ನಮ್ಮೂರ ಹಬ್ಬ: ಕರಾವಳಿ ಗರಿಗೆ ಭೋಜನ, ಮನರಂಜನೆ,ಆಟೋಟ


Team Udayavani, Jan 21, 2017, 12:32 PM IST

55787.jpg

ದಕ್ಷಿಣ ಕನ್ನಡದಿಂದ ಬಂದವರಿಗೆ ತಮ್ಮ ಊರನ್ನು ನೆನಪು ಮಾಡಿಕೊಳ್ಳಲು ಮತ್ತೆ ಸಮಯ ಬಂದಿದೆ. ತಮ್ಮೂರಿನ ಹಬ್ಬ, ಹರಿದಿನ, ಊಟ, ಉಪಚಾರ, ಆಟೋಟಗಳನ್ನು ಈ ನಗರದಲ್ಲೇ ಕಣ್ತುಂಬಿಕೊಳ್ಳುವ ತಾಲ ಇದು. ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್‌ ಹಮ್ಮಿಕೊಳ್ಳೋ “ನಮ್ಮೂರ ಹಬ್ಬ’ ನಾಲ್ಕನೇ ಬಾರಿಗೆ  ನಿಮ್ಮ ಬೆಂಗಳೂರಿನಲ್ಲಿ ಆಯೋಜನೆಂಗೊಂಡಿದೆ.

ಬೆಂಗಳೂರಿನಲ್ಲಿ ಸರಿಸುಮಾರು 15 ಲಕ್ಷದಷ್ಟು ಕರಾವಳಿಯ ಜನರಿದ್ದು ಕರಾವಳಿಯ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿ¨ªಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯ ಇದರ ಉದ್ದೇಶವಂತೆ.  

ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭುಜಂಗ ಕೊರಗ ಅವರು  ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ವಿದ್ಯುಕ್ತ ಚಾಲನೆ ನೀಡಲಿ¨ªಾರೆ. ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಕಾಟೂìನಮ್‌ ಹಬ್ಬಗಳನ್ನು ಗಣ್ಯರು ಉದ್ಗಾಟಿಸಲಿದ್ದಾರೆ. ಸಂಜೆ ಗಣ್ಯರ ಸಮ್ಮುಖದಲ್ಲಿ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಪ್ರತಿಷ್ಠಿತ “ಕಿರೀಟ ಪ್ರಶಸ್ತಿ’ಯನ್ನು ಮಾಜಿ ಅಡ್ವೊಕೇಟ್  ಜನರಲ್ ಬಿ.ವಿ.ಆಚಾರ್ಯ ಅವರಿಗೆ ಪ್ರದಾನ ಮಾಡಲಾಗುತ್ತದೆ. 

ಕರಾವಳಿಯ ಜನಪದ ವಾದ್ಯಗಳ ಮಹಾಮೇಳ ಇರುತ್ತದೆಗಾಯಕರಾದ ಎಂ.ಡಿ.ಪಲ್ಲವಿ, ಸುಪ್ರಿಯಾ ರಘುನಂದನ್‌, ವಿನಯ  ನಾಡಿಗ್‌, ಅಭಿನವ್‌ ಭಟ್‌ ಹಾಗು ಸಾನ್ವಿ ಶೆಟ್ಟಿ ಆಯ್ದ ಜನಪ್ರಿಯ ಭಾವಗೀತೆ ಹಾಗು ಸಿನೆಮಾ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಲಿ¨ªಾರೆ. ಕರಾವಳಿ ವೈಭವ ಎನ್ನುವ ವಿಶೇಷ ನೃತ್ಯ ರೂಪಕ, ಯಕ್ಷಗಾನದ ವಿಭಿನ್ನ ವೇಷಗಳ ಯಕ್ಷರೂಪಕ, ಚಂದನ್‌ ಶೆಟ್ಟಿ ಅವರಿಂದ ಕನ್ನಡದ ರ್ಯಾಪ್‌ ಹಾಡುಗಳು, ರಾಘವೇಂದ್ರ ಹೆಗಡೆ ಅವರಿಂದ ಮರಳು ಚಿತ್ರಕಲೆ ರಂಜಿಸಲಿವೆ.

ಚಪ್ಪರ ಎನ್ನುವ ಎರಡನೇ ವೇದಿಕೆಯಲ್ಲಿ ಭಜನೆ, ಮಕ್ಕಳ ಯಕ್ಷಗಾನ , ಜಾದು ಮೂರು ವರ್ಷದ ಒಳಗಿನ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿವೆ.

ಎರಡನೇ ದಿನ ಅಪರೂಪದ ಜನಪದ ಕ್ರೀಡೆಗಳಿಗೆ ವೇದಿಕೆ-ಬಯಲಾಟ. ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆ, ವಯಸ್ಕರರಿಗಾಗಿ ಲಗೋರಿ, ಹಗ್ಗ ಜಗ್ಗಾಟ ಹಾಗು ಇತರೇ ಕರಾವಳಿಯ ಗ್ರಾಮೀಣ ಕ್ರೀಡೆಗಳು ಇರಲಿವೆ. ವಿವಿಧ ವಯೋಮಾನದ ಎರಡು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. 

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೊರನಾಡಿನ ಯುವ ಉದ್ಯಮಿ ವಕ್ವಾಡಿ ಪ್ರವೀಣ ಶೆಟ್ಟಿ ಅವರಿಗೆ ಸಾಧನೆಗಾಗಿ  “ಕಿರೀಟ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಸಂಜೆಯ ಮನರಂಜನೆಯ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸೂÅರು ಸಂಯೋಜನೆಯಲ್ಲಿ  ಪಾಶ್ಚಾತ್ಯ ಮತ್ತು ಕರಾವಳಿ ವಾದ್ಯಗಳ ವಿಭಿನ್ನ ಜುಗಲ್ ಬಂದಿ, ಡ್ರಾಮಾ ಜೂನಿಯರ ಖ್ಯಾತಿಯ ಅಚಿಂತ್ಯ, ಮಹೇಂದ್ರ, ತುಷಾರ್‌, ಸೂರಜ್‌ ಅವರಿಂದ ನಮ್ಮೂರ್‌ ಡ್ರಾಮಾ, ಅಂತರರಾಷ್ಟ್ರೀಯ ಖ್ಯಾತಿಯ ಸರವಣ ಧನಪಾಲ್ ಅವರ ವಿಶೇಷ ನೃತ್ಯ, ಕರಾವಳಿಯ ಅಂತರರಾಷ್ಟ್ರೀಯ ಪ್ರತಿಭೆಗಳಿಂದ ನೃತ್ಯೋತ್ಸವ ಹಾಗು ಇನ್ನಿತರ ಮನರಂಜನೀಯ ಕಾರ್ಯಕ್ರಮಗಳು ಇರಲಿವೆ.

ಚಪ್ಪರದ ವೇದಿಕೆಯಲ್ಲಿ ಸುಗಮ ಸಂಗೀತ, ಕುಡುಂಬಿ ಜನಾಂಗದ ಕಾರ್ಯಕ್ರಮ, ಜ್ಯೂಸು ತಯಾರಿಕಾ ಪ್ರಾತ್ಯಕ್ಷಿಕೆ , ಕೊರಗರಿಂದ ಕಾರ್ಯಕ್ರಮ, ಮಕ್ಕಳಿಗೆ  ಚಿತ್ರಕಲಾ ಸ್ಪರ್ಧೆ, ಆದರ್ಶ ದಂಪತಿ ಸ್ಪರ್ಧೆ ನಡೆಯಲಿವೆ. 

ಜೊತೆಗೆ ನಮ್ಮೂರ ಹಬ್ಬದ ಎರಡು ದಿನ ಕೂಡ ಗಾಳಿಪಟ ಉತ್ಸವ, ಫೋಟೋ ಸಂತೆ ಮತ್ತು ಕಾಟೂìನು ಹಬ್ಬವು ಈ ಬಾರಿಯ ವಿಶೇಷ ಆಕರ್ಷಣೆಯಾಗಿರಲಿದೆ. ಈ ಎಲ್ಲ ಮನರಂಜನೆಯ ಜೊತೆಗೆ ನಮ್ಮೂರ ಹಬ್ಬದಲ್ಲಿ ಕರಾವಳಿಯಿಂದ ಬಂದ ನುರಿತ ಬಾಣಸಿಗರು ಸ್ಥಳದÇÉೇ ತಯಾರಿಸುವ ನೀರು ದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗು ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳು ನಮ್ಮೂರ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ. ಹಾಗು ಕರಾವಳಿಯಿಂದ ತಂದ ತಾಜಾ ತರಕಾರಿಗಳ ಮಾರಾಟದ ಜೊತೆಗೆ ಇನ್ನಿತರ ವಿಶೇಷ ವಸ್ತುಗಳು ಕೂಡ ಲಭ್ಯವಿರುತ್ತದೆ.

ಎಲ್ಲಿ?: ಚಂದ್ರಗುಪ್ತ ಮೌರ್ಯ ಕ್ರೀಡಾಂಗಣ, ಶಾಲಿನಿ ಗ್ರೌಂಡ್‌, ಜಯನಗರದ 5ನೇ ಹಂತ
ಯಾವಾಗ?: ಜ, 21 ಮತ್ತು 22, ಶನಿವಾರ, ಭಾನುವಾರ, ಬೆಳಿಗ್ಗೆ 10 ರಿಂದ ರಾತ್ರಿ 10ರವರೆಗೆ
ಪ್ರವೇಶ: ಉಚಿತ

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳು ಖುಲಾಸೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.