CONNECT WITH US  

ಸಂಜನಾ ಹೊಸ ಲುಕ್‌ ನೋಡಿ ...

ಯಾಕಾಗಿ ಈ ಗೆಟಪ್‌? ಯಾವುದಾದರೂ ಸಿನಿಮಾಕ್ಕಾ?

ನಟ-ನಟಿಯರು ಆಗಾಗ ತಮ್ಮ ಲುಕ್‌, ಗೆಟಪ್‌ ಬದಲಿಸುತ್ತಿರುತ್ತಾರೆ. ಹೀರೋಗಳು ಹೇರ್‌ಸ್ಟೈಲ್‌ ಬದಲಿಸುವ ಮೂಲಕ ಸುದ್ದಿಯಾದರೆ, ನಟಿಯರು ತಮ್ಮ ಕಾಸ್ಟೂಮ್‌ಗಳಿಂದ ಸುದ್ದಿಯಾಗುತ್ತಾರೆ. ಆದರೆ, ಈ ಬಾರಿ ನಟಿ ಸಂಜನಾ ತಮ್ಮ ಹೊಸ ಹೇರ್‌ಸ್ಟೈಲ್‌ನಿಂದ ಸುದ್ದಿಯಾಗಿದ್ದಾರೆ. ಹೌದು, ಉದ್ದನೆಯ ಕೂದಲು ಬಿಟ್ಟು, ಮಿಂಚುತ್ತಿದ್ದ ಸಂಜನಾ ಈಗ ಹೊಸ ಹೇರ್‌ಸ್ಟೈಲ್‌ನಲ್ಲಿ ಕಂಗೊಳಿಸುತ್ತಿದ್ದಾರೆ. 

ಹೌದು, ಸಂಜನಾ ಈಗ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿ ಟ್ರಿಮ್‌ ಮಾಡಿದ್ದಾರೆ. ಅದು ಎಷ್ಟು ಟ್ರಿಮ್‌ ಎಂದರೆ ನೀವಿದ್ದನ್ನು ಬಾಯ್‌ಕಟ್‌ ಎಂದು ಕರೆಯಬಹುದು. ಜೊತೆಗೆ ಕೂದಲಿಗೆ ಕಲರ್‌ ಕೂಡಾ ಹಾಕಿ "ಕಲರ್‌ಫ‌ುಲ್‌' ಆಗಿದ್ದಾರೆ ಸಂಜನಾ. ಎಲ್ಲಾ ಓಕೆ, ಯಾಕಾಗಿ ಈ ಗೆಟಪ್‌? ಯಾವುದಾದರೂ ಸಿನಿಮಾಕ್ಕಾ? ಎಂದು ನೀವು ಕೇಳಿದರೆ ಸಂಜನಾ ಅದಕ್ಕೆ ಉತ್ತರಿಸಲು ಸಿದ್ಧವಿಲ್ಲ.

"ಅದು ಸೀಕ್ರೇಟ್‌. ಅದನ್ನು ಹೇಳಲ್ಲ. ನೀವು ಬೇಕಾದರೆ ಹೊಸ ಸ್ಟೈಲ್‌ ಎಂದಾದರೂ ಭಾವಿಸಬಹುದು' ಎಂಬ ಉತ್ತರ ಸಂಜನ ಅವರಿಂದ ಬರುತ್ತದೆ. ಸದ್ಯ ಸಂಜನಾ ಕನ್ನಡದಲ್ಲಿ ನಟಿಸಿರುವ "ರಾಜಾ ಸಿಂಹ' ಹಾಗೂ "ದಂಡುಪಾಳ್ಯ-3' ಚಿತ್ರಗಳು ಬಿಡುಗಡೆಯ ಹಂತಕ್ಕೆ ಬಂದಿವೆ.

ಇದಲ್ಲದೇ ಸಂಜನಾ ತೆಲುಗಿನ ಟಿವಿ ಶೋವೊಂದರಲ್ಲೂ ನಟಿಸುತ್ತಿದ್ದು, ಇಲ್ಲಿ ಸಂಜನಾ ರಾಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದಲ್ಲದೇ, ಮಲಯಾಳಂ ಹಾಗೂ ಕನ್ನಡದಲ್ಲಿ ತಯಾರಾಗುತ್ತಿರುವ ನಾಯಕಿ ಪ್ರಧಾನ ಚಿತ್ರವೊಂದರಲ್ಲೂ ಸಂಜನಾ ನಟಿಸುತ್ತಿದ್ದಾರಂತೆ. ಅದು ಬಿಟ್ಟರೆ ಒಂದ ಬ್ರಾಂಡ್‌ಗಳಿಗೆ ಅಂಬಾಸಿಡರ್‌ ಆಗಿರುವ ಖುಷಿ ಕೂಡಾ ಸಂಜನಾಗಿದೆ. 

Trending videos

Back to Top