CONNECT WITH US  

ಸಂಕ್ರಾಂತಿಗೆ ಭರ್ಜರಿ ಕಾರ್ಯಕ್ರಮಗಳು!

ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್‌ ಸುವರ್ಣ ವಾಹಿನಿ ತನ್ನ ವೀಕ್ಷಕರಿಗೆ "ಭರ್ಜರಿ' ಕಾರ್ಯಕ್ರಮಗಳ ಕೊಡುಗೆ ನೀಡುತ್ತಿದೆ. ಧ್ರುವ ಸರ್ಜಾ, ರಚಿತಾ ರಾಂ, ಹರಿಪ್ರಿಯ ಅಭಿನಯದ ಹೊಚ್ಚ ಹೊಸ ಸೂಪರ್‌ಹಿಟ್‌ ಸಿನಿಮಾ "ಭರ್ಜರಿ' ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ಚಿತ್ರಮಂದಿರದಲ್ಲಿ ಸಿನಿಮಾವನ್ನು ನೋಡಲು ಮಿಸ್‌ ಮಾಡಿಕೊಂಡವರು ಹಬ್ಬದ ದಿನ ಮನೆ ಮಂದಿಯೊಂದಿಗೆ ಈ ಸಿನಿಮಾವನ್ನು ಎಂಜಾಯ್‌ ಮಾಡಬಹುದು. ಅಷ್ಟೇ ಅಲ್ಲ ಚಾನೆಲ್‌, ತನ್ನ ವೀಕ್ಷಕರ ಮುಂದೆ ಮತ್ತೂಂದು ಸಡಗರವನ್ನೂ ತರುತ್ತಿದೆ. ಆವತ್ತಿನಿಂದ "ಭರ್ಜರಿ  ಕಾಮಿಡಿ' ಎಂಬ ಹೊಸ ಹಾಸ್ಯ ಕಾರ್ಯಕ್ರಮವೊಂದು ಶುರುವಾಗುತ್ತಿದೆ. ಪ್ರತಿ ಶನಿವಾರ ಮತ್ತು ಬಾನುವಾರ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ನಿರ್ದೇಶಕ ಗುರುಪ್ರಸಾದ್‌, ಹಾಸ್ಯನಟ ದೊಡ್ಡಣ್ಣ ಮತ್ತು ನಟಿ ರಾಗಿಣಿ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಪಾಲ್ಗೊಳ್ಳಲಿದ್ದಾರೆ. ಮೊದಲ ಸಂಚಿಕೆಯಲ್ಲಿ "ಹಂಬಲ್‌ ಪೊಲಿಟೀಷಿಯನ್‌ ನೊಗ್‌ರಾಜ್‌' ಸಿನಿಮಾ ನಟ ದಾನೀಶ್‌ ಸೇs… ಜನರನ್ನು ರಂಜಿಸಲು ಬರುತ್ತಿದ್ದಾರೆ. ಹಬ್ಬ ಎಂದ ಮೇಲೆ ಹಬ್ಬದೂಟ ಇಲ್ಲದಿರುತ್ತದೆಯೇ? ಅದಕ್ಕೇ "ಪಾಕಶಾಲೆ' ಅಡುಗೆ ಕಾರ್ಯಕ್ರಮದಲ್ಲಿ "ಟಗರು' ನಟಿ ಮಾನ್ವಿತ ಹರೀಶ್‌ ಬರುತ್ತಿದ್ದಾರೆ. 

ಚಾನೆಲ್‌: ಸ್ಟಾರ್‌ ಸುವರ್ಣ
ಯಾವಾಗ?: ಜನವರಿ 14, ಭರ್ಜರಿ ಸಿನಿಮಾ, ಸಂಜೆ 5, ಭರ್ಜರಿ ಕಾಮಿಡಿ, ರಾತ್ರಿ 9 ಪಾಕಶಾಲೆ.

Trending videos

Back to Top