CONNECT WITH US  

ನಗರದಲ್ಲಿ ಹತ್ತು ದಿನ ರಾಷ್ಟ್ರೀಯ ನಾಟಕೋತ್ಸವ

ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯು ಏ.20ರಿಂದ ಹತ್ತು ದಿನಗಳ ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಂಡಿದೆ. ನಗರದ ವಸಂತನಗರ ದಲ್ಲಿರುವ ಗುರುನಾನಕ್‌ ಭವನದಲ್ಲಿ ದಕ್ಷಿಣ ಭಾರತ ರಂಗೋತ್ಸವ ಎಂಬ ಹೆಸರಿನಲ್ಲಿ ಏ.20ರಂದು ಪ್ರಾರಂಭವಾಗುವ ನಾಟಕೋತ್ಸವವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಉದ್ಘಾಟಿಸಲಿದ್ದಾರೆ ಎಂದು ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಶಿಬಿರ ನಿರ್ದೇಶಕ ಸಿ. ಬಸವಲಿಂಗಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಾಟಕೋತ್ಸವ ಆಯೋಜಿಸಲಾಗಿದೆ. ಏ.20ರಂದು ಮುಂಬೈ ತಂಡದ ನಾಟಕ "ಮೋಹೆ ಪಿಯಾ'ದಿಂದ ಪ್ರಾರಂಭವಾಗುವ ನಾಟಕೋತ್ಸವದಲ್ಲಿ ತೆಲಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಕನ್ನಡದ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕೋತ್ಸವದಲ್ಲಿ ಪಾಕಿಸ್ತಾನದ ನಿಯೋಗವೂ ಪಾಲ್ಗೊಳ್ಳಲಿದೆ ಎಂದರು. ಏ. 21ರಂದು ಹಿಂದಿಯ "ತಾವೂಸ್‌ ಚಮನ್‌ ಕಿ ಮೈನಾ', ಏ.22ರಂದು "ಹಿಂದಿಯ ತುಕ್ಕೆ ಪೆ ತುಕ್ಕ', ಏ.23ರಂದು ಕನ್ನಡದ "ತಮಾಶ', ಏ.24ರಂದು ಹಿಂದಿಯ "ಚತುಷ್‌ಕೋನ್‌', ಏ.25ರಂದು ಕನ್ನಡದ "ಆಗಮನ', ಏ.26ರಂದು ತಮಿಳಿನ "ಕುದಿರಯ ಮುಟ್ಟೈ', ಏ.27ರಂದು ತೆಲುಗು ಭಾಷೆಯ "ನಾಯಕುರಾಲು ನಾಗಮ್ಮ', ಏ.28ರಂದು ಕನ್ನಡದ "ಮುಖ್ಯಮಂತ್ರಿ' ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಏ. 29ರಂದು ಪ್ರದರ್ಶನಗೊಳ್ಳುವ ಮಲಯಾಳಂನ "ಚರಿತ್ರಪುಸ್ತಕತಿಲ್‌ ಎಕ್ಕುಓರೇಡು" ನಾಟಕದ ಮೂಲಕ ಹತ್ತು ದಿನಗಳ ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದರು.

Trending videos

Back to Top