CONNECT WITH US  

ನಾಯಿ ಕಿವಿಯಲ್ಲಿ ಟ್ರಂಪ್‌ ಮುಖ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಗೇಲಿಗೊಳಗಾಗುವ ನಾಯಕ. ನಾಯಿಯ ಕಿವಿಯೊಂದರಲ್ಲಿದ್ದ ಗಂಟು ಟ್ರಂಪ್‌ ಮುಖವನ್ನು ಹೋಲುತ್ತಿದೆ ಎಂದು ಈಗ ಟ್ವಿಟರ್‌ ತುಂಬಾ ಗುಲ್ಲೆದ್ದಿದೆ.

ನಡೆದಿದ್ದಿಷ್ಟು, ಜೇಡ್‌ ರಾಬಿನ್ಸನ್‌ ಎಂಬುವವರ ನಾಯಿ "ಚೀಫ್'ಗೆ ಕಿವಿಯಲ್ಲಿ ಸೋಂಕು ಆಗಿತ್ತು. ಅದರ ಫೋಟೊ ತೆಗೆದು ಪಶುವೈದ್ಯೆಯೊಬ್ಬರಿಗೆ ಅವರು ಕಳುಹಿಸಿದರು. ಆ ಸೋಂಕು ವೈದ್ಯೆ ಕಣ್ಣಿಗೆ ಟ್ರಂಪ್‌ ಮುಖದ ರೀತಿ ಕಂಡಿದೆ.ಇದನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಬಹುತೇಕ ಟ್ವೀಟಿಗರು ನಾಯಿ ಕಿವಿಯಲ್ಲಿ ಟ್ರಂಪ್‌ ಮುಖ ನೋಡಿ ಥ್ರಿಲ್‌ ಆಗಿದ್ದಾರಂತೆ.

Trending videos

Back to Top