CONNECT WITH US  

ವಿಷಮಿಸಬಲ್ಲ ಮೌಖೀಕ ಹಾನಿಗಳು

ಲ್ಯುಕೊಪ್ಲಾಕಿಯಾ

ಮನುಷ್ಯನಿಗೆ ಅತಿಹೆಚ್ಚು ಉಂಟಾಗುವ ಕ್ಯಾನ್ಸರ್‌ಗಳ ಪೈಕಿ ಬಾಯಿ ಮತ್ತು ಓರೊಫ‌ರಿಂಜಿಯಲ್‌ (ಬಾಯಿಯಿಂದ ತೊಡಗಿ ಕುತ್ತಿಗೆಯ ತನಕ ಆಸುಪಾಸಿನ ಭಾಗಗಳು) ಕ್ಯಾನ್ಸರ್‌ಗಳು ಆರನೆಯ ಸ್ಥಾನದಲ್ಲಿವೆ. ಈ ಕ್ಯಾನ್ಸರ್‌ಗೆ ತುತ್ತಾಗಿರುವವರು 5,00,000 ಮಂದಿ ಇದ್ದಾರೆ ಎಂದು ಅಂದಾಜಿಸಲಾಗಿದ್ದು, ವಾರ್ಷಿಕವಾಗಿ ಇದು ಕಾಣಿಸಿಕೊಳ್ಳುವ ಪ್ರಮಾಣ 2,75,000 ಆಗಿದೆ. ಜಾಗತಿಕವಾಗಿ, ಬಾಯಿಯ ಕುಳಿಯ ಸಹಿತ ಶ್ವಾಸ-ಜೀರ್ಣಾಂಗ ವ್ಯೂಹದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳ ಪೈಕಿ ಶೇ.90 ಪ್ರಕರಣಗಳು ಸ್ಕ್ವಾಮಸ್‌ ಸೆಲ್‌ ಕಾರ್ಸಿನೊಮಾ (ಎಸ್‌ಸಿಸಿ) ಆಗಿರುತ್ತವೆ. ಈ ಹಾನಿ ಆ ಭಾಗದಲ್ಲಿರುವ ದುಗ್ಧರಸ ಗ್ರಂಥಿಗಳಿಗೂ ಹರಡುವ ಅತಿಹೆಚ್ಚು ಸಾಧ್ಯತೆ ಹೊಂದಿದೆ. ಓಂಕಾಲಜಿ ಚಿಕಿತ್ಸಾ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಉಂಟಾಗಿದ್ದರೂ ಬಾಯಿಯ ಎಸ್‌ಸಿಸಿಯಿಂದ ರೋಗಿ ಸಾವನ್ನಪ್ಪುವ ಸಂಖ್ಯೆ ಇನ್ನೂ ಹೆಚ್ಚು ಪ್ರಮಾಣದಲ್ಲಿಯೇ ಇದೆ. ಬಾಯಿಯ ಎಸ್‌ಸಿಸಿಗೆ ತುತ್ತಾಗಿರುವವರಲ್ಲಿ ಐದು ವರ್ಷಗಳ ಒಟ್ಟಾರೆ ಬದುಕುಳಿದ ದರವು ಶೇ.60.8 ಆಗಿದೆ. ಕಾಯಿಲೆಯು ಸ್ಥಳೀಯ ಮಟ್ಟದಲ್ಲೇ ಇದ್ದಾಗ (ಸ್ಟೇಜ್‌ ಐಮತ್ತು ಐಐ) ಅದು ಪತ್ತೆಯಾದರೆ ಬದುಕುಳಿಯುವ ಸಾಧ್ಯತೆ ಹೆಚ್ಚು (ಶೇ.82.3) ಇರುತ್ತದೆ ಹಾಗೂ ದುಗ್ಧರಸ ಗ್ರಂಥಿಗಳಿಗೆ ವಿಸ್ತರಣೆಯಾಗಿದ್ದಲ್ಲಿ ಬದುಕುಳಿಯುವ ಸಾಧ್ಯತೆ ಕಡಿಮೆ (ಶೇ.55.6) ಇರುತ್ತದೆ. ರೋಗಿಯ ಬಾಯಿಯ ಎಸ್‌ಸಿಸಿ ವಿಸ್ತರಣೆಯಾಗಿದ್ದಲ್ಲಿ ಬದುಕುಳಿಯುವ ಸಾಧ್ಯತೆ ಶೇ.33.5ಕ್ಕಿಳಿಯುತ್ತದೆ. ಜಗತ್ತಿನ ಎಲ್ಲ ದೇಶಗಳಿಗೆ ಹೋಲಿಸಿದರೆ ಬಾಯಿಯ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಭಾರತದಲ್ಲಿ ಅತಿಹೆಚ್ಚು. ಪುರುಷರ ಮರಣಕ್ಕೆ ಕಾರಣವಾಗುವ ಕ್ಯಾನ್ಸರ್‌ಗಳಲ್ಲಿ ಬಾಯಿಯ ಕ್ಯಾನ್ಸರ್‌ ಪ್ರಥಮ ಸ್ಥಾನದಲ್ಲಿದ್ದರೆ, ಮಹಿಳೆಯರಲ್ಲಿ ತೃತೀಯ ಸ್ಥಾನದಲ್ಲಿದೆ. 

ಗಡ್ಡೆಯ ಹಂತದಲ್ಲಿದ್ದಾಗಲೇ ರೋಗಪತ್ತೆ ಆಗುವುದು ಕ್ಯಾನ್ಸರ್‌ ಕಾಯಿಲೆಯ ಮುನ್ನರಿವನ್ನು ನಿರ್ಣಯಿಸುವಲ್ಲಿ ಮುಖ್ಯವಾಗಿರುತ್ತದೆ, ಏಕೆಂದರೆ ಆರಂಭಿಕ ಹಂತಗಳಲ್ಲೇ ಪತ್ತೆಯಾದರೆ ಬದುಕುಳಿಯುವ ಪ್ರಮಾಣ ಹೆಚ್ಚು. ಆದ್ದರಿಂದಲೇ ಬಾಯಿಯ ಎಸ್‌ಸಿಸಿ ಅತ್ಯಂತ ಆರಂಭಿಕ ಹಂತದಲ್ಲಿಯೇ ಅಂದರೆ, ವಿಸ್ತರಣಪೂರ್ವ ಅಥವಾ ವಿಸ್ತರಣಸಂಭಾವ್ಯ ಹಂತದಲ್ಲಿ ಪತ್ತೆಯಾಗುವುದು ಅಗತ್ಯ. ಬಾಯಿಯ ಸ್ಕ್ವಾಮಸ್‌ ಎಪಿಥೇಲಿಯಲ್‌ ಡಿಸ್ಪಾ$Éಸಿಯಾ (ಒಇಡಿ)ವು ಬಾಯಿಯ ಸ್ಕ್ವಾಮಸ್‌ ಸೆಲ್‌ ಕಾರ್ಸಿನೊಮಾ (ಒಎಸ್‌ಸಿಸಿ) ಆಗಿ ವಿಸ್ತರಣಶೀಲವಾಗಿ ಪರಿವರ್ತನೆ ಹೊಂದುವುದಕ್ಕೆ ಸಂಬಂಧಿಸಿದೆಯಾದ್ದರಿಂದ ಅದು ವೈದ್ಯಕೀಯ ಪ್ರಾಮುಖ್ಯವಾಗಿದೆ.

ವೈದ್ಯಕೀಯವಾಗಿ ಒಇಡಿ ಈ ಚಿಹ್ನೆ ಅಥವಾ ಲಕ್ಷಣಗಳೊಂದಿಗೆ ಗಮನಕ್ಕೆ ಬರಬಹುದು:
1) ಲ್ಯುಕೊಪ್ಲಾಕಿಯಾ (ನಾಲಗೆ, ನಾಲಗೆಯ ಬದಿಗಳಲ್ಲಿ ಬಿಳಿ ಮಚ್ಚೆಯಂತಹ ರಚನೆಗಳು): ಹೊಮೊಜಿನಸ್‌ (ಮಟ್ಟಸ, ತೆಳುವಾದ, ಸಮಾನವಾಗಿ ಬಿಳಿಯಾದ)
2) ಬಿಳಿ ಮತ್ತು ಕೆಂಪು / ಎರಿಥ್ರೊಲ್ಯುಕೊಪ್ಲಾಕಿಯಾ: ಸಮರೂಪಿಯಲ್ಲದ ಚುಕ್ಕೆಗಳು ಅಥವಾ ಗಂಟುಗಳು
3) ವೆರುಕಾಸ್‌ ಲ್ಯುಕೊಪ್ಲಾಕಿಯಾ
4) ಎರಿಥ್ರೊಪ್ಲಾಕಿಯಾ

ವಿಶ್ವ ಆರೋಗ್ಯ ಸಂಸ್ಥೆಯು ಎಪಿಥೇಲಿಯಲ್‌ ಜೀವಕೋಶಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ನಿರ್ದಿಷ್ಟ ಲಘು, ಮಧ್ಯಮ, ತೀವ್ರ ಮತ್ತು ಕ್ಯಾನ್ಸರ್‌ಸೂಚಕ ಎಂದು ವಿಭಾಗಿಸಿದೆ. ಈ ನಿರ್ದಿಷ್ಟ ವಿಭಾಗಗಳಲ್ಲಿ ಸೇರದ ಹಲವು ಎಪಿಥೇಲಿಯಲ್‌ ಬದಲಾವಣೆಗಳನ್ನು ವ್ಯಕ್ತಿ ಹೊಂದಿದ್ದರೂ ಒಇಡಿಯನ್ನು ಊತಕಶಾಸ್ತ್ರೀಯ (ಹಿಸ್ಟಾಲಜಿಕಲಿ)ವಾಗಿ ಮಾತ್ರ ಪತ್ತೆ ಮಾಡಬಹುದಾಗಿದೆ. ವಿಸ್ತರಣಶೀಲ ಪರಿವರ್ತನೆಯ ಅಪಾಯ ಶೇ.6.6ರಿಂದ ಶೇ.36.4ರ ನಡುವೆ ಇರುತ್ತದೆ ಎಂಬುದಾಗಿ ವರದಿಯಾಗಿದೆ. 

ಹೆಚ್ಚುವರಿ ವಿಸ್ತರಣಶೀಲ ಪರಿವರ್ತನೆಯ ಜತೆಗೆ ಸಂಬಂಧ ಹೊಂದಿರುವ ಅಪಾಯಾಂಶಗಳು ಹೀಗಿವೆ: ವ್ಯಕ್ತಿ ಸ್ತ್ರೀಯಾಗಿರುವುದು, ಹಾನಿ ದೀರ್ಘಾವಧಿಯಿಂದ ಇರುವುದು. ಈಡಿಯೊಪಾಥಿಕ್‌ ಲ್ಯುಕೊಪ್ಲಾಕಿಯಾ (ಉದಾ.: ಧೂಮಪಾನಿಗಳಲ್ಲದವರು), ನಾಲಗೆಯ ತಳಭಾಗ ಮತ್ತು ಅಥವಾ ಬಾಯಿಯ ತಳ, ಗಾತ್ರವು ಪಿ200 ಎಂಎಂ2 ಆಗಿರುವುದು, ಸಮರೂಪಿಯಾಗಿಲ್ಲದಿರುವುದು ಹಾಗೂ ಡಿಸ್ಪಾ$Éಸಿಯಾ ಹೆಚ್ಚು ಮಟ್ಟದಲ್ಲಿರುವುದು, ವೆರುಕಾಸ್‌ ಸಬ್‌ಟೈಪ್‌ ಮತ್ತು ಬಹು ಹಾನಿ ಕಾಣಿಸಿಕೊಂಡಿರುವುದು.

ರೋಗಿಯೊಬ್ಬನಲ್ಲಿ ಪಿಎಂಡಿ ಪತ್ತೆಯಾಗಿದೆ ಎಂದರೆ ಅದರ ವಿಸ್ತರಣಶೀಲ ಪರಿವರ್ತನೆಯನ್ನು ತಡೆಯಲಸಾಧ್ಯ ಎಂದರ್ಥವಲ್ಲ. ಅನೇಕ ಹಾನಿಗಳು ಅಭಿವೃದ್ಧಿ ಹೊಂದುವುದಿಲ್ಲ, ಇನ್ನು ಕೆಲವು ಕ್ರಮೇಣ ಬಗೆಹರಿಯುತ್ತವೆ; ಆದರೆ ವೈದ್ಯಕೀಯ ಸನ್ನಿವೇಶದಲ್ಲಿ ಪ್ರತೀ ವೈಯಕ್ತಿಕ ಪ್ರಕರಣಗಳ ಸ್ವಭಾವವನ್ನು ಊಹಿಸುವುದು ಸರ್ವಥಾ ಅಸಾಧ್ಯ. ಅಲ್ಲದೆ, ಪಿಎಂಡಿ ಹೊಂದಿರುವ ರೋಗಿಗಳು ಒಎಸ್‌ಸಿಸಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ. ಪಿಎಂಡಿಯ ಮುಂದುವರಿದ ಹಂತಗಳಿಗೆ ಹೋಲಿಸಿದರೆ, ಡಿಸ್ಪಾಸಿಯಾ ಮತ್ತು ಕ್ಯಾನ್ಸರ್‌ಸೂಚಕ ಕಾರ್ಸಿನೋಮಾಗಳನ್ನು ಕಡಿಮೆ ತೀವ್ರತೆಯ, ಬಹುತೇಕ ಸಲ ಒಂದೇ ಬಗೆಯ ಚಿಕಿತ್ಸೆಯಿಂದ ಹಾಗೂ ಕಡಿಮೆ ಅಲ್ಪಕಾಲಿಕ ಹಾಗೂ ದೀರ್ಘ‌ಕಾಲಿಕ ವಿಷಾಂಶವಿದ್ದು ನಿಭಾಯಿಸ ಬಹುದು, ಅಲ್ಲದೆ ಇದಕ್ಕೆ ಖರ್ಚು ಕೂಡ ಕಡಿಮೆ.

ಹೆಚ್ಚು ಅಪಾಯಾಂಶವುಳ್ಳ ಜನರಲ್ಲಿ ತೀವ್ರತಾಪೂರ್ವ ಹಾನಿಗಳು ಮತ್ತು ಬಾಯಿಯ ಕ್ಯಾನ್ಸರ್‌ ತಪಾಸಣೆಯನ್ನು ವೀಕ್ಷಣೆಯ ಮೂಲಕ ನಡೆಸುವುದರಿಂದ ಸೀಮಿತ ಸಂಪನ್ಮೂಲಗಳ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ತಪಾಸಣೆಯನ್ನು ಕಡಿಮೆ ವೆಚ್ಚದಲ್ಲಿ ಒದಗಿಸಬಹುದಾಗಿದೆ. ತಂಬಾಕು ಬಳಕೆದಾರರಂತಹ ಅಧಿಕ ಅಪಾಯ ಹೊಂದಿರುವ ಜನರಲ್ಲಿ ತಪಾಸಣೆಯನ್ನು ಪರಿಣತ ತಜ್ಞರಿಂದ ನಡೆಸುವುದರ ಮೂಲಕ ಮೃತ್ಯು ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ, ಹೀಗೆ ಕಡಿಮೆ ಮಾಡಬಹುದಾದ ಸಂಭಾವ್ಯ ಮೃತ್ಯು ಪ್ರಮಾಣ ಜಾಗತಿಕವಾಗಿ 37,000 ಆಗಿದೆ. ಬಾಯಿಯ ಕ್ಯಾನ್ಸರನ್ನು ಅತಿ ಶೀಘ್ರವಾಗಿ, ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದರಿಂದ ಚಿಕಿತ್ಸಾ ವೆಚ್ಚವನ್ನು ಕಡಿಮೆಗೊಳಿಸಿ ಆರೋಗ್ಯ ಸೇವೆಯನ್ನು ಕೈಗೆಟಕುವ ಮಟ್ಟದಲ್ಲಿ ಇರಿಸಬಹುದಾಗಿದೆ.

ಹಾನಿಗಳನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕುವುದು ಕೂಡ ಪ್ರಯೋಜನಕಾರಿ. ಏಕೆಂದರೆ ಆ ಮೂಲಕ ನಿಖರ ಮತ್ತು ನಿರ್ಣಾಯಕ ರೋಗನಿದಾನ, ಹಾನಿಯ ಮುಚ್ಚಿಕೊಳ್ಳುವಿಕೆಯ ಕ್ಷಿಪ್ರ ಗುರುತಿಸುವಿಕೆ, ಡಿಸ್ಪಾಸ್ಟಿಕ್‌ ಮ್ಯುಕೋಸಾವನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವುದು ಹಾಗೂ ಪುನರಾವರ್ತನೆಗೊಳ್ಳುವ ಮತ್ತು ಡಿಸ್ಪಾಸ್ಟಿಕ್‌ ಕಾಯಿಲೆಯನ್ನು ತಡೆಯುವುದು ಸಾಧ್ಯವಾಗುತ್ತದೆ. 

- ಡಾ| ಆದರ್ಶ್‌ ಕುಡ್ವ
ಅಸಿಸ್ಟಂಟ್‌ ಪ್ರೊಫೆಸರ್‌
ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ, ಮಣಿಪಾಲ ದಂತವೈದ್ಯಕೀಯ ಕಾಲೇಜು, ಮಣಿಪಾಲ

 

Trending videos

Back to Top