ಭ್ರಷ್ಟಾಚಾರ ವಿರುದ್ಧ  ಜಾಗೃತಿ ಮೂಡಲಿ

Team Udayavani, Dec 9, 2018, 10:31 AM IST

9-december-1.gif

ಯಾವ ದೇಶ ಭ್ರಷ್ಟಾಚಾರ ಮುಕ್ತವಾಗಿದೆ? ಎಂದು ಕೇಳಿದರೆ ಸ್ವಲ್ಪ ಯೋಚಿಸಿ ಹೇಳಬೇಕಾದ ಪರಿಸ್ಥಿತಿ ಇದೆ. ಇರುವ ದೇಶಗಳಲ್ಲಿ ರ್‍ಯಾಂಕಿಂಗ್‌ ಮಾಡಿದರೆ ಪೈಪೋಟಿಯಲ್ಲಿ ನಿಲ್ಲುವಷ್ಟು ಭ್ರಷ್ಟಾಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲೆಂದೇ ಡಿ. 9ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. 2003ರಲ್ಲಿ ಯುನೈಟೆಡ್‌ ನ್ಯಾಶನ್ಸ್‌ ಜನರಲ್‌ ಅಸೆಂಬ್ಲಿಯಿಂದ ಈ ದಿನವನ್ನು ಆಚರಿಸುವಂತೆ ಕರೆ ನೀಡಿದ್ದು, ಅಲ್ಲಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ದಿನದ ಉದ್ದೇಶ, ಅಭಿಯಾನ
ಸಮಾಜದಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು, ಈ ದಿನವನ್ನು ಆಚರಿಸಲಾಗುತ್ತಿದೆ. ಇದೇ ಉದ್ದೇಶವನ್ನಿಟ್ಟುಕೊಂಡು ಅನೇಕ ರೀತಿಯ ಆಂದೋಲನಗಳೂ ನಡೆದಿವೆ. 2009ರಲ್ಲಿ ಯುನೈಟೆಡ್‌ ನ್ಯಾಶನ್ಸ್‌ ಆಫೀಸ್‌ ಆನ್‌ ಡ್ರಗ್ಸ್‌ ಕ್ರೈಂನಿಂದ ರಚಿಸಲ್ಪಟ್ಟ ಜಂಟಿ ಅಂತಾರಾಷ್ಟ್ರೀಯ ಯುವರ್‌ ನೋ ಕೌಂಟ್ಸ್‌ ಅಭಿಯಾನವು ವಿಶ್ವಸಂಸ್ಥೆಯ ಅಭಿವೃದ್ಧಿಯ ಕಾರ್ಯ ಹಾಗೂ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಗುರುತಿಸಲು, ಅದರ ಕುರಿತು ಜಾಗೃತಿ ಮೂಡಿಸಲು ಮತ್ತು ಅದರ ವಿರುದ್ಧ ಹೇಗೆ ಹೋರಾಡಬಹುದು ಎಂಬುದರ ಬಗ್ಗೆ ತಿಳಿಸಲು ನೆರವಾಯಿತು.

ಅಣ್ಣಾ ಹಜಾರೆ ಚಳವಳಿ
ಐಎಸಿಯ ಪ್ರತಿಭಟನೆ, ಚಳವಳಿಯು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. 2011ರಲ್ಲಿ ಪ್ರಾರಂಭವಾದ ಈ ಪ್ರತಿಭಟನ ಚಳವಳಿ ಲಕ್ಷಾಂತರ ಜನರನ್ನು ಬಡಿದೆಬ್ಬಿಸಿತ್ತು. ಅಣ್ಣಾ ಹಜಾರೆಯವರ ಹಾಗೂ ಅವರ ಬೆಂಬಲಿಗರ ಬೇಡಿಕೆಗಳು ಜನರನ್ನು ಅಭಿಯಾನಕ್ಕೆ ಸಜ್ಜುಗೊಳಿಸಿದ್ದವು. ಇದರಿಂದ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸರಕಾರಿ ಅಧಿಕಾರಿಗಳನ್ನು ಬಂಧಿಸಲು ಮತ್ತು ಅಂಥವರ ಮೇಲೆ ಕ್ರಮಕೈಗೊಳ್ಳುವ ಅಧಿಕಾರ ಹೊಂದಿರುವ ಲೋಕಪಾಲ್‌ ಸೃಷ್ಟಿಯಾಯಿತು. ಅಲ್ಲದೆ ಇದರ ಪ್ರಚಾರ ಸಾಮಾಜಿಕ ಮಾಧ್ಯಮಗಳ ಮೂಲಕ ಬಲ ಪಡೆಯಿತು. ಬೆಂಬಲಿಗರ ಬೃಹತ್‌ ಜಾಲವೇ ಸೃಷ್ಟಿಯಾಯಿತು. ಅಭಿಯಾನದ ಪ್ರಮುಖ ವ್ಯಕ್ತಿಗಳಾದ ರಾಮ್‌ ದೇವ್‌, ಯೋಗಿ ಹಾಗೂ ಮೀರಾನಂದ, ಅರವಿಂದ್‌ ಕೇಜ್ರಿವಾಲ್‌, ಕಿರಣ್‌ಬೇಡಿ, ಅವರಿಂದಾಗಿ ಅಭಿಯಾನ ವ್ಯಾಪಕ ಜನಪ್ರಿಯತೆ ಪಡೆಯಿತು.

ಉಲ್ಲೇಖಗಳು
 2001-02ರಲ್ಲಿ ವಿಶ್ವ ಬ್ಯಾಂಕ್‌ನ ಸಂಶೋಧನ ಮುಖ್ಯಸ್ಥರು ಭ್ರಷ್ಟ ಪಾವತಿಗಳ ಬಗ್ಗೆ ಗಮನಿಸಿದ ಮತ್ತು ಲೆಕ್ಕಾಚಾರ ಮಾಡಿದ ಒಟ್ಟು ಫ‌ಲಿತಾಂಶಗಳನ್ನು ಪ್ರಕಟಿಸಿದ್ದರು.
ಒಟ್ಟಾರೆಯಾಗಿ ಒಟ್ಟು 1 ಟ್ರಿಲಿಯನ್‌ ಡಾಲರ್‌ ಗಳಷ್ಟು ಅಂದಾಜಿಸಲಾಗಿದೆ. 

 175 ರಾಷ್ಟ್ರಗಳು ಒಳಗೊಳ್ಳುವ ಟ್ರಾನ್ಫರೆನ್ಸಿ ಇಂಟರ್‌ನ್ಯಾಶನಲ್ಸ್‌ 2014ರ ಗ್ರಹಿಕೆ ಸೂಚ್ಯಾಂಕವು (ಸಿಸಿಐ) ಮೂರರಲ್ಲಿ ಎರಡು ಭಾಗದಷ್ಟಿದ್ದವು. 

ನಿಮಗೂ ತಿಳಿದಿರಲಿ
ಭ್ರಷ್ಟಾಚಾರದ ಅಪಾಯ ಮತ್ತು ಹಾನಿಯ ಬಗ್ಗೆ ರಮಾನಾ (2002), ಆಂತರಿಕ ವ್ಯವಹಾರಗಳು (1990) ಮತ್ತು ತರಬೇತಿ ದಿನ (2001) ಮೊದಲಾದ ಚಲನಚಿತ್ರಗಳೂ ಬಂದಿವೆ.
 ಭ್ರಷ್ಟಾಚಾರದ ಅಪಾಯಗಳ ಬಗ್ಗೆ ತಿಳಿಸುವ ಕೆಲವು ಪುಸ್ತಕಗಳು:
ರಾಜಧಾನಿ ಭ್ರಷ್ಟಾಚಾರ, ರಾಜಕೀಯ ಭ್ರಷ್ಟಾಚಾರ, ವಾಟರ್‌ ಗೇಟಿನಿಂದ ವೈಟ್‌ವಾರ್ಟ್ ಗೆ ಆಲೋಚನೆ.
 ಪನಾಮ ಪೇಪರ್ಸ್‌ ವಿಶ್ವಾದ್ಯಂತ ಉನ್ನತ ಮಟ್ಟದ ರಾಜಕಾರಣಿಗಳ ಮತ್ತು ಕಂಪೆನಿಗಳ  ಭ್ರಷ್ಟಾಚಾರವನ್ನು ಬಹಿರಂಗಪಡಿಸಿದೆ.
 ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲು ಬ್ರೀಕ್ಥ್  ಚೈನ್‌, ಇಂಟರ್‌ ನ್ಯಾಶನಲ್‌ ಆ್ಯಂಟಿಕರ ಪ್ಶನ್‌ ಡೇ ಹಾಗೂ ಎಂಡ್ಕಾಪೇಶನ್‌ ಅನ್ನು ಬಳಸಬಹುದು.

ವಿಶ್ವದ ಅತ್ಯಂತ ಭ್ರಷ್ಟದೇಶಗಳು
 ನೈಜೀರಿಯಾ
 ಕೊಲಂಬಿಯಾ
 ಪಾಕಿಸ್ಥಾನ
 ಇರಾನ್‌
 ಮೆಕ್ಸಿಕೋ
 ಘಾನ
 ಅಂಗೋಲಾ
 ರಷ್ಯಾ
 ಕೀನ್ಯಾ
ಗ್ವಾಟೆ ಮಾಲಾ
(2017ರ ಸಮೀಕ್ಷೆಯ ಪ್ರಕಾರ 100 ದೇಶಗಳಲ್ಲಿ ಭಾರತವು 99ನೇ ಸ್ಥಾನದಲ್ಲಿದೆ.)

ಪ್ರೀತಿ ಭಟ್‌

ಟಾಪ್ ನ್ಯೂಸ್

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.