CONNECT WITH US  

ಜಿಲ್ಲೆಗೆ ಪಿಎಸ್‌ಐಗಳು ಬರಲು ಹಿಂದೇಟು

ಚಿಕ್ಕಬಳ್ಳಾಪುರ: ಆಂಧ್ರದ ಗಡಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಬಹಳಷ್ಟು ಸೂಕ್ಷ್ಮವಾದದು. ಆದರೆ, ಜಿಲ್ಲೆಯ ಹಲವು ಪೊಲೀಸ್‌ ಠಾಣೆಗಳ ಕಾರ್ಯಭಾರ ವಹಿಸಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡ ಬೇಕಾದ ಆರಕ್ಷಕ ಉಪ ನಿರೀಕ್ಷಕರೇ ಈಗ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿಯೇ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ತಾಲೂಕು ಎಂದು ಪರಿಗಣಿಸಿರುವ ವಾಣಿಜ್ಯ ನಗರಿ ಚಿಂತಾಮಣಿ ತಾಲೂಕಿನ ನಗರ ಠಾಣೆಯಲ್ಲಿ ಹಲವು ತಿಂಗಳಿಂದ ಆರಕ್ಷಕ ಉಪ ನಿರೀಕ್ಷಕ ಹುದ್ದೆಗಳಿಗೆ ಯಾರು ಬಾರದೇ ಖಾಲಿ ಉಳಿದು ಕೊಂಡಿರುವುದೇ ಇದಕ್ಕೆ ನಿದರ್ಶನವಾಗಿದ್ದು, ಇನ್ನೂ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಕಳೆದ ಆರು ತಿಂಗಳನಿಂದ ಸಿಪಿಐ ಜತೆಗೆ ಪಿಎಸ್‌ಐ ಸಹ ನೇಮಕ ಗೊಂಡಿಲ್ಲ.

ಅಪರಾಧ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ಚಿಂತಾಮಣಿ ಪ್ರಥಮ, ಗೌರಿಬಿದನೂರು ಎರಡನೇ ಸ್ಥಾನದಲ್ಲಿದೆ. ಇನ್ನೂ ಕೋಮುಗಲಭೆಗಳ ವಿಚಾರದಲ್ಲಿ ಅಂತೂ ಮುಂಚೂಣಿಯಲ್ಲಿದೆ. ಆದರೆ, ನಗರ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೂರು ಪಿಎಸ್‌ಐ ಹುದ್ದೆಗಳಿದ್ದರೂ ಹಲವು ತಿಂಗಳಿಂದ ಖಾಲಿ ಇರು ವುದು ಎದ್ದು ಕಾಣುತ್ತಿದೆ. ವಾಣಿಜ್ಯ ನಗರಿಯಾಗಿ ಗಮನ ಸೆಳೆದಿರುವ ಚಿಂತಾಮಣಿ ವ್ಯಾಪಾರ, ವಹಿ ವಾಟುವಿನಲ್ಲಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ.

ಪ್ರತಿ ನಿತ್ಯ ಕೋಟ್ಯಂತರ ರೂ. ವ್ಯವಹಾರ ನಡೆಯುವ ಚಿಂತಾ ಮಣಿಯಲ್ಲಿ ಕಳ್ಳತನ, ಕೊಲೆ, ಅತ್ಯಾಚಾರ, ಸರಗಳ್ಳತನ ಹೇಗೆ ವಿವಿಧ ರೀತಿಯಲ್ಲಿ ಅಪರಾಧ ಪ್ರಕರಣಗಳು ನಡೆದು ಅಮಾಯಕರು ಭಯಭೀತಿ ಗೊಳ್ಳುವಂತಾಗಿದೆ. ಆದರೆ, ನಗರ ಠಾಣೆಯಲ್ಲಿ ಪಿಎಸ್‌ಐಗಳ ಕೊರತೆಯಿಂದ ಅಪರಾಧ ಪ್ರಕರಣ ಗಳನ್ನು ಹತ್ತಿಕ್ಕುವುದು ಇಲಾಖೆಗೆ ಸವಾಲಾಗಿದ್ದು, ಪಿಎಸ್‌ಐಗಳು ನೇಮಕಗೊಳ್ಳದೇ ನಗರದಲ್ಲಿ ಸಂಚಾರ ವ್ಯವಸ್ಥೆ ಸೇರಿದಂತೆ ಕಾನೂನು ಸುವ್ಯವಸ್ಥೆ ಸಾಕಷ್ಟು ಹದಗೆಟ್ಟಿದೆ ಯೆಂಬ ಆರೋಪ ಚಿಂತಾಮಣಿ ಸಾರ್ವ ಜನಿಕರಿಂದ ಕೇಳಿ ಬರುತ್ತಿದೆ. ಅದರಲ್ಲೂ ಚಿಂತಾಮಣಿ ಠಾಣೆ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ಮೀತಿ ಮೀರಲು ಕಾರಣವಾಗಿದೆ.

ಚಿಕ್ಕಬಳ್ಳಾಪುರ ವೃತ್ತಕ್ಕೆ ಸಿಪಿಐ ಇಲ್ಲ: ಜಿಲ್ಲಾ ಕೇಂದ್ರ ವಾಗಿರುವ ಚಿಕ್ಕಬಳ್ಳಾಫ‌ುರ ನಗರ, ಗ್ರಾಮಾಂತರಕ್ಕೆ ಒಬ್ಬರೇ ಆರಕ್ಷಕ ವೃತ್ತ ನಿರೀಕ್ಷಕರು ಇದ್ದರೂ ಕಳೆದ ಆರು ತಿಂಗಳಿಂದ ಖಾಲಿ ಇದೆ. ಈ ಹಿಂದೆ ಸಿಪಿಐ ಆಗಿದ್ದ ಸಿ.ಬಿ.ಶಿವಸ್ವಾಮಿ ಅವರನ್ನು ಅಮಾನತು ಮಾಡಿದ ನಂತರ ಈ ಸ್ಥಾನ ತುಂಬಿಲ್ಲ. ಚುನಾವಣೆಗೂ ಮೊದಲು ನಗರಕ್ಕೆ ಕೆಪಿಸಿಸಿ ವೀಕ್ಷಕರು ಆಗಮಿಸಿದ್ದ ವೇಳೆ ಕೆ.ವಿ.ನವೀನ್‌ ಕಿರಣ್‌ ಕೆಪಿಸಿಸಿ ವೀಕ್ಷಕರಿಗೆ ಟಿಕೆಟ್‌ಗೆ ಅರ್ಜಿ ಸಲ್ಲಿಸಿ ವಾಪಸ್‌ ಬರುವ ವೇಳೆ
ಅವರ ಬೆಂಬಲಿ ವಿನಯ್‌ ಎಂಬಾತ ಪೊಲೀಸರ ಲಾಠಿ ಪ್ರಹಾರದಲ್ಲಿ ಗಾಯಗೊಂಡು ಮೃತ ಪಟ್ಟಿದ್ದರು. ಇದರಿಂದ ಶಿವಸ್ವಾಮಿರನ್ನು ಅಮಾನತ್ತು ಗೊಳಿಸಿದ್ದರು.

ಅಂದಿನಿಂದ ಚಿಕ್ಕಬಳ್ಳಾಪುರ ವೃತ್ತಕ್ಕೆ ಇದುವರೆಗೂ ಆರಕ್ಷಕ ವೃತ್ತ ನಿರೀಕ್ಷಕರು ನೇಮಕಗೊಳ್ಳದೇ ಪ್ರಭಾರಿಯಾಗಿ ಅಧಿಕಾರಿಗಳು ಕೆಲಸ ಮಾಡುವಂತಾಗಿದೆ. ಇನ್ನೂ ನಗರ ಠಾಣೆ ಪಿಎಸ್‌ಐ ಆಗಿದ್ದ ರಾಮ್‌ಪ್ರಸಾದ್‌ ವರ್ಗಾವಣೆಗೊಂಡ ಬಳಿಕ ಕೆಲಕಾಲ ಚಿಂತಾಮಣಿ ಗ್ರಾಮಾಂತರ ಠಾಣೆ ಪಿಎಸ್‌ಐ ಲಿಯಾಕತ್‌ವುಲ್ಲಾ ಬಂದರೂ ಕೆಲವೇ ದಿನಗಳಿಗೆ ಇಲ್ಲಿಂದ ಶಿಡ್ಲಘಟ್ಟಗೆ ವರ್ಗಾವಣೆಗೊಂಡರು. 

ಪೊಲೀಸರ ಹತ್ಯೆ ನಡೆದಿದ್ದ ಬಟ್ಲಹಳ್ಳಿ ಠಾಣೆಗೆ ಪಿಎಸ್ಸೆ„ ಇಲ್ಲ ವಿಪಯಾರ್ಸದ ಸಂಗತಿ ಎಂದರೆ ಜಿಲ್ಲೆಯ ಚಿಂತಾಮಣಿ ತಾಲೂಕು ಕೇಂದ್ರದಿಂದ ಸುಮಾರು 36 ಕಿ.ಮೀ. ದೂರದಲ್ಲಿ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಭಟ್ಲಹಳ್ಳಿ ಠಾಣೆಗೆ ನಾಲ್ಕೈದು ತಿಂಗಳಿಂದ ಪಿಎಸ್‌ಐ ಇಲ್ಲದಂತಾಗಿದೆ. ಬಟ್ಲಹಳ್ಳಿ ಇಡೀ ಜಿಲ್ಲೆಯಲ್ಲಿ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ. ಇಲ್ಲಿ ಹಲವು ವರ್ಷಗಳ ಹಿಂದೆಯೇ ಇಬ್ಬರು ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಇಡೀ ದೇಶವನ್ನೆ ಬೆಚ್ಚಿಬೀಳಿಸಿದ್ದ ಕಂಬಾಲಹಳ್ಳಿ ದಲಿತರ ಏಳು ಮಂದಿ ಸಜೀವ ದಹನ ಆಗಿದ್ದು, ಇದೇ ಠಾಣೆ ವ್ಯಾಪ್ತಿಯಲ್ಲಿ. ಆದರೆ, ಈ ಠಾಣೆಗೆ ಪಿಎಸ್‌ಐ ನೇಮಕಗೊಳ್ಳದೇ ಈ ಭಾಗದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆಯೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಗಣೇಶೋತ್ಸವ ವೇಳೆ ಕಾನೂನು ಸುವ್ಯವಸ್ಥೆ ಸವಾಲು ಜಿಲ್ಲಾದ್ಯಂತ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಗಣೇಶೋತ್ಸವನ್ನು ಸಂಘ, ಸಂಸ್ಥೆಗಳು ಪ್ರತಿಷ್ಠೆಯಾಗಿ ಆಚರಿಸುವುದರಿಂದ ಸಾಕಷ್ಟು ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲು. ಆದರೆ, ಚಿಕ್ಕಬಳ್ಳಾಪುರ ಹಾಗೂ  ತಾಮಣಿ ನಗರ ಠಾಣೆಯಲ್ಲಿ ಸಿಪಿಐಗಳ ಜತೆಗೆ ಪಿಎಸ್‌ಐಗಳ ಕೊರತೆ ಎದ್ದು ಕಾಣುತ್ತಿರುವುದರಿಂದ ಗಣೇಶೋತ್ಸವದ ಸಂದರ್ಭದಲ್ಲಿ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ಕಾನುನು ಸುವ್ಯವಸ್ಥೆ ಕಾಪಾಡುವುದು ಇಲಾಖೆ ಹರಸಾಹಸ ಪಡಬೇಕಿದೆ  ಜಿಲ್ಲೆಯ ಚಿಂತಾಮಣಿ, ಚಿಕ್ಕಬಳ್ಳಾಪುರ ನಗರ ಠಾಣೆಗಳಲ್ಲಿ ಪಿಎಸ್‌ಐಗಳು ಹುದ್ದೆಗಳು ಖಾಲಿ ಇವೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಠಾಣೆಗೆ ಸಂಚಾರ ಪಿಎಸ್‌ಐವರನ್ನು ಪ್ರಭಾರಿಯಾಗಿ ನೇಮಿಸಲಾಗಿದೆ. ಉಳಿದ ಕಡೆಗಳಲ್ಲಿ ಶೀಘ್ರದಲ್ಲಿಯೇ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಠಾಣೆಗಳಿಗೆ ನೇಮಕ ಮಾಡಲಾಗುವುದು.
 ಕಾರ್ತಿಕರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 


Trending videos

Back to Top