CONNECT WITH US  

ಮನೆಯಲ್ಲಿ ಕಸಬರಿಗೆಗಳನ್ನು ತೆರೆದಿಟ್ಟರೆ ಏನೇನಾಗುತ್ತದೆ ಗೊತ್ತಾ?

ಮನೆಯಲ್ಲಿ ಕಸಬರಿಕೆಗಳಿರದೆ ನೆಲ ಒರೆಸುವ, ಮೇಜು, ಟೇಬಲ್‌, ಊಟದ ಟೇಬಲ್‌ ವರೆಸುವ ಬಟ್ಟೆ ತುಂಡುಗಳೇ ಇರದೆ ಯಾವ ಮನೆಯೂ ಇರದು. ಆದರೆ ಈ ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರಿ¤ಯಾಗಿ ಯಾರಿಗೂ ಕಾಣಿಸದಂñ ೆಮುಚ್ಚಿಡುವುದು ಅವಶ್ಯವಾಗಿದೆ. ಈ ಕಸಬರಿಕೆ ಇತ್ಯಾದಿ ಮನೆಯೊಳಗೇ ಇರಲಿ. ಹೊರಗಡೆಯೇ ಇರಲಿ ಬೇಕಾಬಿಟ್ಟಿಯಾಗಿ ಕಾಣುವಂತೆ ಇರಕೂಡದು. ಮನೆಯೊಳಗಿನವರಿಗೇ ಆಗಲಿ, ಮನೆಯ ಹೊರಗಿನವರಿಗೇ ಆಗಲಿ ಇದು ಕಾಣುವಂತಿರಬಾರದು.

ಇದಕ್ಕೆ ಕಾರಣ ಸರಳ. ಈ ಕಸಬರಿಗೆ ಇತ್ಯಾದಿಗಳು ಮಾನವನಲ್ಲಿ ಒಂದು ಕ್ಷಣ ಅವನೊಳಗೆ ಪ್ರವಹಿಸುವ ಧನಾತ್ಮಕ ಭಾವನೆಗಳನ್ನು ಒಮ್ಮೆ ಸ್ಥಂಬನಗೊಳಿಸಿ ಬಿಡುತ್ತದೆ. ಧನಾತ್ಮಕ ಭಾವನೆಗಳು ಒಮ್ಮೆ ತಟಸ್ಥಗೊಳ್ಳುವ ವಿಷಯ ಹದಿಗಟ್ಟಿತಾದರೆ ಮೊದಲಿನ ಸುಹಾಸಕರತೆಯಲ್ಲೆ ಅದನ್ನು ಮುಂದುವರೆಸಲು ಸಾಧ್ಯವಾಗದು. ಮನೆಯ ಹೊರಗಿನ ಜನರಿಗೆ ಕಸಬರಿಗೆಗಳು ಇತ್ಯಾದಿ ಕಾಣುವಂತಿದ್ದರೆ ಅದು ಆ ವ್ಯಕ್ತಿಗಳಲ್ಲಿ ನಕಾರಾತ್ಮಕ ಭಾವನೆಗಳನ್ನು ಹೊಂದಲು ಕಾರಣವಾಗಬಹುದು. ಧೂಳು ಜೇಡರ ಬಲೆ, ಕೊಳೆ ಹಾಗೂ ಕಸಗಳನ್ನು ತಮ್ಮಲ್ಲಿ ಹೊಂದಿರುವ ಕಸಬರಿಕೆ ಇತ್ಯಾದಿಗಳು ಶುಭ ಸೂಚಕವಾಗಿರಲು ಸಾಧ್ಯವಾಗದು ಎಂಬುದು ಒಂದೆಡೆಯಾದರೆ ಇದು ಮನಸ್ಸಿನ ಹೊಯ್ದಾಟಗಳಿಗೆ ಇನ್ನಿಷ್ಟು ವಿಚಾರಗಳನ್ನು ಒದಗಿಸಿ ನಿಷ್ಕಿ$›ಯತೆಯನ್ನು ಉಂಟು ಮಾಡಬಲ್ಲವು.

ಯಾಕೆ ಹೀಗಾಗುತ್ತದೆ ಎಂಬುದಕ್ಕೆ ನೇರ ಕಾರಣಗಳಿಲ್ಲ. ಒಂದು ಸುಂದರ ನಾಯಿಯನ್ನೋ,  ಮೊಲವನ್ನೋ, ಜಿಂಕೆಯನ್ನೋ ನೋಡುವುದಕ್ಕೂ, ಒಂದು ಇಲಿ ಒಂದು ಜಿರಲೆ ಅಥವಾ ತಿಗಣೆ ಅಥವಾ ಜೇಡವನ್ನು ಮನೆಯೊಳಗೆ ಕಾಣುವುದಕ್ಕೂ ವ್ಯತ್ಯಾಸವಿದೆ. ಯಾರ ಮನಸ್ಸೂ ಇಲಿ ಅಥವಾ ಜಿರಲೆಗಳನ್ನು ನೋಡುತ್ತಾ ಕ್ರಿಯಾಶೀಲವಾಗದು. ಇದೇ ಸೂತ್ರ ಕಸಬರಿಗೆಗಳು ಇತ್ಯಾದಿ ವಿಷಯದಲ್ಲೂ ನಾವು ವಿಶ್ಲೇಷಿಸಬಹುದು. ಮನಸ್ಸು ಬಹಳ ಸೂಕ್ಷ್ಮವಾದದ್ದು.
ಅದು ತನ್ನ ಆಯ್ಕೆಯನ್ನೂ, ನಿರಾಸಕ್ತಿಗಳನ್ನೂ ಒಬ್ಬರಿಂದ ಇನ್ನೊಬ್ಬರಿಗೆ ಬಹುತೇಕ ಸಂದರ್ಭಗಳಲ್ಲಿ 
ವಿಧವಿಧವಾಗಿ ಒಡಮೂಡಿಸುವುದು. ಸತ್ಯವಾದರೂ ಇಲಿ, ಜಿರಲೆ ಕಸಬರಿಕೆಗಳಂಥ ವಿಚಾರಗಳಲ್ಲಿ ವಿಧವಿಧವಾದ ಭಾವನೆಗಳನ್ನು ರೂಪುಗೊಳಿಸವು. ಕೇವಲ ಜಿಗುಪ್ಸೆ ಅಷ್ಟೇ. ಇದು ಎಲ್ಲರಿಗೂ ಸ್ವಾಭಾವಿಕ. ಎಲ್ಲರಲ್ಲೂ ಸ್ವಾಭಾವಿಕ.

ಅಡುಗೆ ಮನೆಯಲ್ಲಿ ಹೊರ ಜಗುಲಿಯಲ್ಲಿ ಕಸಬರಿಗೆಗಳು ಕಾಣುವಂತೆ ಇರಲೇ ಕೂಡದು. ಇದು ತಿನ್ನುವ ಅನ್ನ ತಿನಿಸುಗಳ ವಿಷಯದಲ್ಲಿ ಒಂದು ರೀತಿಯ ಅಭಾವವನ್ನು ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಒಟ್ಟಿನಲ್ಲಿ ಇಂಥ ಅಭಾವಗಳ ಸೃಷ್ಟಿಗೆ ನಮಗೆ ನಾವೇ ಅವಕಾಶ ಒದಗಿಸ ಬಾರದು. ಒಂದರ್ಥದಲ್ಲಿ ಮನೆ ಬಾಗಿಲ ಎದುರುಗಡೆ ಕಸಬರಿಕೆ ಇತ್ಯಾದಿಗಳನ್ನು ಮೇಲ್ಮುಖವಾಗಿ ಇಡುವುದು ದುಷ್ಟ ಹಾಗೂ ಅನಪೇಕ್ಷಿತ ಸ್ಪಂದನಗಳನ್ನು ಮನೆಯೊಳಗಡೆ ಬಂದು ಸೇರುವ ಕ್ರಿಯೆಗೆ ಪೂರಕವಾಗಿ ಒಳಿತಾಗಬಲ್ಲದು. ಆದರೆ ರಾತ್ರಿಯ ಹೊತ್ತು ಮಾತ್ರ ಇದ ಸ್ವಾಗತಾರ್ಹ.  ಹಗಲ ಹೆಗಲಿಗೆ ಇದು ಸಹವಾಸ ಬೇಡ.

ಇನ್ನು ಮನೆಯೊಳಗಿನ ಕಸ ಹಾಗೂ ಕೊಳೆಗಳನ್ನು ಧೂಳು ಹಾಗೂ ಮಣ್ಣನ್ನು ವಿಶೇಷವಾಗಿ ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಸಬರಿಗೆಗಳೀಂದ ಒತ್ತಿ ಝಾಡಿಸಿ ಹೊರದೂಡುವಂತೆ ಮಾಡಲೇ ಬಾರದು. ರಾತ್ರಿಯ ಹೊತ್ತು ಕಸ ಧೂಳು ಹಾಗೂ ಕೊಳೆಗಳೊಂದಿಗೆ ಕಣ್ತಪ್ಪಿ ಬಿದ್ದ ಅಥವಾ ಬೆಲೆ ಬಾಳುವ ವಸ್ತುಗಳು ಹೊರ ತಳ್ಳಲ್ಪಡುವ ಸಾಧ್ಯತೆಗಳು ಇರುವುದರಿಂದ ರಾತ್ರಿಯ ಹೊತ್ತು ಕಸಬರಿಗೆಗಳ ಉಪಯೋಗ ಮಾಡಿದರೆ ಮನೆಯಲ್ಲಿ ಲಕ್ಷಿ$¾ದೇವಿ ನೆಲೆಯೂರಳು ಎಂಬ ನಂಬಿಕೆ ಇದೆ. ಕೆಲವು ವಿಚಾರಗಳು ಆಧುನಿಕತೆಯನ್ನು ಅಣಕಿಸುವಂತಿದ್ದರೂ ಲಾಗಾಯ್ತಿನಿಂದ ರೂಢಿಯಾಗಿ ಬಂದ ವಿಚಾರಗಳ ಕುರಿತು ಅಲಕ್ಷ್ಯ ಬೇಡ. ವರ್ತಮಾನದ ಆಧುನಿಕ ಬೆಳವಣಿಗೆಗಳು ಮಾನವನ ಎಲ್ಲ ನೋವು ಹಾಗೂ ಕಷ್ಟಗಳನ್ನು ನೀಗಿಸುವಷ್ಟು ಆಧುನಿಕವಲ್ಲ. ಹೀಗಾಗಿ ಯಾವುದೇ ಹಳೆಯ ವಿಚಾರವಲ್ಲ. ಅವೆಲ್ಲಾ ಆಧುನಿಕತೆ ಪೂರಕವಾಗೇ ಇರುತ್ತದೆ. 

ಅನಂತಶಾಸ್ತ್ರಿ

Trending videos

Back to Top