CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಿಜವಾದ ಗುರುಗಳು ಯಾರು..?

ನಿಮ್ಮ ಗುರುಗಳೊಡನೆ ಕುಳಿತಿರುವಾಗ ನೀವು ಆರಾಮಾಗಿರಲು ಸಾಧ್ಯವಾದರೆ, ಅವರು ನಿಮ್ಮ ಗುರುಗಳಲ್ಲ. ಗುರುಗಳೊಡನೆ ಕುಳಿತಾಗ ನೀವು ಬೆದರಿಕೆಗೆ ಒಳಗಾಗುತ್ತೀರಿ. ನೀವು ಯಾರು ಅನ್ನುವುದು ಗುರುಗಳ ಎದುರಿನಲ್ಲಿ ಎಷ್ಟು ಕ್ಷುಲ್ಲಕವಾಗುತ್ತದೆಯೆಂದರೆ ನೀವು ಯಾರು ಅನ್ನುವುದು ಗುರುಗಳ ಎದುರಿನಲ್ಲಿ ನಡುಗತೊಡಗುತ್ತದೆ. ಹಾಗಾದಾಗ ಮಾತ್ರ ಅವರು ನಿಮ್ಮ ಗುರುಗಳು. ಗುರುಗಳ ಎದುರಿನಲ್ಲಿ ನೀವು ಆರಾಮವಾಗಿರುವುದಕ್ಕಾದರೆ ಅವರು ನಿಮ್ಮ ಗುರುಗಳಲ್ಲ. ಏಕೆಂದರೆ ಅಂತಹವರು ನಿಮ್ಮ ಮಿತಿಗಳನ್ನು ಬೆಂಬಲಿಸುತ್ತಿರುತ್ತಾರೆಯೇ ಹೊರತು ನಿಮ್ಮ ಮಿತಿಗಳ ಬಗ್ಗೆ ಭೀತಿ ಹುಟ್ಟಿಸುತ್ತಿರುವುದಿಲ್ಲ.

ಯಾರ ಸನ್ನಿಧಿಯಲ್ಲಿ ಏನು ಮಾಡಬೇಕೆಂದು ಗೊತ್ತಾಗುವುದಿಲ್ಲವೋ ಅವರು ನಿಮ್ಮ ಗುರು. ಅವರ ಎದುರಿನಲ್ಲಿ ಏನು ಮಾಡಬೇಕೆಂದು ನಿಮಗೆ ಗೊತ್ತಾಗುವುದಿಲ್ಲ, ಆದರೂ ಎಲ್ಲವೂ ಆಗುತ್ತಿರುತ್ತದೆ, ನಿಜವಾಗಿ ಅವರೇ ನಿಮ್ಮ ಗುರುಗಳು. ನೀವು ಇರುವ ರೀತಿಯನ್ನು ನಾಶ ಮಾಡಿ, ಸೃಷ್ಟಿಕರ್ತ ಉದ್ದೇಶಿಸಿದಂತೆ ಸೃಜನಶೀಲರಾಗುವಂತೆ ಮಾಡುವವರೇ ಗುರುಗಳು. ಮೊದಲನೆಯದಾಗಿ ನೀವು ಗುರುಗಳನ್ನು ಹುಡುಕಬಾರದು. ನಿಮ್ಮಲ್ಲಿ ಅರಿತುಕೊಳ್ಳಬೇಕೆಂಬ ಆಳವಾದ ಒಂದು ಹಂಬಲವನ್ನು ಸೃಷ್ಟಿಸಿಕೊಳ್ಳಿ, ಆಗ ಗುರುಗಳು ಸಂಭವಿಸುತ್ತಾರೆ. ಒಳ್ಳೆಯ ಗುರುಗಳನ್ನು ಆರಿಸಿಕೊಳ್ಳಲು, ಹುಡುಕಿಕೊಂಡು ಹೋಗಬೇಡಿ. ಆಳವಾದ ಹಂಬಲವನ್ನು ಸೃಷ್ಟಿಸಿಕೊಳ್ಳಿ, ಸಾಕು.

ನೀವು ಗುರು ಎಂದು ಕರೆಯುವಂಥದ್ದು ಸಂಭವಿಸುತ್ತದೆ, ಏಕೆಂದರೆ ಗುರು ಅನ್ನುವುದು ವ್ಯಕ್ತಿಯಲ್ಲ. ಗುರು ಅನ್ನುವುದು ಒಂದು ನಿರ್ದಿಷ್ಟವಾದ ಅವಕಾಶ, ನಿರ್ದಿಷ್ಟವಾದ ಚೈತನ್ಯ. ಅದು ನಿಮಗೆ ಸಂಭವಿಸಲು ಮಾತ್ರ ಸಾಧ್ಯ. ಗುರುಗಳೆಂದರೆ ನೀವು ಭೇಟಿಯಾಗುವ, ಕೈಕುಲುಕುವ, ನಮಸ್ಕಾರ ಮಾಡುವ, ಇದನ್ನೋ, ಅದನ್ನೋ ನೀಡಿ ಎಂದು ನೀವು ಹೋಗಿ ಬೇಡಿಕೊಳ್ಳುವ ವ್ಯಕ್ತಿಯಲ್ಲ. ನೀವು ಗುರು ಎಂದು ಕರೆಯುವ ಆ ಅವಕಾಶ, ಆ ಚೈತನ್ಯ ನಿಮಗೆ ಸಂಭವಿಸುತ್ತದೆ, ಅದು ನಿಮ್ಮನ್ನು ಸಂಪೂರ್ಣವಾಗಿ ಸದೆ ಬಡಿಯುತ್ತದೆ. ನೀವು ಇರುವ ರೀತಿಯನ್ನು ನಾಶಮಾಡಿ ನೀವು ಅಪರಿಮಿತರಾಗುವಂತೆ ಮಾಡುತ್ತದೆ. ಇಂತಹ ಗುರುಗಳ ಕೃಪೆಯಿಂದ ಸೃಷ್ಟಿಕರ್ತನು ನೀವು ಏನಾಗಬೇಕೆಂದು ಉದ್ದೇಶಿಸಿದ್ದಾನೋ ಆ ರೀತಿ ಆಗುತ್ತೀರಿ. 

ಇಂದು ಹೆಚ್ಚು ಓದಿದ್ದು

ಷಷ್ಠಿ ಮಹೋತ್ಸವದ ಅಂಗವಾಗಿ ನೂತನ ಸಭಾ ವೇದಿಕೆಯನ್ನು ಉದ್ಘಾಟಿಸಲಾಯಿತು.

Nov 24, 2017 02:46pm
Back to Top