CONNECT WITH US  

ವರಮಹಾಲಕ್ಷ್ಮಿಹಬ್ಬಕ್ಕೆ ಅಪೂರ್ವ ಬಿಡುಗಡೆ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ರವಿಚಂದ್ರನ್‌ ಹುಟ್ಟುಹಬ್ಬಕ್ಕೆ ಅವರ "ಅಪೂರ್ವ' ತೆರೆಕಾಣಬೇಕಿತ್ತು. ಆದರೆ, ಕೆಲ ಕಾರಣಗಳಿಂದಾಗಿ "ಅಪೂರ್ವ' ಬಿಡುಗಡೆ ಮುಂದಕ್ಕೆ ಹೋಯಿತು. ಈಗ ರವಿಚಂದ್ರನ್‌ ತಮ್ಮ ಅಪರೂಪದ "ಅಪೂರ್ವ'ಳನ್ನು ಪ್ರೇಕ್ಷಕರ ಮುಂದೆ ತಂದು ನಿಲ್ಲಿಸಲು ರೆಡಿಯಾಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು "ಅಪೂರ್ವ' ರಿಲೀಸ್‌ ಮಾಡುವುದಾಗಿ ಸ್ವತಃ ರವಿಚಂದ್ರನ್‌ ಹೇಳಿಕೊಂಡಿದ್ದಾರೆ. ರವಿಚಂದ್ರನ್‌ ಅಭಿಮಾನಿಗಳು ತಮ್ಮ ನಾಯಕನ ಹುಟ್ಟುಹಬ್ಬದ ದಿನದಂದೇ "ಅಪೂರ್ವ'ಳನ್ನು ನೋಡಿ ಕಣ್ತುಂಬಿಕೊಳ್ಳುವ ಉತ್ಸಾಹದಲ್ಲಿದ್ದರು. ಆದರೆ, ರವಿಚಂದ್ರನ್‌ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರಿಂದ ಅವರ ಉತ್ಸಾಹ ಬತ್ತಿಹೋಗಿತ್ತು. ಈಗ ವರಮಹಾಲಕ್ಷ್ಮೀ ಹಬ್ಬಕ್ಕೆ "ಅಪೂರ್ವ'ಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ ರವಿಚಂದ್ರನ್‌.

ಲಿಫ್ಟ್ನಲ್ಲೇ ಒಂದೊಳ್ಳೆಯ ಕಥೆ ಕಟ್ಟಿರುವ ರವಿಚಂದ್ರನ್‌, ಈ ಬಾರಿ ಎಂದಿಗಿಂತ ಹೆಚ್ಚು ಹೊಸತನಕ್ಕೆ ಮುಂದಾಗಿದ್ದಾರೆ. ಅವರು ರಿಲೀಸ್‌ ಮಾಡಿದ್ದ ಚಿತ್ರದ ಚಿಕ್ಕದ್ದೊಂದು ಟ್ರೇಲರ್‌ ನೋಡಿಯೇ, ಅಭಿಮಾನಿಗಳು ಫ‌ುಲ್‌ಖುಷ್‌ ಆಗಿದ್ದರು. ಈ ಬಾರಿ ಮಿಸ್ಸೇ ಇಲ್ಲ, ವರಮಹಾಲಕ್ಷ್ಮೀ ಹಬ್ಬದಂದು ಚಿತ್ರವನ್ನು ತೋರಿಸುವುದಾಗಿ ಹೇಳಿರುವುದರಿಂದ ಅಭಿಮಾನಿಗಳು ಅಲ್ಲಿಯವರೆಗೆ ಕಾಯಲೇಬೇಕು.

ಈಗಾಗಲೇ ರವಿಚಂದ್ರನ್‌ ಅವರು ಇಂದ್ರಜಿತ್‌ ಲಂಕೇಶ್‌ ಅಭಿನಯದ "ಲವ್‌ ಯೂ ಆಲಿಯಾ' ಚಿತ್ರದಲ್ಲಿ ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೇ ಮೊದಲ ಸಲ ರವಿಚಂದ್ರನ್‌ ಅವರು "ಲವ್‌ ಯೂ ಆಲಿಯಾ' ಚಿತ್ರದಲ್ಲಿ ಡಾಕ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ, ರವಿಚಂದ್ರನ್‌ ಅವರು ತಮ್ಮ "ಅಪೂರ್ವ' ಚಿತ್ರ ಬಂದ ಬಳಿಕ "ಲವ್‌ ಯೂ ಆಲಿಯಾ' ಚಿತ್ರವನ್ನು ರಿಲೀಸ್‌ ಮಾಡುವಂತೆ ಸೂಚಿಸಿದ್ದರು. ಅವರ ಮಾತಿನಂತೆ ಇಂದ್ರಜಿತ್‌ ಲಂಕೇಶ್‌ ಕೂಡ "ಅಪೂರ್ವ' ಬಳಿಕವೇ ತಮ್ಮ ಚಿತ್ರವನ್ನು ರಿಲೀಸ್‌ ಮಾಡಲು ನಿರ್ಧರಿಸಿದ್ದರು. ಕೊನಗೆ "ಅಪೂರ್ವ'ಕ್ಕೂ ಮುನ್ನ, "ಲವ್‌ ಯೂ ಆಲಿಯಾ' ಚಿತ್ರವನ್ನು ರಿಲೀಸ್‌ ಮಾಡುವಂತೆ ರವಿಚಂದ್ರನ್‌ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದರಿಂದ, ಈಗ ಇಂದ್ರಜಿತ್‌ ತಮ್ಮ ಚಿತ್ರ ರಿಲೀಸ್‌ ಮಾಡಲು ರೆಡಿಯಾಗಿದ್ದಾರೆ. ಈ ಚಿತ್ರದ ಬಳಿಕ ವರಮಹಾಲಕ್ಷ್ಮೀ ಹಬ್ಬಕ್ಕೆ ರವಿಚಂದ್ರನ್‌ "ಅಪೂರ್ವ'ಳನ್ನು ಕರೆತರಲಿದ್ದಾರೆ.

Trending videos

Back to Top