CONNECT WITH US  

ಅಡುಗೆಮನೆ ಅವಳಿಲ್ಲದೆ ಅಪೂರ್ಣ

ಇನ್ನೇನು ಕಾಲೇಜು ಶುರುವಾಗಲು ಕೆಲವು ದಿನಗಳು ಮೊದಲ ದಿನ ಮೊದಲ ತರಗತಿ ನಡೆಯಬೇಕಾದರೆ ಎಲ್ಲ ಉಪನ್ಯಾಸಕರು ಮೊದಲಿಗೆ ಕೇಳುವ ಪ್ರಶ್ನೆ ""ರಜೆಯನ್ನು ಹೇಗೆ ಕಳೆದಿರಿ?'' ಎಂಬುದು. ಪ್ರಾಥಮಿಕ ಶಾಲೆಯಿಂದಲೂ ನಾವು ಉತ್ತರಿಸುತ್ತಲೇ ಬಂದ ಪ್ರಶ್ನೆಯಾದುದರಿಂದ ಮುಂದೆಯೂ ಪ್ರಶ್ನೆಯ ನಿರೀಕ್ಷೆಯಲ್ಲಿರುತ್ತೇವೆ. ಎಲ್ಲರೂ ಹೆಮ್ಮೆಯಿಂದ ಕಂಪ್ಯೂಟರ್‌ ಕೋರ್ಸ್‌ಗೆ ಹೋದೆ, ನ್ಪೋಕನ್‌ ಇಂಗ್ಲಿಷ್‌ ಕ್ಲಾಸ್‌ಗೆ ಸೇರಿದ್ದೆ, ಮತ್ತೆ ಇನ್ನೇನೋ ಪ್ರಸಿದ್ಧ ಪ್ರವಾಸಿ ತಾಣಗಳ ಹೆಸರು ಹೇಳಿ ಅಲ್ಲಿಗೆ ಹೋಗಿದ್ದೆ ಎನ್ನುವವರ ನಡುವೆ ರಜೆ ಇದ್ದ ಅಷ್ಟೂ ದಿನ ಮನೆಯಲ್ಲೇ ಇದ್ದ ನಾನೇನು ಹೇಳಲಿ ಎಂದೆನಿಸಿತ್ತು. ವಾಸ್ತವವಾಗಿ ರಜೆಯಲ್ಲಿ ಸ್ವಲ್ಪ ಅಡುಗೆ ಕಲಿತಿದ್ದೇನೆ. ಆದರೆ ಈ ರೀತಿ ರಜೆ ಕಳೆದೆನೆಂದರೆ ಹಲವರ ತುತ್ಛ ನೋಟ, ದೊಡ್ಡ ನಗು, ವ್ಯಂಗ್ಯ ಮಾತುಗಳನ್ನೆದುರಿಸಲು ತಯಾರಿರಬೇಕು. ಯಾರೇನೇ ಅಂದರೂ ನನಗೆ ನಾನು ಮಾಡಿದುದರಲ್ಲಿ ಖುಷಿ ಇದೆ. ಅಮ್ಮನಿಂದ ಅಡುಗೆ ಕೇಳಿ ಕಲಿಯುವುದರಲ್ಲಿ , ಅಮ್ಮ ಮಾಡುವ ಮನೆಗೆಲಸಗಳನ್ನು ನಾನು ಮಾಡುವುದರಲ್ಲಿ ನಿಜಕ್ಕೂ ತೃಪ್ತಿ ಮತ್ತು ಸಂತಸವನ್ನು ಕಂಡಿದ್ದೆ. ನಾನ್ಯಾವತ್ತೂ ಅಡುಗೆ ಕೆಲಸವನ್ನು ಕೇವಲವಾಗಿ ಕಂಡಿಲ್ಲ.

ಅಡುಗೆ ತಯಾರಾಗುವುದು ಸ್ವಲ್ಪ ತಡವಾದರೆ ತಂದೆ ತಾಯಿಯನ್ನು ಕುರಿತು ""ಮನೇಲೇ ಇರಿ¤àಯ ಒಂದು ಸಿಂಪಲ್‌ ಅಡುಗೇನೂ ತಯಾರು ಮಾಡೋಕಾಗಲ್ವ'' ಎನ್ನುವುದಿದೆ. ಈ ಸಿಂಪಲ್‌ ಅಡುಗೆ ಮಾಡುವುದು ಎಷ್ಟು ಕಷ್ಟವೆಂದು ಒಂದು ದಿನ ತಾಯಿ ನೆಂಟರ ಮನೆಗೆ ಹೋದಾಗಲೇ ಅರಿವಾಗುವುದು. ಒಂದು ದಿನಕ್ಕೆಂದು ತವರು ಮನೆಗೆ ಹೋಗಿ ಬರುವ ತಾಯಿಯನ್ನು ತಳ ಹಿಡಿದ ಪಾತ್ರೆಗಳು, ಗಲೀಜಾದ ಅಡುಗೆ ಮನೆ ಸ್ವಾಗತಿಸುತ್ತದೆ. ಅಡುಗೆ ಕೆಲಸವೆಂದರೆ ಕೇವಲ ಆಹಾರ ತಯಾರಿಸುವುದಲ್ಲ; ಪಾತ್ರೆ ತೊಳೆಯುವುದು, ಆಹಾರ ಪದಾರ್ಥಗಳನ್ನು ಆರೋಗ್ಯಕರವಾಗಿ ಸಂರಕ್ಷಿಸುವುದು, ಅಡುಗೆ ಮನೆಯ ಸ್ವತ್ಛತೆ, ಸೌಂದರ್ಯ ಎಲ್ಲವನ್ನೂ ನಿಭಾಯಿಸಿಕೊಳ್ಳಬೇಕು. ಮನೆಯಲ್ಲಿ ಮನೆಕೆಲಸ ಕಲಿತುಕೋ ಎನ್ನುವ ಅಮ್ಮನಿಗೆ ಮದುವೆಯಾದ ಮೇಲೆ ಎಲ್ಲವೂ ತಾನಾಗಿಯೇ ಬರುತ್ತದೆ. ಈಗಲೇ ಕಲಿಯಬೇಕಿಲ್ಲಮ್ಮ ಎನ್ನುತ್ತಾಳೆ ಮಗಳು. ಆದರೆ ವಿವಾಹವಾಗಿ ಉದ್ಯೋಗದಲ್ಲಿರುವ ಮಹಿಳೆ ಮನೆಯಲ್ಲಿ ಒಬ್ಟಾಕೆ ಕೆಲಸದವಳನಿಟ್ಟು   ಕೊಂಡಿರುತ್ತಾಳೆಂಬುದು ಸತ್ಯ. ಹಾಗೊಂದು ವೇಳೆ ಕೆಲಸದವರಿಲ್ಲ ಎಂದಾದರೆ ಮನೆ ಕಸದ ತೊಟ್ಟಿಯಾಗಿರುತ್ತದೆ. ವಿಂಡೋ ಕಟೈìನ್ಸ್‌, ಮಕ್ಕಳ ಶೂಸ್‌, ಬ್ಯಾಗ್ಸ್‌ , ಹುಟ್ಟುಹಬ್ಬಕ್ಕೆಂದು ನೆರೆಮನೆಯವರು ಕೊಟ್ಟ ಸ್ವೀಟ್‌ ಬಾಕ್ಸ್‌ , ಹೊಸದಾಗಿ ತಂದ ಡ್ರೆಸ್‌ನ ಕವರ್‌' ಓದಿ ಹಾಕಿದ ಪತ್ರಿಕೆಗಳೂ ಹೀಗೆ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಬೇಕೆಂದಾಗ ತಟ್ಟನೆ ಕಲಿಯುವುದಕ್ಕೆ ಅಡುಗೆ ಕೆಲಸ ಪುಸ್ತಕದಲ್ಲಿ ಬರೆದ ಪ್ರಬಂಧ ಲೇಖನವಲ್ಲ. ವರ್ತನೆ, ಕೆಲಸ, ಶುಚಿತ್ವ ನಮ್ಮಲ್ಲಿ ಮೈಗೂಡಿ ಬರಬೇಕು. ಹಲವು ಸಲ ಹೊಸದಾಗಿ ಮದುವೆಯಾದ ಹುಡುಗಿಯ ಕುರಿತು ""ಏನ್ರೀ ಆ ಹುಡುಗಿ ಬೊಂಬೆ ಥರ ಇದ್ದಾಳೆ, ಕಲ್ತಿದ್ದಾಳೆ, ಕೆಲಸ ಇದೆ. ಇದ್ದೇನ್‌ ಪ್ರಯೋಜನ, ಮನೆ ಮಾತ್ರ ಹಟ್ಟಿ ಥರಾ ಆಗಿದೆ'' ಎನ್ನುವುದಿದೆ. ಉದ್ಯೋಗದಲ್ಲಿರುವ ವಿವಾಹಿತ ಮಹಿಳೆಗೆ ಮನೆಕೆಲಸದ ಕುರಿತು ಹೆಚ್ಚಿನ ಒತ್ತು ನೀಡಲಾಗುವುದಿಲ್ಲ ಎಂಬುದು ತಿಳಿದಿರುವ ಸಮಸ್ಯೆ.

"ಮ್ಯಾಗಿ' ಬ್ಯಾನ್‌ ಆಯಿತೆಂದಾಗಲೇ ವಾಟ್ಸ್‌ಅಪ್‌-ಫೇಸ್‌ಬುಕ್‌ಗಳಲ್ಲಿ ಅಳುಮುಖದ ಹುಡುಗಿಯರೂ, ಹುಡುಗಿಯರಿಗೆ ಅಡುಗೆ ಬರುವುದಿಲ್ಲ, ಅವರು ಸಂಪೂರ್ಣವಾಗಿ ಫಾಸ್ಟ್‌ಫ‌ುಡ್‌ಗಳಾದಂತಹ ಮ್ಯಾಗಿಯನ್ನು ಅವಲಂಬಿಸಿದ್ದಾರೆ ಎಂಬುದನ್ನು ಸೂಚಿಸುವ ಕೆಲವು ಕಾಲ್ಪನಿಕ ಬರಹಗಳೂ ರಾಜಾರೋಷವಾಗಿ ಹರಿದಾಡಿದ್ದವು. ಹುಡುಗಿಯರು ಪ್ಯಾಕಿಂಗ್‌ ಫ‌ುಡ್‌, ಹೌವ್‌ ಟು ಪ್ರಿಪೇರ್‌, ಓದಿ ಅದರಂತೆ ಮಾಡುತ್ತಾರೆ, ಹಾಗಾಗಿ ಅದಿಲ್ಲದೆ ಅವರಿಗೆ ಅಡುಗೆಯೇ ಬರದೆಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದವು ಆ ಚಿತ್ರಗಳು ಮತ್ತು ಬರಹಗಳು. ಅದು ಪೂರ್ತಿ ನಿಜವಲ್ಲದಿದ್ದರೂ ಒಪ್ಪಿಕೊಳ್ಳಬಹುದಾದ ಸಂಗತಿಯೇ. ಶಿಕ್ಷಣ, ಉದ್ಯೋಗವೆಂಬ ಗುಂಗಿನಲ್ಲಿ 25, 27 ವರುಷಗಳ ತನಕ ಕಲಿಯುವ ಹುಡುಗಿಯರಿಗೆ ಮದುವೆ ವಯಸ್ಸು ಮೀರಿತೆಂದು ಮದುವೆ ಮಾಡುತ್ತಾರೆ. ರಜೆಗಳಲ್ಲಾದರೂ ಕಲಿಯೋಣವೆಂದರೆ ಕ್ಲಾಸುಗಳೂ, ಕೋರ್ಸ್‌ಗಳೂ, ಟ್ರಿಪ್‌ಗ್ಳೂ... ಅಂತೂ ಅಡುಗೆ ಕಲಿಯುವುದಕ್ಕೆ ಸಮಯವೇ ಇಲ್ಲ. ಬಳಿಕ ಉದ್ಯೋಗಕ್ಕಾಗಿ ಹೊರಹೋಗುವವರು ಮೆಸ್‌ಗಳಿಗೂ, ಪ್ಯಾಕೆಟ್‌ ಫ‌ುಡ್‌ಗಳಿಗೂ ಮೊರೆಹೋಗುತ್ತಾರೆ.

ಹುಡುಗಿಯರ ಕೆಲಸ ಎಂದಿದ್ದ ಅಡುಗೆ ಇಂದೀಗ ಕೋರ್ಸ್‌, ಪದವಿಗಳ ಮೂಲಕ ಹುಡುಗ-ಹುಡುಗಿ ಎಂಬ ಭೇದವಿಲ್ಲದೆ ಫೀಸ್‌ ಕೊಟ್ಟು ಕಲಿಯುವ ಶಿಕ್ಷಣವಾಗಿ ಬದಲಾಗಿದೆ. ಕಾರಣ ಅಡುಗೆಗೆ ಅಷ್ಟರ ಮಟ್ಟಿನ ಬೇಡಿಕೆ ಇದೆ. ಇದರ ನಡುವೆಯೂ ಶಿಕ್ಷಣವನ್ನು ತುತ್ಛವಾಗಿ ಕಾಣುವವರಿಗೆ ಕೊರತೆ ಇಲ್ಲ. ""ನನಗೆ ಟೀ ಮಾಡುವುದಕ್ಕೂ ಬರುವುದಿಲ್ಲ, ಅಡುಗೆ ಕೆಲಸ ನನಗಾಗದಪ್ಪಾ , ನನಗೆಲ್ಲವೂ ಅಮ್ಮನೇ ಮಾಡಿಕೊಡುತ್ತಾಳೆ'' ಎಂಬ ಮಾತು ಹೆಣ್ಣಾಗಿ ಹೇಳುವುದೆಷ್ಟು ನಾಚಿಕೆಯ ವಿಷಯ ಎಂಬುದನ್ನರಿಯದೆ ಹೆಮ್ಮೆಯ ವಿಷಯದಂತೆ ತಾನು ಮನೆಯಲ್ಲಿ ಫ್ರೀ ಎಂಬುದನ್ನು ತೋರಿಸುತ್ತಾ ಹೇಳುವ ಹುಡುಗಿಯರೇ ಬಹುತೇಕ.

ಮಹಿಳೆ ಬೆಳೆಯುತ್ತಿದ್ದಾಳೆ, ಎಲ್ಲಾ ರಂಗಗಳಲ್ಲಿಯೂ. ಆದರೆ ತನ್ನದೇ ಎನಿಸಿದ ಕೆಲವು ಕ್ಷೇತ್ರಗಳನ್ನು ಕಡೆಗಣಿಸಿ ಸಾಗುತ್ತಿರುವಳೇನೋ ಎಂದೆನಿಸುತ್ತದೆ. ಒಬ್ಬ ಹುಡುಗಿ ವಿದ್ಯಾಭ್ಯಾಸ ಪಡೆಯುವುದು, ಉದ್ಯೋಗಿಯಾಗಿ, ಸ್ವಾವಲಂಬಿಯಾಗಿ ಬದುಕುವುದು ಎಷ್ಟು ಅಗತ್ಯವೋ, ಭವಿಷ್ಯದಲ್ಲಿ ಉತ್ತಮ ಗೃಹಿಣಿಯಾಗುವುದೂ ಅಷ್ಟೇ ಅಗತ್ಯ. ನೀವು ಏನಾಗಬಯಸುವಿರೆಂದರೆ ನನಗೆ ಒಳ್ಳೆಯ ಹೌಸ್‌ವೈಫ್ ಆಗಬೇಕು, ಮಾದರಿ ಅಮ್ಮನಾಗಬೇಕು, ಪತಿಯ ನೆಚ್ಚಿನ ಮಡದಿಯಾಗಬೇಕು ಎಂಬ ಉತ್ತರ ಯಾರಿಂದಲೂ ಬರುವುದಿಲ್ಲ. ಇಂದಿನ ದಿನ ಅದನ್ನು ನಿರೀಕ್ಷಿಸುವುದು ಕಷ್ಟ . 

ಎಲ್ಲವನ್ನೂ ಕಲಿತು ಬೆಳೆಯುವುದರೊಂದಿಗೆ ಕೊಂಚ ಅಡುಗೆ, ಮನೆಗೆಲಸ, ಮನೆಯನ್ನು ನಿಭಾಯಿಸುವುದು ತಿಳಿದಿದ್ದರೆ ಚೆಂದ. ತಾನೇ ಮನೆಮಂದಿಗೆ ಅಡುಗೆ ಮಾಡಿ ಬಡಿಸಿ ಅದರಿಂದ ಬರುವ ಸಂತಸದ ನಗು, ಪ್ರಶಂಸೆಯ ಮಾತು ತರುವ ಸಂತೃಪ್ತಿ ಅಡುಗೆ ಕೆಲಸದವಳಿಂದ ಅಡುಗೆ ಮಾಡಿಸಿ ತಿನ್ನುವುದರಲ್ಲಿ ದೊರೆಯದು. ಅಡುಗೆ ಮನೆ ಅವಳಿಲ್ಲದೆ ಅಪೂರ್ಣ. ಕಾರಣ ಅಡುಗೆಮನೆಗೆ ಅವಳೇ ಸಮ್ರಾಜಿn.

ದಿವ್ಯಾ 

Trending videos

Back to Top