CONNECT WITH US  

ಕರಾವಳಿ ಲಂಚ್‌ ಹೋಂ :ಇಲ್ಲಿ ಮೀನೂಟ ಸೂಪರ್‌ ಮಾರಾಯ್ರೇ !

ಈ ಹೋಟೆಲ್‌ ಹೆಸರು ಕೇಳಿದಾಕ್ಷಣ ಕರಾವಳಿಯ ಕಡೆ ತಯಾರಿಸುವ ರುಚಿರುಚಿ ತಿನಿಸುಗಳ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಮೀನುಪ್ರಿಯರ ಬಾಯಲ್ಲಿ ನೀರೂರಿದರೂ ಆಶ್ಚರ್ಯವೇನಿಲ್ಲ... ಹೆಸರಿಗೆ ತಕ್ಕ ಹಾಗೆ ಕರಾವಳಿ ಲಂಚ್‌ ಹೋಮ್‌ ಕರಾವಳಿ ಖಾದ್ಯಗಳಿಗೆ ಹೆಸರುವಾಸಿ. ಒಮ್ಮೆ ಹೋಟೆಲ್‌ ಮೂಂದೆ ಹಾದು ಹೋದರೆ ಅದರದ್ದೇ ಘಮ...  

ಒಂದೇ ರುಚಿ
ಬೆಂಗಳೂರಿನಲ್ಲಿ ಕರಾವಳಿಯ ಮೀನೂಟವನ್ನು ಮಿಸ್‌ ಮಾಡಿಕೊಳ್ಳುತ್ತಿರುವವರು ಇಲ್ಲಿನ ರುಚಿಯನ್ನು ಪ್ರಯತ್ನಿಸಬಹುದು. ರುಚಿಯ ಬಗ್ಗೆ ಕಾಳಜಿ ಹೊಂದಿರುವ ಮಾಲೀಕರು ಅಡುಗೆಯಲ್ಲಿ ಬಳಸುವ ಅಹಾರ ಸಾಮಗ್ರಿಯ  ಬಗ್ಗೆಯೂ ಗಮನಹರಿಸುತ್ತಾರೆ. ಯಾವ ವಿಷಯದಲ್ಲೂ ರಾಜಿ ಮಾಡಿಕೊಳ್ಳದೆ ಇರುವುದರಿಂದಲೇ ಒಂದೇ ರೀತಿಯ ರುಚಿಯನ್ನು ಮೇಂಟೇನ್‌ ಮಾಡಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ.

ಮೀನು ಚೆನ್ನಾಗಿರಬೇಕು
ಮೀನಿನ ಅಡುಗೆಯಲ್ಲಿ ಮೀನುಗಳೇ ಮುಖ್ಯ. ಅದೇ ಚೆನ್ನಾಗಿಲ್ಲದೇ ಹೋದರೆ ಅಡುಗೆಯಲ್ಲಿ ಎನು ಸಾಮಗ್ರಿ ಬಳಸಿದರೂ ಮೀನೂಟ ರುಚಿಕರ ಎನಿಸದು. ಅದರಲ್ಲೂ ಮೀನುಪ್ರಿಯರು ಮೀನೂಟದ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾರೆ. ಒಂಚೂರು ಹೆಚ್ಚುಕಮ್ಮಿಯಾದರೂ ಅವರು ಗ್ರಹಿಸಿಬಿಡುತ್ತಾರೆ. ಹೀಗಾಗಿ ಊರಿನಿಂದಲೇ ಮೀನುಗಳನ್ನು ಆರಿಸಿ ತರಿಸುತ್ತೇವೆ ಎನ್ನುತ್ತಾರೆ ರಾಜೇಶ್‌. ಅಂದಹಾಗೆ ಅವರು ಕುಂದಾಪುರದ ನೇರಲಕಟ್ಟೆಯವರು. ಹೆಚ್ಚಿನ ಸಲ ಅಲ್ಲಿಂದಲೇ ಬಂಗುಡೆ, ಅಂಜಲ್‌, ಕಾಣೆ, ಸೀಗಡಿ, ಸಿಲ್ವರ್‌ ಮೀನು, ಏಡಿ, ಮರವಾಯಿ, ಕಲ್ಲೂರ ಹೀಗೆ ಹಲವಾರು ಜಾತಿಯ ತಾಜಾ ಮೀನುಗಳು ಕರಾವಳಿ ಲಂಚ್‌ ಹೋಂಗೆ ಸರಬರಾಜಾಗುತ್ತವೆ.

ಕರಾವಳಿಯ ಖಾದ್ಯಗಳು
ಇಲ್ಲಿನ ಮೆನುವಿನಲ್ಲಿ ಬಾಂಗಡ ಫ್ರೆç, ಆಂಜಲ್‌ ಫ್ರೆç, ಫಿಶ್‌ ತವಾ ಫ್ರೆç, ಫಿಶ್‌ ಘೀ ರೋಸ್ಟ್‌, ಪಾಂಪ್ಲೆಟ್‌ ಫ್ರೆç, ಕಾಣೆ ಫ್ರೆç ಮರವಾಯಿ ಸುಕ್ಕ, ಏಡಿ ಸುಕ್ಕ, ನೀರು ದೋಸೆ, ಕೋರಿ ರೊಟ್ಟಿ ಮುಂತಾದವನ್ನು ಕಾಣಬಹುದು. ರುಚಿ ಜೊತೆಗೆ ಶುಚಿಯನ್ನು ಕಾಪಾಡಿಕೊಂಡು ಬಂದಿರುವುದು ಮತ್ತು ಕರಾವಳಿಯ ತಾಜಾಮೀನುಗಳಿಂದಲೇ ಖಾದ್ಯಗಳನ್ನು ತಯಾರಿಸುವುದರಿಂದಲೇ ಜನರಿಗೆ ಬಹಳ ಇಷ್ಟವಾಗಿದೆ.

ಕೋಟ್‌
ಕುಂದಾಪುರ, ಮಂಗಳೂರು, ಹೊನ್ನಾವರ, ಭಟ್ಕಳ, ಕಾರವಾರ, ಕುಮಟಾ, ಗೋಕರ್ಣ, ಮುಡೇìಶ್ವರಗಳಿಂದ ಇಲ್ಲಿಗೆ ಮೀನು ತರಿಸಿಕೊಳ್ಳುತ್ತೇವೆ. ಏಕೆಂದರೆ ಅದರ ಊರಿನ ಮೀನುಗಳ ರುಚಿಯ ಬೇರೆ. ಕರಾವಳಿಯ ಮೀನೂಟದ ರುಚಿಯನ್ನೇ ಬೆಂಗಳೂರಿಗರಿಗೂ ನೀಡಬೇಕೆನ್ನುವುದು ನಮ್ಮಾಸೆ.
- ರಾಜೇಶ್‌ ಕುಮಾರ್‌ ಶೆಟ್ಟಿ, ಮಾಲೀಕ

ಸ್ಥಳ: ಕರಾವಳಿ ಲಂಚ್‌ ಹೋಂ, ನಂ.1779, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಸ್ಟೇಷನ್‌ ಹತ್ತಿರ 
ಸಂಪರ್ಕ: 9900690959/9986141386

 ಬಳಕೂರು ವಿ.ಎಸ್‌. ನಾಯಕ 

Trending videos

Back to Top