CONNECT WITH US  

ಗ್ರಾಮೀಣ ಜನರಲ್ಲಿ ಏಡ್ಸ್‌ ಬಗ್ಗೆ ಜಾಗೃತಿ ಅಗತ್ಯ

ಭಾರತೀನಗರ: ವಿದ್ಯಾವಂತ ಯುವಕ-ಯುವತಿಯರು ಗ್ರಾಮೀಣ ಪ್ರದೇಶದಲ್ಲಿ ಎಚ್‌ಐವಿ/ಏಡ್ಸ್‌ನಂತಹ ಮಾರಕ ರೋಗಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಆರ್‌.ಶಿವಾನಂದ್‌ ತಿಳಿಸಿದರು. ಲ್ಲಿಗೆ ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾರಕ ರೋಗ "ಏಡ್ಸ್‌' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಅಸುರಕ್ಷಿತ ಲೈಂಗಿಕತೆ ಮತ್ತು ರಕ್ತಪರೀಕ್ಷೆ ಇಲ್ಲದೆ ರಕ್ತದಾನ ಮಾಡುವುದರಿಂದ ಹೆಚ್‌ಐವಿ ಸೋಂಕು ಹರಡುತ್ತದೆ. ಏಡ್ಸ್‌ನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಉದ್ದೇಶದಿಂದ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಎಚ್‌ಐವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಏಡ್ಸ್‌ ಮಹಾಮಾರಿಗೆ ಚಿಕಿತ್ಸೆ ಇಲ್ಲದಿರುವ ಕಾರಣ ಮುಂಜಾಗ್ರತಾ ಕ್ರಮಗಳೊಂದಿಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.…Õ ಗುಣಪಡಿಸಲಾಗದ ಮಾರಕ ರೋಗ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಕ್ಷಣಿಕ ಸುಖಕ್ಕೆ ಮಾರುಹೋಗಿ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಸುರಕ್ಷಿತ ವಿಧಾನಗಳನ್ನು ಅನುಸರಿಸುವ ಮೂಲಕ ಏಡ್ಸ್‌ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಕ್ತ ಪರೀಕ್ಷೆ ಮಾಡಿಸದೆ ರಕ್ತದಾನ ಮಾಡಬಾರದು.

ಒಬ್ಬ ರೋಗಿಗೆ ಬಳಸಿದ ಸಿರಿಂಜ್‌ನಿಂದ ಮತ್ತೂಬ್ಬರಿಗೆ ಚುಚ್ಚುಮದ್ದು ನೀಡದಿರುವುದು, ಒಬ್ಬರು ಬಳಸಿದ ಬ್ಲೇಡ್‌ನ್ನು ûೌರಕ್ಕೆ ಬಳಸದಂತೆ ಎಚ್ಚರ ವಹಿಸಬೇಕು ಎಂದರು.ೆÒàತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಮಹಿಳೆಯರನ್ನು ಭಾದಿಸುವ ವಿವಿಧ ರೋಗಗಳ ಬಗ್ಗೆ ವಿವರಿಸಿದ ಅವರು, ಗುಪ್ತರೋಗಗಳ ಬಗ್ಗೆ ವೈದ್ಯರೊಂದಿಗೆ ಮುಕ್ತ ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸುಖಮಯ ಜೀವನ ನಡೆಸುವಂತೆ ತಿಳಿಸಿದರು.ಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕಿ ಎ.ಕೆ.ಮೆಕಲಾ, ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳು ಹಳ್ಳಿಯ ಮುಗ್ಧ ಜನತೆಗೆ ಏಡ್ಸ್‌ ಮಾರಕ ರೋಗಗಳ ಬಗ್ಗೆ ಹರಿವು ಕೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ್‌, ಕೆ.ಎಂ.ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಚ್‌.ಐ.ವಿ ಸಮಾಲೋಚಕಿ ಆಶಾ, ಶಿಬಿರಾಧಿಕಾರಿಗಳಾದ ಜಿ.ಸಿ.ವರದರಾಜೇಗೌಡ, ಎಂ.ಪ್ರೇಮ್‌ಸಿಂಗ್‌, ನಾಗರಾಜು ಸೇರಿದಂತೆ ಇತರರಿದ್ದರು.
 

Trending videos

Back to Top