CONNECT WITH US  

ಶ್ರೀರಂಗನಾಥನ ದರ್ಶನಕ್ಕೆ ಬಂದಿದ್ದ ಅಟಲ್‌

ಶ್ರೀರಂಗಪಟ್ಟಣ: ಮಾಜಿ ಪ್ರಧಾನಿ ವಾಜಪೇಯಿ 1991ರ ಜುಲೈ 8ರಂದು ಶ್ರೀರಂಗಪಟ್ಟಣಕ್ಕೆ ಆಗಮಿಸಿ ಶ್ರೀರಂಗನಾಥನ ದರ್ಶನ ಪಡೆದಿದ್ದರು. ಆಗ ಅವರು ಸಂಸದೀಯ ಮಂಡಳಿ ಅಧ್ಯಕ್ಷರಾಗಿದ್ದರು.

ಈಗಿರುವ ಪ್ರಧಾನ ಅರ್ಚಕ ಪಾರ್ಥಸಾರಥಿ ಅಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಪೂರ್ಣ ಕುಂಭದೊಂದಿಗೆ ದೇವಾಲಯಕ್ಕೆ ಸ್ವಾಗತಿಸಿದ್ದರು. ನಂತರ ದೇವಾಲಯದ ಆಡಳಿತ ಮಂಡಳಿಯವರು ಪೂಜಾ ಕಾರ್ಯಗಳನ್ನು ನೆರವೇರಿಸಿ ಕೊಟ್ಟಿದ್ದರು ಎಂದು ಚಾಮುಂಡೇಶ್ವರಿ ದೇಗುಲದ ಆರ್ಚಕ ಲಕ್ಷ್ಮೀಶ್‌ ತಿಳಿಸಿದ್ದಾರೆ.

ಎಸಿ ನೆಲಮನೆ ವಿಜಿ, ಪುರಸಭಾ ಸದಸ್ಯ ಜಯರಾಮು ಮುಂತಾದ ಬಿಜೆಪಿ ಮುಖಂಡರು ಅಂದು ವಾಜಪೇಯಿ ಅವರೊಂದಿಗೆ ಚರ್ಚಿಸಿ ಶ್ರೀರಂಗಪಟ್ಟಣ ಕುರಿತ ಇತಿಹಾಸ ತಿಳಿಸಿದ್ದರು ಎಂದರು.

Trending videos

Back to Top