CONNECT WITH US  

ಹಿಂದೂ ಎನ್ನುವುದು ಧರ್ಮವಲ್ಲ, ಜೀವನ ಕ್ರಮ : ಕೆನಡಾದಲ್ಲಿ ಮೋದಿ

ಒಟ್ಟಾವ : ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ  ''ಹಿಂದೂ ಎನ್ನುವುದು ಧರ್ಮವಲ್ಲ,  ಅದೊಂದು ಜೀವನ ಕ್ರಮ'' ಎಂದು ಹೇಳಿಕೆ ನೀಡಿದ್ದಾರೆ. 

ಕೆನಡಾ ಪ್ರವಾಸದ ವೇಳೆ ಪ್ರಸಿದ್ದ ನಗರ ವ್ಯಾಂಕೋವರ್‌ನ ಸಿಖ್‌  ಗುರುದ್ವಾರ ಮತ್ತು ಲಕ್ಷ್ಮೀ ನಾರಾಯಣ ಮಂದಿರಕ್ಕೆ ಭೇಟಿ ನೀಡಿದ ವೇಳೆ ಕಿಕ್ಕಿರಿದು ನೆರೆದಿದ್ದ ಸಾರ್ವಜನಿಕರನ್ನುದ್ದೇಶಿಸಿ ಮೋದಿ ಮಾತನಾಡಿದರು. 

ಹಿಂದೂ ಧರ್ಮದ ಕುರಿತು ಸುಪ್ರೀಂಕೋರ್ಟ್‌ ಮಾಡಿರುವ ವ್ಯಾಖ್ಯೆಗೆ ಮೆಚ್ಚುಗೆ ವ್ಯಕ್ತ ಪಡಿಸಿ , ನಿಸರ್ಗದೊಂದಿಗೆ ಹೇಗೆ ಬಾಳ್ವೆ ನಡೆಸಬೇಕೆಂಬುವುದನ್ನು ಹಿಂದೂ ಧರ್ಮ ತೋರಿಸುತ್ತದೆ ಎಂದರು. 

2001ರಲ್ಲಿ  ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದ್ದ ವೇಳೆ ಪುರಾತನ ಮತ್ತು ಗುರುನಾನಕರು ತಂಗಿದ್ದ ಪುಣ್ಯ ಗುರುದ್ವಾರ ಸಂಪೂರ್ಣ ಹಾನಿಯಾಗಿತ್ತು, ಇದನ್ನು ನಾವು ಪುನರ್‌ ನಿರ್ಮಾಣ ಮಾಡಿದ್ದೇವೆ ಎಂದರು. 

ಗುರುದ್ವಾರ ಮತ್ತು ದೇವಾಲಯ ಭೇಟಿಯ ವೇಳೆ ಮೋದಿ ಅವರ ಜೊತೆ  ಕೆನಡಾ ಪ್ರಧಾನಿ ಸ್ಟೆಫ‌ನ್‌ ಹಾರ್ಪರ್‌ ಅವರು ಉಪಸ್ಥಿತರಿದ್ದರು. 

ಮೂರು ರಾಷ್ಟ್ರಗಳ ಪ್ರವಾಸ ಯಶಸ್ವಿಯಾಗಿ ಮುಗಿಸಿರುವ ಮೋದಿ ಶುಕ್ರವಾರ ಭಾರತಕ್ಕೆ ವಾಪಾಸಾಗಲು ವಿಶೇಷ ವಿಮಾನ ವೇರಿದ್ದಾರೆ. ಈ ವೇಳೆ ಕೆನಡಾ ಸರ್ಕಾರ ಮತ್ತು ಜನತೆ ಆತ್ಮೀಯವಾಗಿ ಬೀಳ್ಕೊಟ್ಟರು. 

Trending videos

Back to Top