CONNECT WITH US  

ಕಂದನ ಜಳಕ!

ನಮ್ಮನೆ ಕಂದನ ಹಠವೆ ಚೆಂದ 
ಜಳಕಕೆ ಕರೆದರೆ ಬೇಡಾ ಅಂದ! 
ಹಿಡಿಯ ಹೋದರೆ ಬೀದಿಯ ಕಂಡ
ಹಿಂದೆಯೆ ಹೋದರೂ ಸಿಗನು ಭಂಡ!

ಓಡಿ ಹಿಡಿದು ದರದರ ಎಳೆದು
ತಂದು ನಿಲ್ಲಿಸೆ ಬಚ್ಚಲ ಎದುರು
ಅತ್ತನು, ಬಟ್ಟೆ ಮಾತ್ರ ತೆಗೆಯಲೆ ಬೇಡ
ಎಲ್ಲರು ಶೇಮು ಮಾಡುವರಮ್ಮ

ಸೋಪು ಬೇಡ ಶ್ಯಾಂಪು ಬೇಡ
ಕಣ್ಣಿನ ಒಳಗೆ ಉರಿತವು ಅಮ್ಮ
ಕಾಲ ಮೇಲಿನ ಗಾಯವ ನೋಡ
ನೋವು ಬರುವುದು ಉಜ್ಜಬೇಡ

ತುಂಬಾ ಬೇಗನೆ ಸ್ನಾನವ ಮುಗಿಸಿ
ಇಷ್ಟದ ಬಟ್ಟೆ ಲಗುಬಗೆ ತೊಡಿಸಿ
ಮುಖಕೆ ಪೌಡರು ಕಾಡಿಗೆಯಚ್ಚಿ
ಆಡಲು ಬಿಟ್ಟಳಮ್ಮ ದೃಷ್ಟಿಯ ತೆಗೆದು! 

ಸದಾಶಿವ್‌ ಸೊರಟೂರು


Trending videos

Back to Top