CONNECT WITH US  

ಡಿ.30ರ ಬಳಿಕ ಹಳೇ ನೋಟು ಉರುವಲಾಗಿ ಮಾರಾಟ!

ನವದೆಹಲಿ: ನೋಟು ನಿಷೇಧ ಬಳಿಕ 10 ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ಹಳೇ ನೋಟು ಸಂಗ್ರಹವಾಗಿದ್ದು, ಅವುಗಳನ್ನು ಉರುವಲಾಗಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದೆ. ನೀರು ಕಾಯಿಸಲು,ಅಡುಗೆ ಒಲೆಗೆ, ಚಳಿ ಕಾಯಿಸಲು ಸಾರ್ವಜನಿಕರು ಹಳೇ ನೋಟುಗಳನ್ನು ಸಮೀಪದ ಬ್ಯಾಂಕ್‌ಗಳಿಂದ ಪಡೆದುಕೊಳ್ಳಬಹುದು. 1 ಕೇಜಿ ಹಳೇ ನೋಟಿಗೆ 2 ರೂ. ಬೆಲೆ ನಿಗದಿ ಪಡಿಸಲಾಗಿದೆ. ಸಾಮಾನ್ಯ ಕಾಗದಕ್ಕಿಂತ ಹೆಚ್ಚು ಹೊತ್ತು ಇವುಗಳು ಉರಿಯುವುದರಿಂದ ಕಡಿಮೆ ಕಾಗದದಲ್ಲಿ ಹೆಚ್ಚು ನೀರು ಕಾಯಿಸಬಹುದು, ಚಳಿ ಕಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹಳೇ ನೋಟು ಖರೀದಿಗೆ ಆಧಾರ್‌ ಕಾರ್ಡ್‌ ಕಡ್ಡಾಯವಾಗಿರಲಿದೆ. ಇದರೊಂದಿಗೆ ಅರ್ಜಿ ಹಾಕಿದ ಕಂಪನಿಗಳಿಗೂ ನೋಟುಗಳನ್ನು ಪೂರೈಸಲು ಸರ್ಕಾರ ಮುಂದಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

Trending videos

Back to Top