CONNECT WITH US  

​ಜಾತಕ ಫ‌ಲ

ಮೀನಾಕ್ಷಿ ಪಾಟೀಲ, ಬಿಜಾಪುರ
  ನನ್ನ ಮಗನ ಜಾತಕ ಕಳುಹಿಸುತ್ತಿದ್ದೇನೆ. ಮೊದನೆಯದಾಗಿ ಅನ್ಯಜಾತಿಯ ಹುಡುಗಿಯನ್ನು ಮದುವೆಯಾಗುವ ಹಂಬಲ ಹೊಂದಿದ್ದಾನೆ. ಕೆಲಸ ಸ್ಥಳದಲ್ಲಿ ಒತ್ತಡಗಳೂ ಇವೆ. ತಂದೆ ತಾಯಿಯ ಬಳಿ ಯಾವುದನ್ನೂ ಕೆಲಸಗಳ ಒತ್ತಡದ ವಿಷಯವಾಗಿ ತಿಳಿಸಿ ಹೇಳುವುದಿಲ್ಲ. ಮದುವೆಗೆ ಪರಿಹಾರಗಳೇನು?

 ಈಗ ನಿಮ್ಮ ಮಗನ ಜಾತಕ ಪರೀಕ್ಷಿಸಲಾಗಿ ಒದಗಿ ಬರುವ ವಧುವಿನಿಂದ ಒಳಿತಿಗೆ ದಾರಿ ಇದೆ. ಜಾತಿ ಬೇರೆಯದು ಎಂಬ ವಿಚಾರ ಅಲೌಕಿಕವಾದದ್ದು. ಅಲೌಕಿಕವಾದದ್ದು ಮದುವೆಯಿಂದ ಒಳಿತಿದೆ. ಜತೆಗಾರ್ತಿಯು ತುಸು ಸಿಟ್ಟಿನವಳಾಗಿದ್ದರೂ ಮನೆ ಬೆಳಗಲು ಅವಕಾಶಗಳಿವೆ. ಕುಜನು ಕರ್ಮ (ಕೆಲಸ) ಸ್ಥಾನದಲ್ಲಿದ್ದು ಒಳ್ಳೆಯ ಕಲೆಸ ಕೊಡಿಸುತ್ತಾನೆ. ಆದರೆ ಒತ್ತಡಗಳಿರುತ್ತವೆ. ಶನೈಶ್ಚರನೂ ಕುಜನೂ ಒತ್ತಡ ವಿಚಾರದಲ್ಲಿ ಕೆಲವು ಬಿಕ್ಕಳಿಕೆಗಳನ್ನು ಗಂಟು ಹಾಕಿದ್ದಾರೆ. ಆದರೆ ರಾಹು ಅದ್ಭುತವಾಗಿರುವುದರಿಂದ ನಿಭಾಯಿಸುವ ಲವಲವಿಕೆಗೆ ಕಾರಣನಾಗುತ್ತಾನೆ. ಮಾತಿನ ಶಕ್ತಿಯನ್ನು ಬೆಳೆಸಿಕೊಂಡರೆ ಗುರುಲಾಭಕ್ಕೆ ಕಾರಣನಾಗುತ್ತಾನೆ. ಜಾತಿಯ ಪ್ರಶ್ನೆಯನ್ನು ಮುಖ್ಯ ಮಾಡಿಕೊಳ್ಳುವುದನ್ನು ಅಥವಾ ಇಲ್ಲಾ ಎಂದು ನಿಶ್ಚಯ ಮಾಡುವುದನ್ನು ಅವನಿಗೇ ಬಿಡುತ್ತೇನೆ. ಶುಭಂ ಕರೋತಿ ಕಲ್ಯಾಣಂ/ಆರೋಗ್ಯಂ ಧನ ಸಂಪದಂ//ಶತ್ರು ಬುದ್ಧಿ ವಿನಾಶಾಯ /ದೀಪಂ ಜ್ಯೋತಿ ನಮೋಸ್ತುತಿ/ ಎಂದು ಪ್ರತಿ ದಿನ 21 ಬಾರಿ ಪಠಿಸಿ, ದೇವರೆದುರು ಜ್ಯೋತಿ ಬೆಳಗಲಿ. ದಾರಿ ಸಿಗುತ್ತದೆ. 

 ದಶರಥ ರಾಜ, ದಾವಣಗೆರೆ

  ನನ್ನ ಮಗಳಿಗೆ ಈಗ ಒಂದು ವರ್ಷದ ಹಿಂದೆ ಒಳ್ಳೆಯ ಹುಡುಗ ಎಂದು ತಿಳಿದ ಹುಡುಗನ ಜೊತೆ ಮದುವೆ ನಡೆಸಿದ. ಹುಡುಗ ಒಳ್ಳೆಯವನೇ. ಆದರೆ ಅತ್ತೆ ಸಾûಾತ್‌ ರಾಕ್ಷಸಿಯಾಗಿದ್ದಾರೆ. ನನ್ನ ಮಗಳನ್ನು ಘಾತ ಕನ್ಯೆ ಎಂದು ಜರೆದು ಮಾನಸಿಕ ತೊಳಲಾಟಗಳಿಗೆ ಕಾರಣಳಾಗಿದ್ದಾಳೆ. ತಾಯಿಯನ್ನು ಎದುರಿಸುವ ಧೈರ್ಯ ನಮ್ಮ ಅಳಿಯನಿಗಿಲ್ಲ. ಮಗಳ ಜೊತೆ ಸರಿ ಇದ್ದರೂ ಅವಳಿಗೆ ಮಾನಸಿಕ ಹಿಂಸೆ. ಪರಿಹಾರ ಏನು?

  ನಿಮ್ಮ ಮಗಳ ಜಾತಕದಲ್ಲಿ ಶನೈಶ್ಚರನು ಚಂದ್ರನ ಜೊತೆ ಪರಿವರ್ತನದಲ್ಲಿದ್ದು, ಲಗ್ನಾಧಿಪತಿ ಮತ್ತು ಕಳತ್ರ ಸ್ಥಾನಾಧಿಪತಿಗಳ ನಡುವೆ ಈ ಯೋಗ ( ಪರಿವರ್ತನ) ಸಂಭವಿಸಿದೆ. ಇದು ಒಳ್ಳೆಯದೇ ಹೌದು. ಆದರೆ ಸ್ವಂತ ತಾಯಿಯಿಂದಲಾಗಲೀ, ತಂದೆಯಿಂದಾಗಲೀ ಬಿರುಗಾಳಿ ಸೃಷ್ಟಿಗೊಳ್ಳಲು ಸಂಸಾರದ ಸಂದರ್ಭದಲ್ಲಿ ಸಾಧ್ಯ. ಹಲವು ಒಳಿತುಗಳಿಗೆ ದಾರಿಗಳಿರುವ ನಿಮ್ಮ ಹುಡುಗಿಯ ಜಾತಕದಲ್ಲಿ ಕಾಲವೇ ಉತ್ತರ ಹೇಳುವ, ಸಮಾಧಾನಕ್ಕೆ ಅವಕಾಶ ಒದಗಿಸುವ ದಿಕ್ಕುಗಳನ್ನು, ದಿಕ್ಕಿನಲ್ಲಿ ಬೆಳಕು ಇರುವಂತೆ ಅದೃಷ್ಟವನ್ನೂ ನಿರ್ಮಿಸುತ್ತದೆ. ಇಷ್ಟಾರ್ಥ ಸಿದ್ಧಿ ಕಾಲಭೈರವ ಅಷ್ಟೋತ್ತರ ನಾಮಾಳಿಗಳನ್ನು ದಿನಕ್ಕೆ ಮೂರು ಬಾರಿ ಓದಲಿ. ಒಳಿತು ಒದಗಿ ಶಾಂತಿಗೆ ಸಿದ್ಧಿ ಲಭ್ಯ. 

 ನಂದಕುಮಾರಿ, ಲಖನೌ

 ನನ್ನ ಮಗನಿಗೆ ಮದುವೆ ಮಾಡಲು ನಾವು ದಂಪತಿ ಹರ ಸಾಹಸ ನಡೆಸುತ್ತಿದ್ದೇವೆ. ಒಳ್ಳೆಯ ಕೆಲಸ, ಒಳ್ಳೆಯ ಅಭಿರುಚಿ, ದೇವರು, ನ್ಯಾಯ, ಅಭಿರುಚಿಗಳಿವೆ. ನಿಜಕ್ಕೂ ಉತ್ತಮ ಹುಡುಗ. ಜಾತಕ ಕಳಿಸಿದ್ದೇನೆ. ಮದುವೆಯ ಯೋಗ ಇದೆಯೇ?

ದುರ್ಭರತೆಗಳನ್ನು, ವಿಳಂಬಗಳನ್ನು ಒದಗಿಸುವ ದುಷ್ಟ ಕುಜನೇ ಖಳನಾಯಕ ಆದರೆ ಧನ ಯೋಗ ನಿರ್ಮಾಣ ಮಾಡಿದ್ದಾನೆ. ಉತ್ತಮ ಕೆಲಸ ಕೊಡಿಸಿದ್ದಾನೆ. ಭಾಗ್ಯಕ್ಕೆ ಕಾರಣನಾಗುವ ಶನಿಯನ್ನು ನೋಡಿ ತಾನೂ ಹಾಳಾಗಿ, ಶನಿಯನ್ನು ಹಾಳುಗೆಡವಿದ್ದಾನೆ. ಆದರೆ ಬುಧನ ಶಕ್ತಿಗೆ ಆಗಾಧವಾದ ಬಲವಿದೆ. ಬರುವ ಜನವರಿ ಅಂತ್ಯದ ಒಳಗೆ ವಿವಾಹಕ್ಕೆ ಉತ್ತಮ ಅವಕಾಶಗಳಿವೆ. ಸಾಡೆ ಸಾತಿ ದೋಷದಿಂದಲೂ ಹೊರಬಂದಿರುವ ಮಗನಿಗೆ ಪ್ರಸನ್ನವಾದದ್ದು ಈಗ ಸಿಗಬೇಕಾಗಿದೆ. ಗುರುವಿನ ಗೋಚಾರದ ನಡೆ ಭಾಗ್ಯವನ್ನು ಸಂವೇದಿಸುತ್ತಿದೆ. ಗಾಬರಿ ಬೇಡ. 

9741726230-


Trending videos

Back to Top