CONNECT WITH US  

ಫ‌ಲಾನುಭವಿಗಳಿಗೆ ಅನುದಾನ ನೀಡಿಕೆಯಲ್ಲಿ ವಿಳಂಬ ಬೇಡ: ಸಂಸದ

ಮೈಸೂರು: ಸರ್ಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ ಯೋಜನೆಯ ಅನುದಾನ ತಲುಪಿಸಲು ವಿಳಂಬ ಮಾಡಬೇಡಿ ಎಂದು ಸಂಸದ ಪ್ರತಾಪ್‌ ಸಿಂಹ ಬ್ಯಾಂಕ್‌ಗಳವರಿಗೆ ಸೂಚಿಸಿದರು.

ಮೈಸೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ವತಿಯಿಂದ ಜಿಪಂ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಯೋಜನೆಯ ತ್ರೆ„ಮಾಸಿಕ ಪ್ರಗತಿ ಪರಿಶೀಲನಾ ಸಬೆಯಲ್ಲಿ ಮಾತನಾಡಿದರು.

ಬಡತನ ರೇಖೇಗಿಂತ ಕೆಳಮಟ್ಟದಲ್ಲಿರುವ ಜನರನ್ನು ಮೇಲೆತ್ತುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ತರವಾದದ್ದು, ಈ ದಿಸೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ ಯೋಜನೆಯ ಅನುದಾನ ತಲುಪಿಸಲು ವಿಳಂಬ ಮಾಡಬೇಡಿ, ಸಾಲ ನೀಡಲು ಆರ್ಥಿಕ ವರ್ಷದ ಕಡೆವರೆಗೆ ಕಾಯದೆ ವರ್ಷಾರಂಭದಲ್ಲೇ ಸಾಲ ನೀಡುವಂತೆ ಸಲಹೆ ನೀಡಿದರು. ಸಾಮಾಜಿಕ ಹೊಣೆಗಾರಿಕೆಯಡಿ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸಿಕೊಡುವಂತೆ ಹೇಳಿದರು.

ಜಿಲ್ಲೆಯ ಸರ್ಕಾರಿ ಶಾಲೆಗಳು ಸೇರಿದಂತೆ ಸಾಕಷ್ಟು ಖಾಸಗಿ ಶಾಲೆಗಳಲ್ಲಿ 40 ಮಕ್ಕಳಿಗೆ ಒಂದು ಶೌಚಾಲಯ ಇಲ್ಲದಂತಹ ಸ್ಥಿತಿ ಇದೆ. ಇದರಿಂದ ಹೆಣ್ಣು ಮಕ್ಕಳಿಗೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಬ್ಯಾಂಕುಗಳು ಸಾಮಾಜಿಕ ಜವಾಬ್ದಾರಿ ಅರಿತು ಶೌಚಾಲಯ ನಿರ್ಮಿಸಿಕೊಡುವಂತೆ ಹೇಳಿದರು.

ಜತೆಗೆ ಎಲ್ಲ ಬ್ಯಾಂಕ್‌ ಶಾಖೆಗಳಲ್ಲಿ ದೊರೆಯುವ ಸಾಲ ಸೌಲಭ್ಯ, ಸಹಾಯಧನಗಳ ಬಗ್ಗೆ ಭಿತ್ತಿಪತ್ರ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಸಾಕಷ್ಟು ಬ್ಯಾಂಕುಗಳು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಸತಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಇದರಿಂದ ಬ್ಯಾಂಕ್‌ಗಳ ಮೇಲಿನ ವಿಶ್ವಾಸ ಹೊರಟುಹೋಗಲಿದೆ. ಹೀಗಾಗಿ ಕ್ರಿಯಾಶೀಲ ಸ್ವಸಹಾಯ ಸಂಘಗಳಿಗೆ ಸಾಲ ನೀಡುವಂತೆ ತಿಳಿಸಿದರು.

ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರ ಬ್ಯಾಂಕ್‌ ಗಳಿಗೆ ಸಾಲ ಕೊಡುವ ಕೆಲಸ ಹಚ್ಚಿದೆ. ಇದೊಂದು ಸ್ಪ$ರ್ಧೆ ಎಂದು ತಿಳಿದು ಬ್ಯಾಂಕ್‌ ಗಳು ಹೆಚ್ಚು ಜನರಿಗೆ ಸಾಲ ನೀಡುವ ಮೂಲಕ ಅನುಕೂಲ ಮಾಡಿಕೊಡುವಂತೆ ಹೇಳಿದರು.

ಬಹಳಷ್ಟು ಬ್ಯಾಂಕುಗಳು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದರೂ ಹಳ್ಳಿಗಾಡಿನ ಅನೇಕ ಶಾಖೆಗಳಲ್ಲಿನ ಸಿಬ್ಬಂದಿ ರಜೆ ಇಲ್ಲದೆ ಕೆಲಸ ಮಾಡಿದ ಉದಾಹರಣೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಕೆ.ಎನ್‌.ಶಿವಲಿಂಗಯ್ಯ, ಎಸ್‌ಬಿಎಂ ಉಪ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್‌, ನಬಾರ್ಡ್‌ ಸಹಾಯಕ ವ್ಯವಸ್ಥಾಪಕ ಅರ್ವಮುದನ್‌, ಆರ್‌ಬಿಐನ ಗಾಯತ್ರಿ, ಜಿಲ್ಲಾ ಯೋಜನಾಧಿಕಾರಿ ರಾಣಿ ಸಭೆಯಲ್ಲಿದ್ದರು.

Trending videos

Back to Top