CONNECT WITH US  

ಜಾತಕ ಫ‌ಲ

ಸುವರ್ಣ ಗಟ್ಟಿಹಳ್ಳಿ
 ಸ್ವಾಮಿ, ನಮ್ಮ ಮಗನ ಜಾತಕ ಕಳುಹಿಸಿದ್ದೇನೆ. ಬುದ್ಧಿವಂತನಾಗಿದ್ದಾನೆ. ಎಂಟೆಕ್‌ ಓದಿದ್ದಾನೆ. ಆದರೆ ಮಂಕು ಕವಿದಂತೆ ಇದ್ದಾನೆ. ಒಳ್ಳೆಯ ಸಂಬಳವಿದೆ. ನಿದ್ದೆ ಹತ್ತಿದರೆ ಅದೇನೋ ಎಂತೋ ಜಗತ್ತೇ ಮರೆತು ಮಲಗುವ ರೀತಿ ಭಯಂಕರವಾದ್ದು. ಮದುವೆಗಾಗಿ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಪರಿಹಾರ ಸೂಚಿಸುತ್ತೀರಾ?

  ನಿಮ್ಮ ಮಗನ ಜಾತಕದಲ್ಲಿ ವ್ಯಕ್ತಿತ್ವವನ್ನು ಗಟ್ಟಿಗೊಳಿಸ ಬೇಕಾದ ಲಗ್ನ ಭಾವದಲ್ಲಿ ರವಿ, ಬುಧ, ರಾಹು ಹಾಗೂ ಚಂದ್ರ ಸಂಯೋಜನೆ ಮಂಕು,ವಿಭ್ರಮೆ, ಜಾಣತನವಿದ್ದರೂ ಅಧೈರ್ಯ, ಏನೋ ತಪ್ಪಾಗಿದೆ ತನ್ನಿಂದ ಎಂಬ ಪಾಪ ಪ್ರಜ್ಞೆ, ನಾಳೆಯಿಂದ ಸರಿ ಹೊಂದಿಸಿ, ಉತ್ತಮವಾದುದನ್ನು ಮಾಡುತ್ತೇನೆ ಎಂದು ಮುಂದೂಡಿಕೆ ಇತ್ಯಾದಿ ಸಂಭವಿಸಿ, ಏನೂ ಮಾಡಲಾಗದಂತೆ ಬಿಕ್ಕಟ್ಟುಗಳು ತಲೆದೋರುತ್ತವೆ. ಈಗಿನ ಶುಕ್ರ ದಶಾಕಾಲ ಹಲವಾರು ಭಿನ್ನ ಕಾರಣಗಳಿಂದಾಗಿ ಬಲ ಹೊಂದಿದೆ. ಆದರೂ ಪಾಪಕರ್ತರಿ ಯೋಗವಿದ್ದು, ಪ್ರಸ್ತು ಶನಿಕಾಟವೂ ನಡೆಯುತ್ತಿದ್ದು, ಕೆಂಪು ಮತ್ತು ಬಿಳಿದಾಸವಾಳಗಳನ್ನು ಕಪ್ಪು ವಸ್ತ್ರದಲ್ಲಿರಿಸಿ ಪ್ರತಿ ತಿಂಗಳ ಷಷ್ಠಿಯ (ಎರಡು ಸಲ ಬರುತ್ತದೆ) ದಿನಗಳಂದು ದಾನ ನೀಡಬೇಕು. ಪ್ರತಿ ದಿನ ಧನ್ವಂತರಿ ಅಷ್ಟೋತ್ತರ, ರುದ್ರ ಚಮಕಗಳನ್ನು ಓದಲಿ. ರಾಮರûಾ ಸ್ತೋತ್ರ ಓದಲಿ. ದುರ್ಗಾಷ್ಟಕ ಓದಲಿ. ಬದಲಾವಣೆಗಳಿಗಿದು ದಾರಿ. 

  ಅನಂತ ಕೃಷ್ಣ ಭಂಡಾರಿ, ಬೆಂಗಳೂರು
   ನನ್ನ ಪತ್ನಿಯಿಂದ ತುಂಬಾ ಕಿರಿಕಿರಿ. ಈಗಂತೂ ತುಂಬಾನೇ ವೃದ್ಧಿಸಿದೆ. ನನಗೀಗ 60 ವರ್ಷ. ಆಕೆಗೆ 56. ಮಗನು ದಾರಿ ತಪ್ಪಿದ್ದಾನೆ. ಏನೋ ಕೆಲವು ಕಾರಣಗಳಿಂದ ಸಂಪಾದನೆ ಇದೆ. ಆದರೆ ಮಗ ಹಣಕ್ಕಾಗಿ ಪ್ರಾಣ ತಿನ್ನುತ್ತಾನೆ. ಬುದ್ಧಿ ಹೇಳ್ಳೋಣ ಕೂರಿಸಿಕೊಂಡು ಎಂದರೆ ನನ್ನ ಪತ್ನಿಯದ್ದೇ ಒಂದು ಗೋಳು. ನೀವೇ ಹಾಳು ಮಾಡಿದ್ದು, ಬೇಕಾದರೆ ಸರಿ ಪಡಿಸಿಕೊಳ್ಳಿ ಎಂದು ಆತ್ಮಹತ್ಯೆಗೂ ಯೋಚನೆ ಬರುತ್ತದೆ. ಜಾತಕಗಳನ್ನು ಕಳುಹಿಸಿದ್ದೇನೆ ಬಿಕ್ಕಟ್ಟಿನ ನಿವಾರಣೆ ಹೇಗೆ?
   ನಿಮಗೀಗ ಶುಕ್ರ ದಶಾಕಾಲ. ಆದರೆ ಕುಜನು ಪ್ರಬಲನಾಗಿ ಶುಕ್ರನನ್ನು ಬಾಧಿಸುತ್ತಿದ್ದಾನೆ. ಲಾಭಧಿಪತಿಯಾಗಿ ತನ್ನ ಸ್ವಂತ ಮನೆ ( ಲಾಭದ ಏಕಾದಶ ಭಾವ)ಯಲ್ಲಿ ಮಗನನ್ನು ಸಂಕೇತಿಸುವ ಶುಕ್ರನನ್ನು  ಹಾಗೂ ನಿಮ್ಮ ಮನೋ ವೇದಿಕೆಗೆ ಕಾರಣನಾಗುವ ಚಂದ್ರನನ್ನು ಹಿಂಸಿಸಿದ್ದಾನೆ. ದುಸ್ಥಾನ ಪೀಡಿತನಾದ ( ಕಳತ್ರ ಸ್ಥಾನಾಧಿಪಿಯಾಗಿ ಪತ್ನಿಯನ್ನು ಸಂಕೇತಿಸುವ) ಗುರುವು ಶನೈಶ್ಚರನ ದುಷ್ಟ ದೃಷ್ಟಿಗೆ ಒಳಗಾಗಿ ಪತ್ನಿಯಿಂದಲೂ ಕಿರಿಕಿರಿ. ಲಾಭಕ್ಕೆ ಕಾರಣನಾಗುವ ಕುಜನು ಶುಕ್ರನ ಮೂಲಕ ಧನ ಪ್ರಾಪ್ತಿಗೆ ದಾರಿ ಮಾಡು ಏನಾದರೂ - ಶೇಖರಿಸಿಡಲು ಉಳಿತಾಯಕ್ಕೆ ಕಾರಣವಾಗುವ ಹಣವಾಗಿ ಇದು ನಿಲ್ಲಲಾರದು. ಮಗನ ಎದುರಿಗೇ ನಿಮ್ಮ ತುತ ಪತ್ನಿಯ ಭಿನ್ನಮತ, ಮನಸ್ತಾಪಗಳು ಅವನನ್ನು ಕಿರಿಕಿರಿಗೊಳಿಸಿ, ದಾರಿ ತಪ್ಪಿದ್ದಾನೆ. ಈಗ ನಡೆಯುತ್ತಿರುವ ಪಂಚಮ ಶನಿಕಾಟದಿಂದಾಗಿ  ಆತನಿಗೆ ದಿಕ್ಕು, ಗುರಿಗಳ ಕಲ್ಪನೆ ಶೂನ್ಯ. ಪ್ರಾರಬ್ಧ ನಿವಾರಣೆಗೆ ಶ್ರೀದೇವಿ ಲಲಿತಾ ಸಂಕಸ್ರ ನಾಮಾವಳಿ, ಶ್ರೀ ಮಂಗಳ ಪೀಡಾನಿವಾರಣಾ ಸ್ತೋತ್ರ, ಪಂಚಮುಖೀ ಹನುಮಂತ ಕವಚ ಓದಿ. 

  ಶ್ರೀ ಭಾರತೀ ಕುಮಾರ, ಗದಗ
   ಸ್ವಾಮಿ, ನಾನು ಒಳ್ಳೆಯ ಕೆಲಸದಲ್ಲೇ ಇದ್ದೆ. ನಮ್ಮ ಗುಂಪಿನ ನಿರ್ವಹಣೆಯ ಬಗೆಗಿನ ಅಸೈನ್‌ಮೆಂಟ್‌ ಮುಗಿದ್ದಿದ್ದರಿಂದ ನನ್ನನ್ನು ಕೆಲಸದಿಂದ ಬಿಡುಗಡೆ ಮಾಡಿದರು. ಆತ್ಮವಿಶ್ವಾಸವೂ ಇತ್ತು. ಬೇರೆ ಕೆಲಸ ಸಿಗುವುದ ದುಸ್ತರವಲ್ಲ ಎಂಬ ಭಾವನೆ ಇತ್ತು. ನಾನು ಎಂಜಿನಿಯರಿಂಗ್‌ ಆದರೆ ಶಾಂತವಾಗಿದ್ದ ವರ್ತಮಾನದಲ್ಲೀಗ ಭೂಕಂಪ, ಸುನಾಮಿ ರುದ್ರ ತಾಂಡವ. ಎಷ್ಟೇ ಒಳ್ಳೆಯ (ಸಂದರ್ಶನದಲ್ಲಿ)ದಾಗಿ ನಿರ್ವಹಣೆ ಮಾಡಿದರೂ ಕೆಲಸ ಸಿಗುತ್ತಿಲ್ಲ. ಮದುವೆಯಾಗಿದೆ. ಪತ್ನಿ, ಅವಳು ಕೆಲಸದಲ್ಲಿದ್ದಾಳೆ. ಆದರೆ ನನಗೆ ನಿಂತ ನೆಲ ಕುಸಿದಿದೆ. ಮೇಲೆದ್ದು ತಂದು ನಿಲ್ಲಿಸೀತೆ? ಪರಿಹಾರ ತಿಳಿಸಿ, ಉಪಕರಿಸಿ. 
  ನಿಮ್ಮ ಪಾಲಿಗೀಗ ರವಿ ದಶಾ ನಡೆಯುತ್ತಿದ್ದು, ದಶಾ ಕಾಲಕ್ಕೆ ಒಳ್ಳೆಯ ತನ ಕೂಡಿರುವ, ಸಂವರ್ಧಿಸುವ ತೂಕ ಇದೆ. ಆದರೆ ಕೆಲಸದ ಸ್ಥಳದಲ್ಲಿ ಶನಿ ಚಂದ್ರರ ಬಾಧೆ ಇದ್ದು, ಈಗ ಸಾಡೇಸಾತಿ ಇದ್ದಿರುವುದರಿಂದ ಪ್ರಸ್ತುತ ಬಿಕ್ಕಟ್ಟುಗಳು ಹರಳುಗಟ್ಟಿವೆ. ಏನೇ ಇದ್ದರೂ, ಫೆಬ್ರವರಿ 2017ರ ಹತ್ತನೇ ದಿನಾಂಕದೊಳಗೊಗಡೆ ಕೆಲಸ ಸಿಗಲು ಅವಕಾಶವಿದೆ. ರಾಮರಕ್ಷಾ  ಸ್ತೋತ್ರ ಓದಿ. 


Trending videos

Back to Top