CONNECT WITH US  

ಹಾಸ್ಯಪ್ರಧಾನದ ತುಳು ಚಿತ್ರ ಸೂಪರ್‌ ಮರ್ಮಯೆ' ಶೀಘ್ರ ತೆರೆಗೆ

ತುಳು ಚಿತ್ರರಂಗಕ್ಕೆ ಈಗ ಸಂಕ್ರಮಣ ಕಾಲ. 43 ವರ್ಷಗಳ ಇತಿಹಾಸದಲ್ಲಿ 53 ಸಿನಿಮಾಗಳು ತೆರೆ ಕಂಡಿವೆ. 2014ರ ವರ್ಷದಲ್ಲೇ 7 ತುಳು ಚಿತ್ರಗಳು ತೆರೆ ಕಂಡಿವೆ. ಈ ವರ್ಷ ತುಳು ನಾಡಿನ ಜನರನ್ನು ನಗಿಸಲು ಸಿದ್ದವಾಗುತ್ತಿದೆ ಇನ್ನೊಂದು ಕಾಮಿಡಿ ಫಿಲ್ಮ್ ಸೂಪರ್‌ ಮರ್ಮಯೆ. ಈ ಸಿನಿಮಾ ಏಪ್ರಿಲ್‌ನಲ್ಲಿ ತೆರೆಕಾಣಲಿದೆ. 700 ಕ್ಕೂ ಹೆಚ್ಚು ಹಿಂದಿ, ಮರಾಠಿ, ಗುಜರಾತಿ, ಕನ್ನಡ, ತೆಲುಗು, ತಮಿಳು ಚಲನ ಚಿತ್ರಗಳಲ್ಲಿ ಸ್ಟಂಟ್‌ ಮಾಸ್ಟರ್‌ ಆಗಿ ದುಡಿದಿರುವ ಆರ್ಮಿ, ಗದ್ದಾರ್‌, ಜಾಗƒತಿ, ಕತರ್‌ನಾಕ್‌ ನಂತಹ ಹಿಂದಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರಾಮ್‌ ಶೆಟ್ಟಿ ನಿರ್ದೇಶನದಲಿ ಸೂಪರ್‌ ಮರ್ಮಾಯೆ ತುಳು ಚಿತ್ರ ಮೂಡಿ ಬರಲಿದೆ.

ಬ್ಯಾಂಕ್‌ ಮನೇಜರ್‌ನ ಮಗಳನ್ನು ಪ್ರೇಮ ವಿವಾಹವಾಗಿರುವ ರಿûಾ ಡ್ರೈವರ್‌ ತನ್ನ ಹೆಂಡತಿಯನ್ನು ಪಡೆಯಲು ನಡೆಸುವ ಕಸರತ್ತೇ ಚಿತ್ರದ ಕಥಾವಸ್ತು. ಮಾವನಿಗೆ ಬೇಡವಾದ ಅಳಿಯನಾಗಿ ಪಂಚರಂಗಿ ಪೊಂ ಪೊಂ ಖ್ಯಾತಿಯ ಕಾಮಿಡಿ ಕಿಂಗ್‌ ರಾಘವೇಂದ್ರ ರೈ ನಟಿಸಿದ್ದಾರೆ. ಗಂಭೀರ ಪಾತ್ರಧಾರಿಯಾಗಿ ನಗಿಸುವ ವೈಶಿಷ್ಟÂವನ್ನು ಮಾವನ ಪಾತ್ರಧಾರಿ ಗೋಪಿನಾಥ ಭಟ್‌ ಪ್ರದರ್ಶಿಸಿದ್ದಾರೆ. ಅವರಿಗೆ ನವೀನ್‌ ಡಿ. ಪಡಿಲ್‌, ಭೋಜರಾಜ್‌ ವಾಮಂಜೂರು, ಅರವಿಂದ ಬೋಳಾರ್‌ ಸಾಥ್‌ ನೀಡಿದ್ದಾರೆ. ಕುಡುಕ ಗಂಡನ ಕಿವಿ ಹಿಂಡಿ ಬದುಕು ರೂಪಿಸುವ ಬಜಾರಿ ಹೆಂಡತಿಯ ಪಾತ್ರಧಾರಿಯಾಗಿ ನಟಿಸುತ್ತಿರುವವರು ಶ್ರದ್ಧಾ ಸಾಲ್ಯಾನ್‌. ಶ್ರದ್ಧಾ ಅವರು ಮೂಲತಃ ಮಣಿಪಾಲದವರಾದರೂ ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ. ಸಬ್‌ ಟಿವಿಯಲ್ಲಿ ಬರುವ ಜಿನಿ ಔರ್‌ ಜುಜು ಧಾರಾವಾಹಿಯ ಪ್ರಮುಖ ಪಾತ್ರಧಾರಿ. ಹಲವು ಹಿಂದಿ ಸಿರಿಯಲ್‌, ಚಲನಚಿತ್ರಗಳಲ್ಲಿ ನಟಿಸಿರುವ ಅನುಭವ ಶ್ರದ್ಧಾ ಅವರಿಗಿದೆ.

ಮೇ ತಿಂಗಳಲ್ಲಿ ಸುಪರ್‌ ಮರ್ಮಾಯೆ ಚಿತ್ರ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ನಾನು ಸ್ಟಂಟ್‌ ಮಾಸ್ಟರ್‌ ಆಗಿದ್ದರೂ ಈ ಚಿತ್ರದಲ್ಲಿ ಸ್ಟಂಟ್‌ ಮಾಡಿಲ್ಲ ಎನ್ನುತ್ತಾರೆ ರಾಮ್‌ ಶೆಟ್ಟಿ. ರಾಮ್‌ ಶೆಟ್ಟರಿಗೆ ಬಾಲಿವುಡ್‌ನ‌ಲ್ಲಿ ಸಾಥ್‌ ನೀಡುತ್ತಿದ್ದ ಕ್ಯಾಮರಾಮನ್‌ ಈಜನ್‌ ಸುಪರ್‌ ಮರ್ಮಯೇ ಚಿತ್ರವನ್ನು ಸುಪರ್‌ ಮಾಡಲು ಕೈ ಜೋಡಿಸಿದ್ದಾರೆ. ರಾಮ್‌ ಶೆಟ್ಟರು ಕಳೆದ ಎರಡು ವರ್ಷಗಳಿಂದ ಶ್ರದ್ದೆಯಿಂದ ಸಿದ್ದಪಡಿಸಿದ ಸ್ಕ್ರಿಪ್ಟ್ಗೆ ಮಾತಿನ ರೂಪ ಕೊಟ್ಟವರು ಖ್ಯಾತ ನಾಟಕ ರಚನಕಾರ ನವೀನ್‌ ಶೆಟ್ಟಿ ಅಳಕೆ.

ಕಡಲ ಮಗೆ ಖ್ಯಾತಿಯ ಚಂದ್ರಕಾಂತ್‌ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಿರಾಜ್‌ ಕಾವೂರು ಅವರ ಸಾಹಿತ್ಯದ ಐದು ಹಾಡುಗಳು ಚಿತ್ರದಲ್ಲಿವೆ. ಸಚಿನ್‌ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಕಲೇಶಪುರದ ಸಹಜ ಪರಿಸರದಲ್ಲಿ ಈಗಾಗಲೇ ಹಾಡುಗಳ ಚಿತ್ರಿಕರಣವಾಗಿವೆ. ತಮ್ಮ ಲಕ್ಷ¾ಣ್‌ ಕಲಾ ನಿರ್ದೇಶಕರಾಗಿ ಚಿತ್ರದ ಅಂದ ಹೆಚ್ಚಿಸಿದ್ದಾರೆ. ಮುಂಬಯಿ ಪ್ರತಿಭೆಗಳಾದ ಕರ್ನೂರ್‌ ಮೋಹನ್‌ ರೈ, ಆ್ಯಗ್ನೆಲ್‌ ರಾಡ್ರಿಗಸ್‌, ಪ್ರದೀಪ್‌ ಆಳ್ವಾ, ಸತೀಶ್‌ ಬಂದಲೆ, ದೀಪಕ್‌ ರೈ ಪಾಣಾಜೆ ಮೊದಲಾದವರು ಸಿನಿಮಾದಲ್ಲಿ ನಟಿಸಿರುವುದು ಮತ್ತೂಂದು ವಿಶೇಷತೆಯಾಗಿದೆ.

ಲೇಖಕ : ರೋನ್ಸ್‌ ಬಂಟ್ವಾಳ್‌


Trending videos

Back to Top