CONNECT WITH US  

ಎಟಿಎಫ್ ಎನಿ ಟೈಮ್‌ ಫಿಟ್‌

ಒಬ್ಬ ವ್ಯಕ್ತಿ ಫಿಟ್‌ ಆಗಿ ಕಾಣಬೇಕಾದರೆ ಎಷ್ಟು ಸಮಯ ವಕೌìಟ್‌ ಮಾಡಬೇಕು?
ವ್ಯಾಯಾಮಕ್ಕೆ ಯಾವುದು ಸರಿಯಾದ ಸಮಯ? ನಾನು ತುಂಬ ಬ್ಯುಸಿ, ಅದರ ಮಧ್ಯೆಯೂ ವ್ಯಾಯಾಮ
ಮಾಡಬಹುದೇ?
-ರಾಧಾದೇವಿ, ಶ್ರೀರಂಗಪಟ್ಟಣ

ಮಕ್ಕಳ ಕಾರಣ, ತುಂಬ ಕೆಲಸದೊತ್ತಡ, ಹತ್ತಿರದಲ್ಲಿ ಆಸ್ಪತ್ರೆ ಸೌಲಭ್ಯ ಇಲ್ಲ- ಈ ಎಲ್ಲಾ ಕಾರಣಗಳಿಂದ ನಿಮಗೆ ವಕೌìಟ್‌ಗೆ ಸಮಯ ಕೊಡಲು ಆಗುತ್ತಿಲ್ಲವಾದಲ್ಲಿ ಯಾವಾಗ ಟೈಮು ಸಿಗುತ್ತೋ ಆಗಲೇ ವ್ಯಾಯಾಮ ಮಾಡಬಹುದು.

ಸಾಮಾನ್ಯವಾಗಿ 60ರಿಂದ 90 ನಿಮಿಷ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ, ದೇಹ ಸೌಂದರ್ಯಕ್ಕೆ ಒಳ್ಳೇದು. ನೀವು ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬೇಕೆಂದರೆ 40-60 ನಿಮಿಷಗಳ ಕಾರ್ಡಿಯೋ ಎಕ್ಸರ್‌ಸೈಜ್‌ ಮಾಡುವುದು ಸೂಕ್ತ. ದೇಹದ ತೂಕವನ್ನು ಕಾಯ್ದುಕೊಳ್ಳಲು ವಾರಕ್ಕೆ 3-4 ಸಲ 20 ನಿಮಿಷಗಳ ಕಾರ್ಡಿಯೋ ಎಕ್ಸರ್‌ಸೈಜ್‌ (ಓಡುವುದು, ಏರೋಬಿಕ್ಸ್‌ ಇತ್ಯಾದಿ) ಮಾಡಬೇಕಾಗುತ್ತದೆ.

ಈಗ ನಿಮ್ಮ ವಿಷಯಕ್ಕೆ ಬರೋಣ. ನಾವು ಸುಮ್ಮನೆ ಕುಳಿತಿರೋದಕ್ಕಲ್ಲ ಹುಟ್ಟಿರೋದು. ನಾವು ಓಡಾಡುತ್ತಿರಬೇಕು, ಅದೇ ವಕೌìಟ್‌, ಅದೇ ನಮ್ಮ ದೇಹದ ಕೆಲೋರಿಯನ್ನು ಬರ್ನ್ ಮಾಡುವುದು. ಅದರಿಂದ ದೇಹ ಲಘುವಾಗುತ್ತದೆ. ಹಾಗಾಗಿ ನಿಮ್ಮ ದೇಹದ ಸಂದುಗಳು ಅಂದರೆ ಜಾಯಿಂಟ್‌ಗಳು, ಮಾಂಸಖಂಡಗಳು, ಗಂಟುಗಳು ತುಂಬ ಸುಲಭವಾಗಿ ಮಡಚುತ್ತಿರಬೇಕು.

ಇದರಿಂದ ಕೆಲೋರಿ ಬರ್ನ್ ಆಗುತ್ತದೆ. ನಿಮ್ಮ ದೇಹ ತೂಕ ಕಳೆದುಕೊಂಡು ಕಳಕಳಿಯಾಗುವುದಕ್ಕೆ ಇನ್ನೊಂದು ಮಾರ್ಗ, ಆಹಾರದಲ್ಲಿ ಸಂಯಮ. ಹಾಗಾಗಿ ತಿನ್ನುವ ಆಹಾರವನ್ನೂ ಕಂಟ್ರೋಲ್‌ ಮಾಡುವುದಕ್ಕೆ ಇಂಥ ಸಮಯವೇ ಆಗಬೇಕೆಂದಿಲ್ಲವಲ್ಲಾ!

ಸಾಮಾನ್ಯವಾಗಿ ನೀವು ಮಾಡಬಹುದಾದ ವ್ಯಾಯಾಮಗಳು
-ಹಲವು ಮಹಡಿಗಳಲ್ಲಿ ನೀವು ಕೆಲಸ ಮಾಡುವುದಾದರೆ ಆದಷ್ಟು ಎಲವೇಟರ್‌ ಅಥವಾ ಲಿಫ್rಗಿಂತ ಮೆಟ್ಟಿಲು ಬಳಸಿ.
-ತುಂಬ ಹೊತ್ತು ಫೋನು ಮಾಡುವವರಾದರೆ ಓಡಾಡಿಕೊಂಡು ಮಾತಾಡಿ.
-ಕುಳಿತಲ್ಲೇ ಕೆಲಸ ಮಾಡುವಿರಾದರೆ ಆಗಾಗ ಓಡಾಡಿಕೊಂಡು ಬನ್ನಿ.
-ಪ್ರತಿ ಒಂದು ಗಂಟೆಗೂ ಕೆಲಸದಿಂದ ಬ್ರೇಕ್‌ ತೆಗೆದುಕೊಂಡು ಸ್ವಲ್ಪ ಜಾಸ್ತಿ ದೂರ ಓಡಾಡಿಕೊಂಡು ಬನ್ನಿ.
-ಕಾಲನ್ನು, ಕೈಯನ್ನು ಆಗಾಗ ಮಡಚಿ ಬಿಚ್ಚಿ ಮಾಡಿ.
-ಚೇರಲ್ಲಿ ಕುಳಿತಿರೋ ಥರ ಅರ್ಧ ಮಂಡಿಯ ಮೇಲೆ ಸುಮ್ಮನೇ ಆಧಾರವಿಲ್ಲದೇ ದಿನಕ್ಕೊಂದಷ್ಟು ಸಲ ಕುಳಿತು ನೋಡಿ.
-ಕಾಲನ್ನು ಸುಮ್ಮನೆ ಮೇಲೆತ್ತಿ ಹಾಗೇ ಸ್ವಲ್ಪ ಹೊತ್ತು ಇರಿ.
-ಎರಡೂ ಕೈಗಳನ್ನು ಹಿಂದಕ್ಕೆ ಚೇರ್‌ಗೆ ಆಧರಿಸಿ ಹಿಡಿದು ಡಿಪ್ಸ್‌ ತೆಗೆಯಿರಿ.
-ಊಟದ ಬ್ರೇಕ್‌ನಲ್ಲಿ ಹೆಚ್ಚೆಚ್ಚು ಓಡಾಡಿ.
-ನೀವು ಕೆಲಸ ಮಾಡುವಲ್ಲಿ ಈಜು ಕೊಳ ಇದ್ದರೆ ಸ್ವಲ್ಪ ಹೊತ್ತು ಈಜಾಡಿ.
-ಮನೆಗೆ ವಾಪಾಸಾಗುವಾಗ ಜಾಗ್‌ ಮಾಡು, ರನ್‌ ಮಾಡಿ.

Tags: 

Trending videos

Back to Top