CONNECT WITH US  

ನವಗ್ರಹಗಳು, ಅಷ್ಟ ದಿಕ್ಪಾಲಕರು ಮತ್ತು ನಿಮ್ಮ ಮನೆ...

ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ.

ನಮ್ಮ ಭಾರತೀಯ ವಾಸ್ತು ಶಾಸ್ತ್ರದಲ್ಲಿ ನವಗ್ರಹಗಳಿಗೆ, ಅಷ್ಟ ದಿಕಾ³ಲಕರಿಗೆ ಬಹಳಷ್ಟು ಮಹತ್ವವನ್ನು ಒದಗಿಸಿದ ವಿಶ್ಲೇಷಣೆಗಳುಂಟು. ಈ ಅಂಕಣದಲ್ಲಿ ಈ ಮೊದಲೇ ವಿವರಿಸಿದ ಹಾಗೆ ಎಲ್ಲ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರುಗಳು ಕಟ್ಟಡ ಇಮಾರತುಗಳು, ಮನೆ, ಅರಮನೆ, ಗುಡಿ ದೇವಾಲಯಗಳ ವಿಚಾರದಲ್ಲಿ ಒಟ್ಟಾಗಿ ಉಂಟು ಮಾಡುವ ಪ್ರಭಾವ,  ಪೂರೈಸುವ ಸ್ಪಂದನಗಳ ಬಗ್ಗೆ ಹೆಚ್ಚಿನ ಅರಿವನ್ನು ನಾವು ಪಡೆದಿರಬೇಕು. ಒಟ್ಟಾರೆಯಾಗಿ ವಾಸ್ತುವಿನ ವಿಷಯದಲ್ಲಿ ಸಂಪೂರ್ಣ ಎಚ್ಚರವನ್ನು ವಹಿಸುವುದು ಹಿಂದಿನ ಕಾಲದಿಂದಲೂ ದುಸ್ತರವಾಗಿಯೇ ಇತ್ತು. ಈಗಂತೂ ಕೇಳುವುದೇ ಬೇಡ. ಪುಟ್ಟ ಪುಟ್ಟ ಉದ್ದಗಲಗಳ ನಿವೇಶನಗಳಲ್ಲಿ ಎಲ್ಲವನ್ನೂ ನಿಭಾಯಿಸುವ ವಿಚಾರ ಅಸಾಧ್ಯವಾದ ಮಾತು. 

ಹೀಗಾಗಿ ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಿಂದ ಗೋಧಿ, ಅಕ್ಕಿ, ತೊಗರಿ, ಹೆಸರು, ಕಡಲೆ ಅವರೆ ಎಳ್ಳು ಉದ್ದು ಹುರುಳಿ ಇತ್ಯಾದಿ ನವದಾನ್ಯಗಳನ್ನು ಇಂತಿಂಥಾ ದಿಕ್ಕಿನ ಲೋಪಗಳಿಗೆ ಎಂದು ಗುರುತಿಸಿಕೊಂಡು ನಿಸರ್ಗದಲ್ಲಿನ ಪಕ್ಷಿ, ಕೀಟ ಜಂತುಗಳಿಗೆ ಆಹಾರವಾಗಿ ಸಮರ್ಪಿಸುವುದು ಅತಿ ಮುಖ್ಯವಾಗುತ್ತದೆ. ಹೀಗೆ ಮಾಡುವುದರಿಂದ ವಾಸ್ತುವಿನ ಲೋಪ ದೋಷಾದಿಗಳಿಗೆ ಅಷ್ಟರಮಟ್ಟಿಗಿನ ವಿಮೋಚನೆ ದೊರಕುತ್ತದೆ. ಇದು ಅತ್ಯಂತ ಹೆಚ್ಚು ಗಮನಾರ್ಹ.

ಯಾವ ದಿಕ್ಕಿಗೆ ಯಾರು ಅಧಿಪತಿ?
ಇಡೀ ಜಗತ್ತು ಪಂಚಭೂತ ತತ್ವದ ಆಧಾರದ ಮೇಲೆ ನಿಂತಿದೆ ಎಂಬುದನ್ನು ನಾವು ಅರಿತಿದ್ದೇವೆ. ಇದರೊಂದಿಗೆ ಸೃಷ್ಟಿ, ಸ್ಥಿತಿ, ಲಯಾದಿ ವಿಷಯಗಳಿಗೂ ಹೆಚ್ಚಿನ ಮಹತ್ವ ಪಡೆದಿದೆ. ಹುಟ್ಟಿದ ಪ್ರತಿಜೀವಿಗೂ ಹುಟ್ಟಿನಷ್ಟೇ ಸಾವೂ ಅನಿವಾರ್ಯವಾದ ಇನ್ನೊಂದು ಧೃವ, ಹೀಗಾಗಿ ನಮ್ಮ ಆಷೇìಯ ವಿಶೇಷಗಳು ಸಂವರ್ದಿಸಿದ ಪುರಾಣಗಳಲ್ಲಿ ಎಲ್ಲವನ್ನೂ ನಿಯಂತ್ರಿಸುವ ಪರಮಾತ್ಮ ಒಬ್ಬನೇ ಆದರೂ ಆ ಪುರುಷ ಶ್ರೇಷ್ಠನನ್ನು ಮಾಯೆಯಿಂದ ಬೇರ್ಪಡಿಸಿ ನಮ್ಮ ಸಂಸ್ಕೃತಿ ನೋಡಲಿಲ್ಲ. ಹೀಗಾಗಿ ಆ ಪುರುಷ ಶ್ರೇಷ್ಠನೇ ಮಾಯೆಯ ಆವರಣಗಳಿಂದಾಗಿ ತನ್ನಲ್ಲೇ ಚೈತನ್ಯವಾದ ಸ್ತ್ರೀಯನ್ನು ಒಳಗೊಂಡಿದ್ದಾನೆ. ಇವತ್ತಿನ ವೈಜಾnನಿಕವಾದ ಬಿಗ್‌ ಬ್ಯಾಂಗ್‌ ಥಿಯರಿ ಏನಿದೆ ಅದು ನಮ್ಮ ಆಷೇìಯವಾದ ನಂಬಿಕೆಯ ಮಾಯೆಯನ್ನು ಪೂರ್ತಿಯಾಗಿ ದೃಢೀಕರಿಸುವಂತಿದೆ.

ಈ ಮಾಯೆ ಸ್ತ್ರೀಯಾಗಿದ್ದಾಳೆ. ಪ್ರಕೃತಿಯಾಗಿದ್ದಾಳೆ. ಪುರುಷನನ್ನು ಆಶ್ರಯಿಸಿಕೊಂಡೇ ಇದ್ದಾಳೆ. ಪುರುಷನಿಗೂ ಸ್ತ್ರೀಯನ್ನು ಬಿಟ್ಟರೆ ಚೈತನ್ಯವಿಲ್ಲ. ಪ್ರಕೃತಿಗೂ ಪುರುಷನನ್ನು ತೊರೆದರೆ ಫ‌ಲವಂತಿಕೆಗೆ ಬೆಲೆ ಇಲ್ಲ. ಈ ಮಾಯೆ ಆಚ್ಛಾದಿತ ಪುರುಷನೇ ಸರ್ವಾಂತರ್ಯಾಮಿ ಸರ್ವಶಕ್ತ ಪರಮಾತ್ಮ. ಆ ಪರಮಾತ್ಮನೇ ತನ್ನಿಂದ ತಾನು ಛೇದಿಸಿಕೊಂಡು ತ್ರಿಮೂರ್ತಿಗಳ ಸ್ವರೂಪದಲ್ಲಿ ಬ್ರಹ್ಮ, ವಿಷ್ಣು , ಮಹೇಶ್ವರನಾಗಿ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿದ್ದಾನೆ. ಈ ಮೂರು ಶಕ್ತಿಗಳ ಜೊತೆಗೆ ಸ್ತ್ರೀ ಮಣ್ಣು, ಬೆಂಕಿ, ಆಕಾಶ, ವಾಯು, ಜಲ ತತ್ವಗಳಲ್ಲಿ ಒಡೆದು ಪಂಚಭೂತೆಯಾಗಿದ್ದಾಳೆ.

ಒಟ್ಟಿನಲ್ಲಿ ಈ ಪಂಚಭೂತ ತತ್ವ ತ್ರಿಮೂರ್ತಿಗಳ ವಿಂಗಡಣೆಗಳ ತಳಹದಿ ವಿಶಾಲವಾದ ಪೃಥ್ವಿಯನ್ನು ಒಂದು ಹದದಲ್ಲಿ ಸಂರಕ್ಷಿಸಿದೆ. ಈ ಸಂರಕ್ಷಣೆಯ ದೃಷ್ಟಿಯಿಂದ ಅನುಸರಿಸಬೇಕಾದ ವಾಸ್ತುಕ್ರಮಗಳ ಬಗೆಗೆ ಅಂದರೆ ನವಗ್ರಹಗಳು ಅಷ್ಟದಿಕಾ³ಲಕರುಗಳ ಬಗ್ಗೆ ಮುಂದಿನ ವಾರ ಚರ್ಚಿಸೋಣ. 

ಅನಂತಶಾಸ್ತ್ರಿ

Trending videos

Back to Top