ಬೊಂಬಾಟ್‌ ಬೊಂಬೆ ಉತ್ಸವ

Team Udayavani, Nov 17, 2018, 2:56 PM IST

2124.jpg

ಶತ್ರುಸೈನ್ಯದ ರಾಜನನ್ನು ಚೆಂಡಾಡಿದ ವೀರ ವನಿತೆ ಗೊಂಬೆಗಳೆಂದರೆ ಮಕ್ಕಳಿಗೆ ಇಷ್ಟ. ಗೊಂಬೆಯಾಟ ಎಂದರೆ ಮಕ್ಕಳು ಹಾಗೂ ದೊಡ್ಡವರು ಇಬ್ಬರಿಗೂ ಇಷ್ಟ. ನಗರದಲ್ಲಿ ಗೊಂಬೆಯಾಟದ ಉತ್ಸವ “ಬೆಂಗಳೂರು ಪಪೆಟ್‌ ಉತ್ಸವ-2018′ ಮೂರು ದಿನಗಳ ಕಾಲ ನಡೆಯಲಿದೆ. ಕರ್ನಾಟಕ, ರಾಜಸ್ಥಾನ ಮತ್ತು ಕೇರಳದ ಗೊಂಬೆಯಾಟಗಳ  ಸೊಬಗನ್ನು ಈ ಉತ್ಸವದಲ್ಲಿ ಸವಿಯಬಹುದಾಗಿದೆ. ಇದರ ಜೊತೆಗೆ, ಪ್ರತಿದಿನ ಸಂಜೆ 5 ಗಂಟೆಗೆ ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿ ಕೊಠಡಿಯಲ್ಲಿ ಡಾ. ವಿಜಯಾ, ಪ್ರೊ. ಎಂ.ಜೆ. ಕಮಲಾಕ್ಷಿ, ಶ್ರವಣ ಹೆಗ್ಗೊàಡು ಹಾಗೂ ಆ ದಿನದ ಪಪೆಟ್‌ ತಂಡದ ನಿರ್ದೇಶಕರಿಂದ ಆ ದಿನದ ಗೊಂಬೆಯಾಟ ಕುರಿತಾಗಿ ಮಾತುಕತೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್‌. ಸುರೇಂದ್ರನಾಥ್‌ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 

ಪ್ರೇಮ ಕತೆಯುಳ್ಳ ಡೋಲಾ ಮಾರು
ರಾಜಸ್ಥಾನದ ಸುಪ್ರಸಿದ್ಧ “ಡೋಲಾ ಮಾರು’ ಎಂಬ ಜಾನಪದ ಪ್ರೇಮಕಥೆಯನ್ನು ಆಕಾರ್‌ ಪಪೆಟ್‌ ಥಿಯೇಟರ್‌, “ಬೆಂಗಳೂರು ಪಪೆಟ್‌’ ಉತ್ಸವದಲ್ಲಿ ಪ್ರದರ್ಶಿಸುತ್ತಿದೆ. ತೇಜೋಮಯ ಸು#ರದ್ರೂಪಿ ಯುವರಾಜ ಡೋಲಾ, ಒಬ್ಬ ಮಾಂತ್ರಿಕೆಯ ಕುತಂತ್ರದಿಂದ, ತನ್ನ ಬಾಲ್ಯದ ಪ್ರಿಯೆ ಮಾರುನಿಂದ ದೂರ ಆಗಿ, ಅವಳನ್ನು ಮರೆತು ಮಾಂತ್ರಿಕೆಯ ಜೊತೆ ಸಂಸಾರ ಮಾಡುತ್ತಿರಲು, ಇತ್ತ ತನ್ನ ಬಾಲ್ಯದ ಗೆಳೆಯ ಹಾಗೂ ಪ್ರಿಯತಮ ಡೋಲನಿಗಾಗಿ ಮಾರು ಕಾಯುತ್ತಿರುತ್ತಾಳೆ. ಅವಳ ಊರಿಗೆ ಬರುವ ಒಬ್ಬ ಬೊಂಬೆಯಾಟದವ ಇವಳ ಕಥೆಯನ್ನು ಕೇಳಿ, ಅದೇ ಕತೆಯನ್ನು ತನ್ನ ಆಟದಲ್ಲಿ ಅಳವಡಿಸಿಕೊಂಡು ಡೋಲಾನ ಆಸ್ಥಾನಕ್ಕೆ ಬಂದು ಪ್ರದರ್ಶಿಸುತ್ತಾನೆ. ಆಟದಲ್ಲಿ ಬರುವ ಯುವರಾಜ ತಾನೇ ಎಂದು ಆಗ ಅರಿಯುವ ಡೋಲಾ ಬೊಂಬೆಯಾಟದವನ ಸಹಾಯದಿಂದ ಮತ್ತೆ ತನ್ನ ಪ್ರಿಯತಮೆ ಮಾರುವನ್ನು ಸೇರಲು ಹೊರಡುತ್ತಾನೆ. ಅವನನ್ನು ತಡೆಯಲು ಮಾಂತ್ರಿಕ ತಂತ್ರಗಳನ್ನು ಹೂಡುತ್ತಾನೆ. ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಆಟವಿದು.

ಅರಿವಿನ ಅನಾವರಣ
ಬೊಂಬೆಯಾಟ ಉತ್ಸವವನ್ನು ಅನಾವರಣ ಸಂಸ್ಥೆ ಆಯೋಜಿಸುತ್ತಿದೆ. ಅನಾವರಣ ಒಂದು ಸಾಂಸ್ಕೃತಿಕ ಸಂಘಟನೆಯಾಗಿದ್ದು ವರ್ತಮಾನದ ಸಾಂಸ್ಕೃತಿಕ ಸವಾಲುಗಳನ್ನು ನಿಭಾಯಿಸುವ ಉದ್ದೇಶವನ್ನು ಹೊಂದಿದೆ. ಕನ್ನಡದ ಪಾರಂಪರಿಕ ರಂಗ ಕಲೆಗಳ ಕೌಶಲ್ಯಗಳ ಸಂಗೋಪನೆ ಮತ್ತು ಪ್ರದರ್ಶನಗಳ ಮೂಲಕ ಅರಿವನ್ನು ವಿಸ್ತರಿಸುವ ಆಶಯವನ್ನೂ ಸಂಸ್ಥೆ ಹೊಂದಿದೆ. ಅಳಿವಿನ ಅಂಚಿನಲ್ಲಿರುವ ಬೊಂಬೆಯಾಟಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಚರ್ಚೆಯೂ ನಡೆದಿದೆ.

ಶತ್ರುಸೈನ್ಯದ ರಾಜನನ್ನು ಚೆಂಡಾಡಿದ ವೀರ ವನಿತೆ ನೇಪಾಳ ದೇಶದ ರಾಜ ಪೌಂಡ್ರಿಕ ಹಾಗೂ ರಾಣಿ ಸತ್ಯವತಿ ದೇವಿ, ಪಾರ್ವತಿಯ ಅನುಗ್ರಹದಿಂದ ಹೆಣ್ಣುಮಗುವನ್ನು ಪಡೆಯುತ್ತಾರೆ.

ಮಗುವಿಗೆ “ಸುಪ್ರಭಾ’ ಎಂದು ನಾಮಕರಣ ಮಾಡುತ್ತಾರೆ. ಆಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಯುದ್ಧ ಶಾಸ್ತ್ರ ಹಾಗೂ ಶಸ್ತ್ರಾಸ್ತ್ರಗಳಲ್ಲಿ ಅವಳಿಗೆ ತರಬೇತಿ ಕೊಡಿಸುತ್ತಾರೆ. ಧೀಮಂತೆ, ಚತುರೆಯಾಗಿ ಬೆಳೆದ ಸುಪ್ರಭಾ ತಮ್ಮ ರಾಜ್ಯದ ಮೇಲೆ ದಂಡೆತ್ತಿ ಬಂದ ಚೋಳರನ್ನು ಹಿಮ್ಮೆಟ್ಟಿಸಿ ಶತ್ರುರಾಜನನ್ನು ಸಂಹರಿಸುತ್ತಾಳೆ. ಆ ಮೂಲಕ ತನ್ನ ಪುಟ್ಟ ರಾಜ್ಯವನ್ನು ಮಹಾ ಸಾಮ್ರಾಜ್ಯವನ್ನಾಗಿ ಮಾರ್ಪಡಿಸುತ್ತಾ ಸ್ತ್ರೀಶಕ್ತಿಯ ಧ್ವಜವನ್ನು ಎತ್ತಿ ಹಿಡಿದ ವೀರ ವನಿತೆಯ ರೋಚಕ ಕಥನವೇ ಸುಪ್ರಭಾ ಲಾಸ. ಈ ಕಥನ ಕರ್ನಾಟಕದ ತೊಗಲು ಗೊಂಬೆ ಪ್ರಕಾರದಲ್ಲಿ ಮೂಡಿಬರುತ್ತಿದೆ. ಗೊಂಟೇ ರಾಮಯ್ಯ ಭಾರತೀಯ ತೊಗಲು ಗೊಂಬೆ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ಗುಂಡೂರಾಜು ಅವರ ತಂಡ ಈ ಗೊಂಬೆಯಾಟವನ್ನು ಪ್ರಸ್ತುತ ಪಡಿಸಲಿದೆ. ಗುಂಡೂರಾಜು ಅವರು ಇಲ್ಲಿಯ ತನಕ ವಿಶ್ವಾದ್ಯಂತ ಸುಮಾರು 25,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.

ಮಾಂತ್ರಿಕ ಕ್ಷಣಗಳ ಕಂಬ ರಾಮಾಯಣ ಕೃಷ್ಣನ್‌ ಕುಟ್ಟಿ ಪುಲವರ್‌ ಸ್ಮಾರಕ ತೊಲಪಾವಕೂತ್ತು ಮತ್ತು ಪಪೆಟ್‌ ಕೇಂದ್ರ, ಕೇರಳದ ಸಾಂಪ್ರದಾಯಿಕ ಗೊಂಬೆಯಾಟ “ತೊಲಪಾವಕೂತ್ತು’ ಕಂಬ ರಾಮಾಯಣದ ಆಯ್ದ ಭಾಗಗಳನ್ನು ಪ್ರಸ್ತುತ ಪಡಿಸುತ್ತಿದೆ.

ರಾಮಾಯಣದ ವನವಾಸ, ಪಂಚವಟಿ ಪ್ರಸಂಗ, ಸೀತಾಪಹರಣ, ಜಟಾಯು ವಧೆ, ವಾಲಿ ವಧೆ, ರಾಮ-ರಾವಣ ಕಾಳಗ ಹಾಗೂ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗಗಳನ್ನು ಈ ಪ್ರದರ್ಶನ ಒಳಗೊಂಡಿದೆ. ಒಂದು ಗಂಟೆ ಅವಧಿಯಲ್ಲಿ ರಾಮಾಯಣವನ್ನು ಮಾಂತ್ರಿಕ ಸನ್ನಿವೇಶಗಳೊಂದಿಗೆ, ತಂಡ ಪ್ರಸ್ತುತ ಪಡಿಸಲಿದೆ. ಕೇರಳದ ಗುಡಿಗಳಿಗೆ ಸೀಮಿತವಾಗಿದ್ದ ಸಾಂಪ್ರದಾಯಿಕ ಕಲೆ “ತೊಲಪಾವಕೂತ್ತು ತೊಗಲು ಗೊಂಬೆಯಾಟ’. ಈ ಗೊಂಬೆಯಾಟದ ಕಲಾಪ್ರಕಾರವನ್ನು ದೇವಸ್ಥಾನದ ಆವರಣದಿಂದ ಹೊರತಂದು ಜಗತ್ತಿಗೆ ಪರಿಚಯಿಸಿದ ಕಲಾವಿದ ಕೆ.ಎಲ್‌.ಕೃಷ್ಣನ್‌ ಕುಟ್ಟಿಯವರಿಗೆ ಸಲ್ಲುತ್ತದೆ. ಇಂದು ಅವರ ಹೆಸರಿನಲ್ಲಿ ಸ್ಥಾಪನೆಯಾದ ಸಂಸ್ಥೆ, ಈ ಕಲಾಪ್ರಕಾರವನ್ನು ಜಗತ್ತಿನಾದ್ಯಂತ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ.

 ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ
 ಯಾವಾಗ?:
 ಸುಪ್ರಭಾ ವಿಲಾಸ- ನವೆಂಬರ್‌ 21
 ಡೋಲಾ ಮಾರೋ- ನವೆಂಬರ್‌ 22
 ಕಂಬ ರಾಮಾಯಣ- ನವೆಂಬರ್‌ 23
 ಸಂಜೆ 7 | ಸಂಪರ್ಕ: 9448130960

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.