸ್‌ ಮುಕ್ತ ರಾಷ್ಟ್ರವನ್ನಾಗಿಸುವುದೇ ನಮ್ಮ ಧ್ಯೇಯವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 3400 ಮಂದಿ ಎಚ್‌ಐವಿ ಸೋಂಕಿತರಿದ್ದು, ಇವರಲ್ಲಿ 2496 ಮಂದಿಗೆ ಎಚ್‌ಐವಿ ಪಾಸಿಟವ್‌ ಇರುವುದು ಧೃಡಪಟ್ಟಿದೆ ಎಂದು ತಿಳಿಸಿದರು.

ಇಂದಿನ ಯುವಜನತೆ ಹೆಚ್ಚು ಜಾಗೃತರಾಗಬೇಕಿದೆ. ಮದುವೆಯಾಗುವ ಮುನ್ನ ಪ್ರತಿಯೊಬ್ಬ ಯುವತಿ-ಂ‌ುುವತಿಯರು ಎಚ್‌ಐವಿ ಪರೀಕ್ಷೆ, ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಸೋಂಕಿತ ವ್ಯಕ್ತಿಯಿಂದ ಮತ್ತೂಬ್ಬ ಆರೋಗ್ಯವಂತ ವ್ಯಕ್ತಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಎಚ್‌ಐವಿ ಇರುವುದು ಧೃಢಪಟ್ಟು, ಇದು ಗೊತ್ತಿದ್ದೂ ಸುಳ್ಳು ಹೇಳಿ ಮದುವೆ ಮಾಡಿದರೆ ಅಂತಹವರ ಮೇಲೆ ಸೆಕ್ಷನ್‌ 302ರಡಿ ಪ್ರಕರಣ ದಾಖಲಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಎಚ್‌ಐವಿ ಸೋಂಕಿನಿಂದ ಮೃತಪಟ್ಟ ಪೀಡಿತರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಚೈತನ್ಯ ನೆಟ್‌ವರ್ಕ್‌ ಅಧ್ಯಕ್ಷ ಕರಿಯಪ್ಪ, ಭಾಗ್ಯಾ, ಶೇಖರ್‌, ರಾಘವ ಎಆರ್‌ಟಿ ವೈದ್ಯಾಧಿಕಾರಿ ಡಾ.ಜೈಪಾಲ್‌, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.

Trending videos

Back to Top