ಸಿನಿಮಾದಲ್ಲಿ ಪ್ರೀತಿಸಿ,ನಿಜಜೀವನದಲ್ಲಿ ಒಂದಾದರು; ರಿಯಲ್‌ ಲವ್‌ಸ್ಟೋರಿ | Udayavani - ಉದಯವಾಣಿ
   CONNECT WITH US  
echo "sudina logo";

ಸಿನಿಮಾದಲ್ಲಿ ಪ್ರೀತಿಸಿ,ನಿಜಜೀವನದಲ್ಲಿ ಒಂದಾದರು; ರಿಯಲ್‌ ಲವ್‌ಸ್ಟೋರಿ

ಬೇರೆ ಯಾವ ಕ್ಷೇತ್ರದಲ್ಲೂ ಪ್ರೀತಿಸಿ ಮದುವೆಯಾದ ಜೋಡಿಗಳು ಸಿಗುವುದಿಲ್ಲ. ಆ ಮಟ್ಟಿಗೆ ಚಿತ್ರರಂಗದ ವಿಷಯದಲ್ಲಿ ಹೇಳುವುದಾದರೆ, ತೆರೆಯಾಚೆಗೂ ಅದೆಷ್ಟೋ ಲವ್‌ಸ್ಟೋರಿಗಳು ಸಿಗುತ್ತವೆ. ಹೌದು, ಒಂದು ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ ಅದೆಷ್ಟೋ ಮಂದಿ ನಿಜಜೀವನದಲ್ಲೂ ಪ್ರೀತಿ ಮಾಡಿ, ಮದುವೆಯಾದ ಉದಾಹರಣೆಗಳು ಸಿಗುತ್ತವೆ. ಅವರಿಬ್ಬರೂ ನಾಯಕ-ನಾಯಕಿಯಾಗಿಯೇ ಇರಬೇಕು ಎಂದೇನಿಲ್ಲ. ಒಂದೇ ಚಿತ್ರದಲ್ಲಿ ನಟಿಸಿದವರು, ಜೊತೆಯಾಗಿ ನಟಿಸದವರು ಸಹ ಪ್ರೀತಿ ಮಾಡಿ, ಮದುವೆಯಾದ ಘಟಣೆಗಳು ಸಿಗುತ್ತವೆ. ಇನ್ನು ನಿರ್ದೇಶಕರು ಮತ್ತು ನಟಿಯರು  ಹಾಗಾಗಿ ಲವ್‌ಸ್ಟೋರಿಗಳು ಹೇಗೆ ಮತ್ತು ಎಲ್ಲಿಂದ ಶುರುವಾಗುತ್ತವೆ ಎಂದು ಹೇಳುವುದೇ ಕಷ್ಟ ಎಂದರೆ ತಪ್ಪಿಲ್ಲ.

ಕನ್ನಡ ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾಗುತ್ತಿರುವ ಹೊಚ್ಚ-ಹೊಸ ಜೋಡಿ ಎಂದರೆ ಅದು ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌. ಆದರೆ, ಮೊದಲು ಯಾರು ಎಂದು ಹೇಳುವುದು ಕಷ್ಟ. ಬಹುಶಃ ಇತಿಹಾಸದ ಪುಟಗಳಿಗೆ ಹೋದರೆ, ಆರಂಭದಲ್ಲಿ ಸಿಗುವ ಜೋಡಿ ಎಂದರೆ ಅದು ಕಲ್ಯಾಣ್‌ ಕುಮಾರ್‌ ಮತ್ತು ರೇವತಿ. ಆ ನಂತರ ಚಿತ್ರರಂಗದ ಹಲವರು ಪ್ರೀತಿಸಿ, ಮದುವೆಯಾಗಿದ್ದನ್ನು ಕಾಣಬಹುದು.

ಸುದರ್ಶನ್‌-ಶೈಲಶ್ರೀ, ಪುಟ್ಟಣ್ಣ ಕಣಗಾಲ್‌-ಆರತಿ, ವಿಷ್ಣುವರ್ಧನ್‌-ಭಾರತಿ, ಅಮೃತಂ-ಮಂಜುಳಾ, ಸುಂದರ್‌ರಾಜ್‌-ಪ್ರಮೀಳಾ ಜೋಷಾಯ್‌, ಜೈಜಗದೀಶ್‌-ವಿಜಯಲಕ್ಷ್ಮೀ ಸಿಂಗ್‌, ಪ್ರಭಾಕರ್‌-ಜಯಮಾಲ, ಲೋಕೇಶ್‌-ಗಿರಿಜಾ ಲೋಕೇಶ್‌, ಅನಂತ್‌ ನಾಗ್‌-ಗಾಯತ್ರಿ, ದೇವರಾಜ್‌-ಚಂದ್ರಲೇಖ, ಅಂಬರೀಶ್‌-ಸುಮಲತಾ, ರಾಮು-ಮಾಲಾಶ್ರೀ, ಶಿವಮಣಿ-ತುಳಸಿ, ಅವಿನಾಶ್‌-ಮಾಳವಿಕಾ, ಎಸ್‌. ಮಹೇಂದರ್‌-ಶ್ರುತಿ, ಉಪೇಂದ್ರ-ಪ್ರಿಯಾಂಕಾ, ತಾರಾ-ವೇಣು, ಪ್ರೇಮ್‌-ರಕ್ಷಿತಾ, ರಘು ಮುಖರ್ಜಿ-ಅನು ಪ್ರಭಾಕರ್‌, ಯಶ್‌-ರಾಧಿಕಾ ಪಂಡಿತ್‌, ವಿಶ್ವಾಸ್‌-ಸ್ಫೂರ್ತಿ ... ಹೀಗೆ ಪ್ರೀತಿಸಿ ಮದುವೆಯಾದವರ ದೊಡ್ಡ ಪಟ್ಟಿಯೇ ಇದೆ.


ಇನ್ನು ಮದುವೆಯಾಗಬೇಕಿರುವವರ ಪಟ್ಟಿಯಲ್ಲಿ ಪ್ರಮುಖವಾಗಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಸಿಗುತ್ತಾರೆ. ಇಬ್ಬರ ನಿಶ್ಚಿತಾರ್ಥ ಮುಗಿದಿದ್ದು, ಇಬ್ಬರೂ ಈ ವರ್ಷ ಮದುವೆಯಾಗುವ ಸಾಧ್ಯತೆ ಇದೆ.

Trending videos

Back to Top