CONNECT WITH US  

ಸಮುದಾಯದ ಮಾಹಿತಿ ಕಲೆ ಹಾಕಲು ವಿಶ್ವ ಬಂಟರ ಮಾಹಿತಿ ಕೋಶ

ಮಂಗಳೂರು: ವಿಶ್ವದೆಲ್ಲೆಡೆ ಇರುವ ಬಂಟ ಸಮುದಾಯದ ಜನರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹ ಮಾಡುವ ಸಲುವಾಗಿ ವಿಶ್ವ ಬಂಟರ ಮಾಹಿತಿ ಕೋಶ ಅನಾವರಣಗೊಳಿಸುವ ಉದ್ದೇಶ ವಿಶ್ವ ಬಂಟರ ಯಾನೆ ನಾಡವರ ಮಾತೃ ಸಂಘದ ಮುಂದಿದೆ ಎಂದು ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್‌ ರೈ ಹೇಳಿದರು.

ವಿಶ್ವ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎ. 2ರಂದು ನಡೆಯುವ "ಬಾಂಧವ್ಯ' ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಬಾಂಧವ್ಯ' ಕಾರ್ಯಕ್ರಮ ವಿಶ್ವದಾದ್ಯಂತ ಇರುವ ಬಂಟರನ್ನು ಒಗ್ಗೂಡಿಸುವ ಪ್ರಯತ್ನ. ವಿಶ್ವ ಬಂಟರ ಮಾಹಿತಿ ಕೋಶವನ್ನು ಇದೇ ವೇಳೆ ಅನಾವರಣ ಮಾಡಲಾಗುವುದು. ಪ್ರತಿ ಗ್ರಾಮದಿಂದ 10 ಜನರ ತಂಡವನ್ನು ಆಯ್ಕೆ ಮಾಡಿ ತರಬೇತಿ ನೀಡಿ ಬಂಟ ಸಮುದಾಯದ ಮನೆಮನೆಗೆ ತೆರಳಿ ಅವರ ಸಮಗ್ರ ಮಾಹಿತಿ ಕ್ರೋಢೀಕರಿಸುವ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿ ಬ್ರಿಗೇಡಿಯರ್‌ ಐ.ಎನ್‌. ರೈ ಮಾತನಾಡಿ, ಬದಲಾಗಿರುವ ಆಧುನಿಕ ಯುಗದಲ್ಲಿ ಸಮುದಾಯದ ಎಲ್ಲರ ಮಾಹಿತಿ ಕಲೆ ಹಾಕಿ ಕೋಶ ರಚಿಸುವ ಅವಶ್ಯವಿದೆ ಎಂದರು.

ಶ್ರೀ ರಾಮಕೃಷ್ಣ ಪ. ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಭಾಸ್ಕರ ಶೆಟ್ಟಿ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು.

ಬಂಟ ಸಮುದಾಯದ ಮುಖಂಡರಾದ ಡಾ| ಹನ್ಸರಾಜ್‌ ಆಳ್ವ, ಡಾ| ಕೆ.ಆರ್‌. ಶೆಟ್ಟಿ, ಎಚ್‌.ಆರ್‌. ಶೆಟ್ಟಿ, ಲಕ್ಷ್ಮೀ ಜಯಪಾಲ ಶೆಟ್ಟಿ, ಕೆ.ಎನ್‌. ಆಳ್ವ, ಸದಾನಂದ ಮಲ್ಲಿ, ಗೋಪಾಲಕೃಷ್ಣ ಶೇಣವ, ಪೃಥ್ವಿರಾಜ್‌ ರೈ, ಕೆ.ಪಿ. ಶೆಟ್ಟಿ, ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಖಜಾಂಜಿ ಕೆ. ಮನಮೋಹನ ಶೆಟ್ಟಿ, ಜತೆ ಕಾರ್ಯದರ್ಶಿ ಕಾಪು ಹೇಮನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಶರತ್‌ ಶೆಟ್ಟಿ ನಿರೂಪಿಸಿದರು.
 

Trending videos

Back to Top