CONNECT WITH US  

ಗರಿ ಗರಿ ಜಿಲೇಬಿ ಮಾಡೋದು ಹೇಗೆ ಗೊತ್ತಾ?

ಬೇಕಾಗುವ ಸಾಮಗ್ರಿ:
ಅಡುಗೆ ಎಣ್ಣೆ, ಅರ್ಧ ಕಪ್‌ ಮಜ್ಜಿಗೆ, ಕಾಲು ಸ್ಪೂನ್‌ ಕೇಸರಿ, 1 ಸ್ಪೂನ್‌ ತುಪ್ಪ, 1 1/2 ಕಪ್‌ ಸಕ್ಕರೆ, 2 ಕಪ್‌ ಮೈದಾ
ವಿಧಾನ:
1. ಸ್ವಲ್ಪ ಮೈದಾಹಿಟ್ಟು ತೆಗೆದಿಟ್ಟು ಉಳಿದಿದ್ದಕ್ಕೆ ಮಜ್ಜಿಗೆ ಹಾಕಿ ಕಲಸಿಟ್ಟು ಒಂದು ರಾತ್ರಿ ಹಾಗೆ ಬಿಡಿ.
2. ಮರುದಿನ ಈ ಮಿಶ್ರಣಕ್ಕೆ ತೆಗೆದಿರಿಸಿದ ಉಳಿದ ಮೈದಾಹಿಟ್ಟನ್ನು ತುಪ್ಪವನ್ನು ಹಾಕಿ ಮಿಕ್ಸ್‌ ಮಾಡಿ.
3. ಬಾಣಲೆಯನ್ನು ಸ್ಟವ್‌ ಮೇಲಿಟ್ಟು ಬಿಸಿಯಾಗುವಾಗ ಸಕ್ಕರೆ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಕಲಕುತ್ತ ಬನ್ನಿ.
4.ಪಾಕ ಹದಕ್ಕೆ ಬಂದಾಗ ಅದಕ್ಕೆ ಕೇಸರಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಇಳಿಸಿಡಿ.
5. ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಅದನ್ನು ಸಿಮ್‌ನಲ್ಲಿ ಬಿಸಿಯಾಗಲು ಬಿಡಿ.
6. ಕಲಸಿಟ್ಟ ಹಿಟ್ಟನ್ನು ಒಂದು ಜಿಲೇಬಿ ತೂತಿನ ಪರಿಕರದಲ್ಲಿ ವೃತ್ತಾಕಾರವಾಗಿ ಎಣ್ಣೆಗೆ ಬಿಡಿ.(ಇಲ್ಲವಾದರೆ ಪ್ಲಾಸ್ಟಿಕ್‌ ಕವರ್‌ನ ತಳವನ್ನು ತೂತು ಮಾಡಿ ಅದರಲ್ಲೂ ಬಿಡಬಹುದು)
7. ಸಿಮ್‌ನಲ್ಲಿ ಬೇಯಲು ಬಿಡಿ. ಕ್ರಿಸ್ಪಿಯಾಗಿ ಕಂದು ಬಣ್ಣಕ್ಕೆ ತಿರುಗುವಾಗ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ.
8. ಸ್ವಲ್ಪ ಹೊತ್ತು ಹಾಗೇ ಬಿಡಿ. ಅದು ಸಕ್ಕರೆ ಪಾಕ ಎಳೆದುಕೊಳತ್ತೆ.
9. ಸ್ವಲ್ಪ ಹೊತ್ತಿನ ನಂತರ ತೆಗೆದು ಸರಿಯಾಗಿ ಬೆಂದಿದಿಯೇ, ಪಾಕ ಕರೆಕ್ಟಾಗಿದ್ಯಾ ಅಂತ ಪರೀಕ್ಷಿಸಿ.
10. ಕರೆಕ್ಟಾಗಿದ್ದರೆ ಉಳಿದ ಹಿಟ್ಟನ್ನು ಇದೇ ರೀತಿಯಲ್ಲಿ ಹಾಕಿ. ಗರಿಗರಿಯಾದ ಜಿಲೇಬಿ ಈಗ ಸಿದ್ಧವಾಯ್ತು.

Trending videos

Back to Top