CONNECT WITH US  

ನಮ್ಮ ಜಗಳ ಮುಗಿದಿಲ್ಲ,ಚುನಾವಣೆ ಮುಂದೂಡಿ:ಚು.ಆಯೋಗಕ್ಕೆ ಎಸ್ಪಿ ಮನವಿ!

ಲಕ್ನೋ: ಫೆ.4ರಿಂದ ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿದೆ. ಆದರೆ ಚುನಾವಣಾ ಆಯೋಗದ ಈ ಕ್ರಮದ ವಿರುದ್ಧ ಸಮಾಜವಾದಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಷ್ಟು ಬೇಗ ಚುನಾವಣೆ ನಡೆಸಲು ನಿರ್ಧರಿಸುವುದು ನಮ್ಮ ಪಕ್ಷಕ್ಕೆ ಮಾಡಿದ ಅನ್ಯಾಯ. ನಮ್ಮದಿನ್ನೂ ಜಗಳವಾಡಿ ಮುಗಿದಿಲ್ಲ. ಪಕ್ಷದ ಸ್ಥಿತಿ ಏನೆಂಬುದು ಇನ್ನೂ ಇತ್ಯರ್ಥವಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗ ದಿನಾಂಕ ನಿರ್ಧರಿಸಿದೆ.

ಇದು ಸಮಾಜವಾದಿ ಪಕ್ಷವನ್ನು ಮತ್ತಷ್ಟು ಹಣಿಯುವ ತಂತ್ರವಾಗಿದೆ. ಆದ್ದರಿಂದ ಪಕ್ಷದ ಜಗಳ ಮುಗಿಯುವಲ್ಲಿವರೆಗೆ ಚುನಾವಣೆ ನಡೆಸಬಾರದು. ಜಗಳ ಮುಗಿದ ಕೂಡಲೇ ನಾವೇ ಒಂದು ದಿನಾಂಕ ತಿಳಿಸುತ್ತೇವೆ. ಆ ನಂತರವೇ ಚುನಾವಣೆ ನಡೆಸಬಹುದು ಎಂದು ಸಮಾಜವಾದಿ ಪಕ್ಷದ ಅಖೀಲೇಶ್‌, ಮುಲಾಯಂ ಬಣಗಳು ಚುನಾವಣಾ ಆಯೋಗಕ್ಕೆ ಹೇಳಿವೆ

Trending videos

Back to Top