CONNECT WITH US  

ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ

ದೇಶದಲ್ಲಿ ಸಹಿಷ್ಣುತೆಯ ಕುರಿತು ಕೂಗು ಎದ್ದಿರುವ ಹೊತ್ತಿನಲ್ಲಿ ಅದೇ ವಿಚಾರವಾಗಿ ಲೇಖಕರು, ಚಿಂತಕರು ಚರ್ಚೆ ನಡೆಸಲು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಈ ಸಮ್ಮೇಳನದಲ್ಲಿ ಭಾರತೀಯ ಭಾಷೆಯ ಲೇಖಕರು ಹಾಗೂ ಕಲಾವಿದರು, ಧಾರ್ಮಿಕ ಉಗ್ರವಾದ ಹಾಗೂ ಯಂತ್ರ ನಾಗರಿಕತೆಗಳ ಜಂಟಿ ಸಮಸ್ಯೆಯ ಕುರಿತು ಚರ್ಚಿಸಲಿದ್ದಾರೆ. ಜನತೆಯ ಸಂಸತ್‌ನ ಮಾದರಿಯಲ್ಲಿ ಈ ಸಮ್ಮೇಳನ ನಡೆಯಲಿದೆ. ಸಾಹಿತಿಗಳಾದ ರಹಮತ್‌ ತರೀಕೆರೆ, ಪ್ರಸನ್ನ, ಗಣೇಶ್‌ ದೇವಿ, ಡಾ.ವಿಜಯಮ್ಮ, ರಾಜೇಂದ್ರ ಚೆನ್ನಿ, ಕೆ.ನೀಲ, ಮೂಡ್ನಾಕೂಡು ಚಿನ್ನಸ್ವಾಮಿ, ದು. ಸರಸ್ವತಿ ಹಾಗೂ ಇತರರು ಭಾಗವಹಿಸಲಿದ್ದಾರೆ. 

ಎಲ್ಲಿ?: ಸೆನೆಟ್‌ ಭವನ, ಸೆಂಟ್ರಲ್‌ ಕಾಲೇಜು
ಯಾವಾಗ?: ಸೆ.2, ಭಾನುವಾರ ಬೆಳಗ್ಗೆ 10-6


Trending videos

Back to Top