CONNECT WITH US  

ಹೊಸ ವರ್ಷಕ್ಕೆ ಇನ್ಮುಂದೆ ಪಬ್‌,ಬಾರ್‌ನಲ್ಲೇ ವಸತಿ ವ್ಯವಸ್ಥೆ ಕಡ್ಡಾಯ!

ಬೆಂಗಳೂರು: ಈ ವರ್ಷ ಹೊಸ ವರ್ಷಾಚರಣೆಯ ರಾತ್ರಿ ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯದಿಂದ ರಾಜ್ಯ ಸರ್ಕಾರ ತಲೆ ತಗ್ಗಿಸುವಂತಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ತಮಗೂ ಆಗಿರುವ ಮುಜುಗರದಿಂದ ಗೃಹ ಸಚಿವರು ಗರಂ ಆಗಿದ್ದಾರೆ. ಹೀಗಾಗಿ ಇನ್ನು ಮುಂದೆ ವೀಕೆಂಡ್‌ಗಳಲ್ಲಿ ಹಾಗೂ ಹೊಸ ವರ್ಷದ ರಾತ್ರಿ ಪಬ್‌ ಗಳಲ್ಲಿ ಮತ್ತು ಬಾರ್‌ಗಳಲ್ಲಿ ಪಾರ್ಟಿ ಮಾಡಿದವರು ತಡರಾತ್ರಿಯ ನಂತರ ಮನೆಗೆ ಹೋಗುವಂತಿಲ್ಲ ಎಂದು ಅವರು ಆದೇಶ ಹೊರಡಿಸಿದ್ದು, ಪಬ್‌ ಮತ್ತು ಬಾರ್‌ ಗಳಲ್ಲಿ ಕುಡುಕ ಯುವಕ ಯುವತಿಯರಿಗೆ ಕಡ್ಡಾಯವಾಗಿ ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ.

ಅದರಂತೆ ವೀಕೆಂಡ್‌ ಮತ್ತು ಡಿ.31ರಂದು ನಗರದ ಎಲ್ಲಾ ಪಬ್‌ ಮತ್ತು ಪ್ರತಿಷ್ಠಿತ ಬಾರ್‌ಗಳಲ್ಲಿ ರಾತ್ರಿ 8 ಗಂಟೆಗೆ ಹೊರಗಿನಿಂದ ಬಾಗಿಲು ಮುಚ್ಚಲಾಗುತ್ತದೆ. ನಂತರ ಒಳಗಿರುವವರು ಅಲ್ಲೇ ಮಲಗಿ, ಬೆಳಗ್ಗೆ ಎದ್ದು ಮನೆಗೆ ಹೋಗಬೇಕು. ಇದರಿಂದ ಯಾವುದೇ ಲೈಂಗಿಕ ದೌರ್ಜನ್ಯ ನಡೆಯಲು ಅವಕಾಶ ಸಿಗುವುದಿಲ್ಲ ಎಂದು ಹೇಳಲಾಗಿದೆ.

Trending videos

Back to Top