CONNECT WITH US  

ದರ್ಗಾ ಸಂಸ್ಕೃತಿ ಭಾವೈಕ್ಯತೆಯ ಪ್ರತೀಕ

ಮುಂಡರಗಿ: ಈ ನಾಡಿನಲ್ಲಿ ಶರಣರು, ಸಂತರು ಬಾಳಿ ಜನರಲ್ಲಿ ಸಾಮರಸ್ಯದ ಬಾಂಧವ್ಯ ಬೆಸೆದಿದ್ದಾರೆ. ಸೂಫಿ ಸಂತರ ದರ್ಗಾ ಸಂಸ್ಕೃತಿ ಭಾವೈಕ್ಯತೆಯ ಪ್ರತೀಕವಾಗಿ ಜನರಲ್ಲಿ ನೆಲೆ ನಿಂತಿದ್ದಾರೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ಹಜರತ್‌ ಜಲಾಲುದ್ದೀನ್‌ ಶಾ ಖಾದ್ರಿಯವರ 406ನೇ ಉರುಸಿನ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲ ಧರ್ಮಗಳು ಒಂದೇ ಆಗಿವೆ. ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುತ್ತವೆ. ದರ್ಗಾಗಳು ಜನರಲ್ಲಿ ಭಾವನಾತ್ಮಕ ಸಂಬಂಧ ಬೆಸೆದು ಜನರಲ್ಲಿ ಐಕ್ಯತೆ ಉಂಟು ಮಾಡುತ್ತವೆ ಎಂದು ಹೇಳಿದರು.

ಸಾಹಿತಿ ಎ.ಎಸ್‌.ಮಕಾನದಾರ ಮಾತನಾಡಿ, ಸೂಫಿಗಳು ಭಾರತದಲ್ಲಿ ಧಾರ್ಮಿಕ ಸಾಮರಸ್ಯ ಸಾರಿದ್ದಾರೆ. ಸೂಫಿ ಪರಂಪರೆ ಜನರ ಕಷ್ಟ-ಸುಖಗಳಲ್ಲಿ ಒಂದಾಗಿ ಬೆರೆತು ಬಾಳುವ ಸಂದೇಶ ಸಾರಿದೆ. ಸೂಫಿ ದರ್ಗಾಗಳಿಗೆ ಭಕ್ತರು ಧರ್ಮ-ಜಾತಿ ಮೀರಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ಚನ್ನವೀರ ಮಹಾಸ್ವಾಮೀಜಿ ಮಾತನಾಡಿ, ಸೂಫಿ ದರ್ಗಾಗಳು ಜನರ ಕಷ್ಟಗಳನ್ನು ಪರಿಹರಿಸುವ ಶ್ರದ್ಧಾ ಕೇಂದ್ರಗಳಾಗಿವೆ. ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದು, ಭಾÅತೃತ್ವ ಬೋಧಿಧಿಸುತ್ತವೆ ಎಂದರು. ಹೇಮಗಿರೀಶ ಹಾವಿನಾಳ ಮಾತನಾಡಿದರು. ಹಜರತ್‌ ಮೆಹಬೂಬಸಾಬ ಖಾದ್ರಿ ನೇತೃತ್ವ ವಹಿಸಿದ್ದರು. ಆರ್‌.ಎಂ.ತಪ್ಪಡಿ ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್‌ ಅಧ್ಯಕ್ಷ ನಬಿಸಾಬ ಕೆಲೂರು, ಡಿ.ಡಿ.ಮೋರನಾಳ, ಎಂ.ಎಚ್‌.ವಡ್ನಾಳ, ರಾಜಾಭಕ್ಷಿ ಬೆಟಗೇರಿ, ಖಾಜಾಸಾಬ ತಳಗಡೆ ಉಪಸ್ಥಿತರಿದ್ದರು.


Trending videos

Back to Top