CONNECT WITH US  

ಸಾಲ ಮರುಪಾವತಿ ಮಾಡದವನೇ ದೇಶದ್ರೋಹಿ

ಮುಳಬಾಗಿಲು : ದರಣಿ ಪ್ರತಿಭಟನೆ ಮಾಡಿ ಮಂತ್ರಿಗಿರಿ ಪಡೆಯುವುದು ನನಗೆ ಅಗತ್ಯವಿಲ್ಲ ಬದಲಾಗಿ ಅಂತಹ ಜಾಯಮಾನವೂ ನನದಲ್ಲ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು. ಶುಕ್ರವಾರ ಪಟ್ಟಣದಲ್ಲಿ ನವೀಕರಣಗೊಂಡಿರುವ ನೂತನ ಪಿಎಲ್‌ಡಿ ಬ್ಯಾಂಕ್‌ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು, ಸಾಮಾನ್ಯವಾಗಿ ಆಸ್ತಿ ಅಡಮಾನವಿಟ್ಟು ಐವತ್ತು ನೂರು ಸಾಲ ಪಡೆಯುವ ಬಡ ರೈತರು ನಿಯತ್ತಾಗಿ ಮರು ಪಾವತಿ ಮಾಡಿದರೆ, ಯಾವುದೇ ಆಸ್ತಿ ನೀಡದೇ ನೂರಾರು ಕೋಟಿ ಸಾಲ ಪಡೆಯುವರು ಸಾಲ ತೀರಿಸುವುದಿಲ್ಲ ಅವರೇ ನಿಜವಾದ ದೇಶ ದ್ರೋಹಿಗಳು ಅವರ ವಿರುದ್ದ ರೈತರಿಗೆ ಮನವರಿಕೆ ಮಾಡಿಕೊಟ್ಟು ಬಡವರ ಹಿತಾಸಕ್ತಿಗಾಗಿ ರಾಜಾÂಧ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದರು.

ಮಹಿಳೆಯರೂ ಸಹ ಬಡ್ಡಿ ವ್ಯಾಪಾರಸ್ತರ ಬಳಿ ಸಾಲ ಪಡೆಯಲು ಹೋಗದೇ ಜಾಗ್ರತರಾಗಬೇಕು, ಬಡ್ಡಿ ವ್ಯಾಪಾರಸ್ತರ ಬಳಿ ಸಾಲಕ್ಕಾಗಿ ಹೋದಾಗ ಮಹಿಳೆಯರ ಮೈಮೇಲಿನ ವಡವೆ ನೀಡಿ ಸಾಲ ನೀಡುತ್ತಾರೆ ಅಂತಹ ಸಾಲ ತಮಗೆ ಬೇಡ ಹೃದಯವಂತಿಕೆಯ ಸಾಲ ಬೇಕಾಗಿದೆ, ಇನ್ನು ಖಾಸಗೀ ಗೋಲ್ಡ್‌ ಬ್ಯಾಂಕುಗಳು ಮಹಿಳೆಯರಿಂದ ವಡವೆ ಪಡೆದು ಸಾಲ ನೀಡುತ್ತಾರೆ ಆದರೆ ಹಣ ಶೇಖರಿಸುವಷ್ಟರಲ್ಲಿ ಕಾಲ ಮೀರಿದೆ ಎಂದು ವಡೆಗಳನ್ನು ಹರಾಜು ಹಾಕುವುದರಿಂದ ಬಡವರು ಮೋಸ ಹೋಗುತ್ತಾರೆ ಇದರಿಂದ ಮಹಿಳೆಯರು ಜಾಗ್ರತರಾಗಬೇಕೆಂದ ಅವರು ದೇವಾಲಯದಲ್ಲಿ ಪೂಜೆ ಮಾಡುವ ಪೂಜಾರಿ ತಟ್ಟೆ ಗಂಟೆ ಎತ್ತಿಕೊಂಡು ಹೋದಂತೆ ಆಡಳಿತ ಮಂಡಳಿಯು ಆಗದೇ ಸಹಕಾರಿ ಬ್ಯಾಂಕ್‌ ರೈತರ ಏಳಿಗೆಗಾಗಿ ಉಳಿಸಿ ಬೆಳೆಸಬೇಕೆಂದರು.

ಶಾಸಕ ಕೊತ್ತೂರು ಮಂಜುನಾಥ್‌ ಮಾತನಾಡಿ 3 ವರ್ಷಗಳ ಹಿಂದೆ ಪಿಎಲ್‌ಡಿ ಬ್ಯಾಂಕ್‌ ಮುಚ್ಚುವ ಹಂತದಲ್ಲಿದ್ದಾಗ ಮಂಡಳಿಯ ಸದಸ್ಯರು ತಮ್ಮ ಬಳಿ ಬಂದು ನೆರೆವು ಕೋರಿದಾಗ ಹಲವಾರು ವರ್ಷಗಳ ಹಿಂದೆ 390 ಕುಟುಂಬಗಳ ಪಡೆದ ಸಾಲವನ್ನು ತಾವೇ ಮರು ಪಾವತಿ ಮಾಡಿ ನೂರಾರು ರೈತರನ್ನು ಸಾಲದಿಂದ ಋಣ ಮುಕ್ತರಾಗಿ ಮಾಡಲಾಗಿದ್ದರಿಂದ ನೂರಾರು ಎಕರೆ ಜಮೀನು ರೈತರಿಗೆ ಸೇರಿತು, ಇದರಿಂದ ತಾಲೂಕಿನ ಅಭಿವೃದ್ದಿಗೆ ಪೂರಕವಾಯಿತೆಂದ ಅವರು ಪ್ರಸ್ತುತ ರಸ್ತೆ, ಕುಡಿಯುವ ನೀರು ಎಲ್ಲವೂ ಸರಿಯಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ಮಾಡಲಾಗುವುದೆಂದರು,

ಮಾಜಿ ಸಾಸಕ ವೈ.ಸಂಪಂಗಿ ಮಾತನಾಡಿ ಸಾಲ ಪಡೆಯುವ ರೈತರು ಮುಕ್ತ ಮನಸ್ಸಿನಿಂದ ಮರು ಪಾವತಿ ಮಾಡಿ ಸಹಕಾರಿ ಬ್ಯಾಂಕ್‌ನ ಏಳಿಗೆಗಾಗಿ ಶ್ರಮಿಸಬೇಕೆಂದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಡಿಸಿ ಬ್ಯಾಂಕಿನಿಂದ 800 ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು 82 ಕುಟುಂಬಗಳಿಗೆ ಟ್ರ್ಯಾಕ್ಟರ್‌, ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ಉದ್ದಿಮೆಗಳಿಗೆ ಸಾಲ ನೀಡಿದ್ದೇವೆ, ಆದ್ದರಿಂದ ಸಹಕಾರ ಬ್ಯಾಂಕ್‌ ಎಂದಿಗೂ ರೈತರು ಮೆಚ್ಚುವ ಬ್ಯಾಂಕ್‌ ಎಂದು ಮನವರಿಕೆ ಮಾಡಿಕೊಳ್ಳಬೇಕೆಂದ ಅವರು ನೂರಾರು ಸ್ತ್ರೀಶಕ್ತಿ ಸಂಘಗಳಿಗೆ ಸಾಲದ ಚೆಕ್‌ಗಳನ್ನು ವಿತರಣೆ ಮಾಡಿದರು.

ಕೇಂದ್ರ ರೇಷ್ಮೇ ಮಂಡಳಿ ಅಧ್ಯಕ್ಷ ಎನ್‌.ಎಸ್‌.ಬಿಸೇಗೌಡ, ಎಂ.ಎಸ್‌.ಐ.ಎಲ್‌ ಅಧ್ಯಕ್ಷ ಅನಿಲ್‌ಕುಮಾರ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ತಾ.ಪಂ ಅಧ್ಯಕ್ಷೆ ಅರ್ಚನಾ, ಉಪಾಧ್ಯಕ್ಷ ಬೈರಪ್ಪ, ಆರ್‌.ಎಂ.ಸಿ ಅಧ್ಯಕ್ಷ ವಿವೇಕಾನಂದ್‌, ಪಿಎಲ್‌ಡಿ ಬ್ಯಾಂಕ್‌ ಆಡಳಿತ ಮಂಡಳಿ ಸದಸ್ಯರಾದ ಉತ್ತನೂರು ಶ್ರೀನಿವಾಸ್‌, ಬಿ.ನಾಗರಾಜ್‌, ಹನುಮಂತರೆಡ್ಡಿ, ಎಂ.ಶ್ರೀನಿವಾಸ್‌, ಗಟ್ಟಪ್ಪ, ಟಿ.ಎನ್‌.ನಾರಾಯಣಪ್ಪ ಹಾಗೂ ವ್ಯವಸ್ಥಾಪಕ ಮುನಿಯಪ್ಪ ಸೇರಿದಂತೆ ಹಲವಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 


Trending videos

Back to Top