CONNECT WITH US  

ಸೀಬೆ ಹಣ್ಣಿನ ಹಲ್ವ

ಬೇಕಾಗುವ ಸಾಮಗ್ರಿಗಳು: ಸೀಬೆ ಹಣ್ಣಿನ ತಿರುಳು, ಸಕ್ಕರೆ ತಲಾ 1 ಕಪ್‌, ಬೆಣ್ಣೆ ಭಿ ಕಪ್‌, ಗೋಡಂಬಿ, ಬಾದಾಮಿ ತಲಾ 6.

ಅಲಂಕರಿಸಲು : ಗೋಡಂಬಿ 4.

ವಿಧಾನ : . ಸೀಬೆ ಹಣ್ಣು ಹಳದಿ ಬಣ್ಣ ಬರುವಷ್ಟು ಹಣ್ಣಾಗಿರದೆ, ಗಟ್ಟಿಯಾಗಿರಬೇಕು, ಹಣ್ಣಾಗುವ ಹಂತದಲ್ಲಿರಬೇಕು.

.ಹಣ್ಣುಗಳನ್ನು ಕತ್ತರಿಸಿ, ಸ್ವಲ್ಪನೀರು ಹಾಕಿ ಬೇಯಿಸಿ, ನೀರು ಬಸಿಯಿರಿ (ಅದರಲ್ಲಿ ಸೀಬೆ ಹಣ್ಣಿನ ಜೆಲ್ಲಿ ತಯಾರಿಸಬಹುದು), ತಣಿಸಿ, ಬೀಜವಿರುವ ಭಾಗ ತೆಗೆದು, ಉಳಿದಿರುವ ತಿರುಳನ್ನು ರುಬ್ಬಿ.

.ಒಂದು ಕಪ್‌ ತಿರುಳು ಮಿಶ್ರಣ ಇದ್ದರೆ, ಮೇಲೆ ಹೇಳಿದಂತೆ ಸಕ್ಕರೆ, ಬೆಣ್ಣೆ ಸೇರಿಸಿ ಬಿಸಿ ಮಾಡಿ.

.ಮಿಶ್ರಣ ಸೀದುಹೋಗದಂತೆ ಜಾಗರೂಕತೆ ವಹಿಸಿ, ಕೈ ಬಿಡದೆ ಗೊಟಾಯಿಸಿ.

.ಮಿಶ್ರಣ ಗಟ್ಟಿಯಾಗುತ್ತ, ತಳ ಬಿಟ್ಟು, ಉಂಡೆಯಂತಾದಾಗ, ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಹಲ್ವದ ಕೊನೆಯ ಹಂತದಲ್ಲಿ ಹಾಕಿ.

.ಅದನ್ನು ತುಪ್ಪಸವರಿದ ತಟ್ಟೆಯ ಮೇಲೆ ಹಾಕಿ, ಹರಡಿ.

.ಸ್ವಲ್ಪತಣಿದ ಅನಂತರ ಚೌಕಾಕಾರದ ಬಿಲ್ಲೆಗಳಾಗಿ ಕತ್ತರಿಸಿ, ಬಿಲ್ಲೆಗಳ ಮೇಲೆ ಅರ್ಧ ತುಂಡು ಗೋಡಂಬಿ ಸಿಕ್ಕಿಸಿ. 

Trending videos

Back to Top