ನಾಣ್ಯವನ್ನು ಲೋಟ ನುಂಗಿತ್ತಾ!

Team Udayavani, May 17, 2018, 4:22 PM IST

nanya.jpg

ನಾವು ನೀರು ಕುಡಿಯಲು ಲೋಟವನ್ನು ಬಳಸುತ್ತೇವೆ. ಲೋಟಕ್ಕೆ ನೀರನ್ನು ಹಿಡಿದಿಡುವ ಸಾಮರ್ಥ್ಯವಷ್ಟೇ ಅಲ್ಲ, ನಾಣ್ಯವನ್ನು ನುಂಗುವ ಶಕ್ತಿಯೂ ಇದೆ ಅನ್ನೋದು ಗೊತ್ತಾ? ಈ ಮ್ಯಾಜಿಕ್‌ ಕಲಿತರೆ ಅದನ್ನು ಇತರರ ಮುಂದೆ ಪ್ರದರ್ಶಿಸಿ ಲೋಟ ನಾಣ್ಯವನ್ನು ನುಂಗುವುದನ್ನು ತೋರಿಸಿಕೊಡಬಹುದು.

ಬೇಕಾಗುವ ವಸ್ತು: ಗಾಜಿನ ಲೋಟ ಮತ್ತು ಒಂದು ನಾಣ್ಯ. 
ಪ್ರದರ್ಶನ: ಹಳದಿ ಬಟ್ಟೆ ಹಾಸಿದ ಟೇಬಲ್‌ ಮೇಲೆ ಒಂದು ಗಾಜಿನ ಲೋಟವನ್ನು ಉಲ್ಟಾ ಮಾಡಿ ಇಟ್ಟಿರುತ್ತಾರೆ. ಪಕ್ಕದಲ್ಲಿ ಒಂದು ನಾಣ್ಯ ಇರುತ್ತದೆ. ಜಾದೂಗಾರ ಲೋಟವನ್ನು ಎತ್ತಿ ಉಲ್ಟಾ ಮಾಡಿ ನಾಣ್ಯದ ಮೇಲೆ ಮುಚ್ಚಿಡುತ್ತಾನೆ. ಲೋಟ ಗಾಜಿನದ್ದು ಎಂದ ಮೇಲೆ ನಾಣ್ಯ ನಮಗೆ ಕಾಣಿಸಬೇಕು ತಾನೇ? ಆದರೆ, ಆ ಜಾಗದಲ್ಲಿ ನಾಣ್ಯ ಇರುವುದಿಲ್ಲ. ಅಂದರೆ, ಲೋಟ ನಾಣ್ಯವನ್ನು ನುಂಗಿಬಿಟ್ಟಿರುತ್ತದೆ. ಮತ್ತೆ ಜಾದೂಗಾರ ಲೋಟವನ್ನು ಪಕ್ಕಕ್ಕೆ ಸರಿಸಿದಾಗ ನಾಣ್ಯ ಮೊದಲಿದ್ದ ಜಾಗದಲ್ಲಿಯೇ ಪ್ರತ್ಯಕ್ಷವಾಗುತ್ತದೆ.

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಗಾಜಿನ ಲೋಟದಲ್ಲಿ. ಅದರ ಬಾಯಿಗೆ ಸರಿ ಹೊಂದುವಂತೆ ಹಳದಿ ಬಣ್ಣದ ಪೇಪರ್‌ ಅಥವಾ ರಟ್ಟನ್ನು ಅಂಟಿಸಿ. ಲೋಟವನ್ನು ಯಾವುದೇ ಕಾರಣಕ್ಕೂ ಬಾಯಿ ಮೇಲೆ ಮಾಡಿ ಇಡಕೂಡದು. ಏಕೆಂದರೆ ಹಾಗಿಟ್ಟರೆ ಅದರ ಬಾಯಿಗೆ ಅಂಟಿಸಿರುವ ಹಳದಿ ರಟ್ಟು ಕಂಡುಬಿಡುತ್ತದೆ. ಇನ್ನೊಂದು ವಿಷಯವೆಂದರೆ ಹಳದಿ ಬಣ್ಣದ ರಟ್ಟೇ ಆಗಬೇಕೆಂದಿಲ್ಲ. ಯಾವುದೇ ಬಣ್ಣದ ರಟ್ಟನ್ನು ಬಳಸಬಹುದು. ಆದರೆ ಅದು ಟೇಬಲ್‌ ಕ್ಲಾತಿನ ಬಣ್ಣದ್ದೇ ಆಗಿರಬೇಕು. ಇಲ್ಲಿ ನೀಡಿರುವ ಚಿತ್ರಗಳಲ್ಲಿ ಹಳದಿ ಟೇಬಲ್‌ ಕ್ಲಾತ್‌ ಮತ್ತು ಹಳದಿ ರಟ್ಟನ್ನು ಬಳಸಲಾಗಿದೆ. ಮ್ಯಾಜಿಕ್‌ ಶುರು ಮಾಡುವ ಮುನ್ನ ಲೋಟವನ್ನು ಉಲ್ಟಾ ಮಾಡಿ ಟೇಬಲ್‌ ಮೇಲೆ ಇಟ್ಟಿರಬೇಕು. ನಂತರ ಲೋಟವನ್ನು ಎತ್ತಿ ನಾಣ್ಯದ ಮೇಲೆ ಇಡಿ. ಹಾಗೆ ಎತ್ತಿಡುವಾಗ ಲೋಟದ ಬಾಯಿಗೆ ಅಂಟಿಸಿರುವ ರಟ್‌ ಕಾಣದಂತೆ ಎಚ್ಚರವಹಿಸಿ. ಲೋಟವನ್ನು ನಾಣ್ಯದ ಮೇಲೆ ಇರಿಸಿದಾಗ ರಟ್‌ ನಾಣ್ಯದ ಮೇಲೆ ಕೂರುವುದರಿಂದ ಕಾಣಿಸದೇ ಹೋಗುತ್ತದೆ. ಇದರಿಂದಾಗಿ ನಾಣ್ಯ ಮಾಯವಾದಂತೆ ತೋರುತ್ತದೆ. ಪುನಃ ಲೋಟವನ್ನು ಪಕ್ಕಕ್ಕೆ ಸರಿಸಿದಾಗ ನಾಣ್ಯ ಗೋಚರಿಸುತ್ತದೆ. 

– ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.