CONNECT WITH US  

ಕಾಂಗ್ರೆಸ್‌, ಬಿಜೆಪಿಗೆ ಬಂಡಾಯದ ಬಿಸಿ

ಚಾಮರಾಜನಗರ: ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಬಂಡಾಯದ ಬಿಸಿ ಎದುರಿಸುತ್ತಿವೆ. ತಮ್ಮ ಪಕ್ಷದಲ್ಲಿ ಟಿಕೆಟ್‌ ದೊರಕದ ಕಾರಣ ಕೆಲವರು  ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಹಾಲಿ 23ನೇ ವಾರ್ಡ್‌ನ ಸದಸ್ಯರಾಗಿದ್ದ ಚಿನ್ನಸ್ವಾಮಿ ಟಿಕೆಟ್‌ ಬಯಸಿದ್ದರು. ಪಕ್ಷದಲ್ಲಿ ಟಿಕೆಟ್‌ ದೊರಕದ ಕಾರಣ 15ನೇ ವಾರ್ಡ್‌ನಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಈ ವಾರ್ಡ್‌ನಲ್ಲಿ ಕಾಂಗ್ರೆಸ್‌ ಪಕ್ಷ ಬಿಎಸ್‌ಪಿಯಿಂದ ಪಕ್ಷಾಂತರಗೊಂಡಿದ್ದ ಆರ್‌.ಪಿ. ನಂಜುಂಡಸ್ವಾಮಿ ಅವರಿಗೆ ಟಿಕೆಟ್‌ ನೀಡಿದೆ. 

26ನೇ ವಾರ್ಡ್‌ಗೆ ಕಾಂಗ್ರೆಸ್‌ ಅಭ್ಯರ್ಥಿ ಮೋಹನಾಂಬ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಮೋಹನಾಂಬ ಬದಲು ನಗರಸಭೆ ಮಾಜಿ ಸದಸ್ಯ ರಾಮಸಮುದ್ರದ  ನಾಗರಾಜು ಅವರ ಪತ್ನಿ ನಾಗರತ್ನ ಅವರ ಹೆಸರನ್ನು ಸೇರ್ಪಡೆ ಮಾಡಲಾಯಿತು. ಹೀಗಾಗಿ ಮೋಹನಾಂಬ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿ ಸ್ಪರ್ಧೆಗಿಳಿದಿದ್ದಾರೆ.

ಇನ್ನು ಬಿಜೆಪಿಯಲ್ಲೂ ಬಂಡಾಯದ ಬಿಸಿ ತಟ್ಟಿದೆ. 11ನೇ ವಾರ್ಡ್‌ನಲ್ಲಿ ಸಿ.ಎಂ. ಮಂಜುನಾಥ್‌ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯವರೇ ಆದ ನವೀನ್‌ ಬಂಡಾಯವಾಗಿ ಸ್ಪರ್ಧಿಸುತ್ತಿದ್ದಾರೆ. 12ನೇ ವಾರ್ಡ್‌ನಲ್ಲಿ ಎನ್‌. ಮೋಹನ್‌ ಬಿಜೆಪಿ ಅಭ್ಯರ್ಥಿಯಾಗಿದ್ದು,

ಬಿಜೆಪಿಯವರೇ ಆದ ಇನ್ನೋರ್ವ ಮೋಹನ್‌ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. 23 ನೇ ವಾರ್ಡ್‌ನಲ್ಲಿ ಎನ್‌. ಗಾಯತ್ರಿ ಅಧಿಕೃತ ಅಭ್ಯರ್ಥಿಯಾಗಿದ್ದು, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ನಾರಾಯಣ ಪತ್ನಿ ಮಂಜುಳಾ ಹಾಗೂ ಕಲ್ಯಾಣಿ ಬಂಡಾಯವಾಗಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top