CONNECT WITH US  

ಪ್ರಾರಬ್ದಗಳಿಂದ ಪಾರಾಗುವುದು ಹೇಗೆ?

 ಭಾಗ-2

ಮರಣದ ಮನೆಯ ಶಕ್ತಿಯು ಪ್ರವಹಿಸುವ ಸಕಾರಾತ್ಮಕ ದಿಕ್ಕು ಅಥವಾ ನಕಾರಾತ್ಮಕ ದಿಕ್ಕು ಹಲವು ರೀತಿಯ ಶಿಷ್ಟ ಶಕ್ತಿಗಳನ್ನು ಒದಗಿಸಿದ ಹಾಗೇ ಸಕಾರಾತ್ಮಕ ಅಥವಾ ನಕಾರಾತ್ಮಕ ದಿಕ್ಕು ಹಲವು ರೀತಿಯ ಶಿಷ್ಟ ಶಕ್ತಿಗಳನ್ನು ಒದಗಿಸಿದ ಹಾಗೇ ಹಲವು ವೈಪರಿತ್ಯಗಳನ್ನು ನಂಟು ಹಾಕುತ್ತದೆ.

 ಹಿಂದಿನ ಕಂತಿನಲ್ಲಿ ಒಂದು ಜನ್ಮಕುಂಡಲಿಯ ಒಂದರಿಂದ ಏಳರವರೆಗಿನ ಮನೆಯ ವಿಚಾರಗಳನ್ನು ತಿಳಿಸಿ ಬರೆಯಲಾಗಿತ್ತು. ಈ ಏಳು ಮನೆಯ ಶಕ್ತಿ ಹಾಗೂ ಮಿತಿಗಳನ್ನು ಸದ್ಬಳಕೆ ಮಾಡಿಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಹೇಗೆಂದೂ ವಿವರಿಸಲಾಗಿತ್ತು.  ಈಗ ಈ ವಾರದಲ್ಲಿ ಮರಣಸ್ಥಾನ, ಭಾಗ್ಯ ಎಂಬಿತ್ಯಾದಿ ಇತರ ಉಳಿದ ಐದು ಮನೆಯಗಳ ವಿಚಾರವಾಗಿ ವಿವರಿಸಿ, ಮಿತಿಗಳನ್ನು ಶಕ್ತಿಯನ್ನಾಗಿಸಿಕೊಳ್ಳುವ, ಶಕ್ತಿಯನ್ನು ಮಹಾಬಲವನ್ನಾಗಿಸಿಕೊಳ್ಳುವ ವಿಚಾರ ಪ್ರಸ್ತಾಪಿಸಲಾಗಿದೆ. ಮನುಷ್ಯನ ಜೀವನದಲ್ಲಿ ಪ್ರಧಾನವಾಗಿ ತಾಳ್ಮೆಯನ್ನು, ವಿನಯವನ್ನು, ಜ್ಞಾನವನ್ನು ವಿಸ್ತರಿಸಿಕೊಳ್ಳುವವನಿಗೆ ಸಂಕಟಗಳನ್ನು, ಕಷ್ಟ ಕಾರ್ಪಣ್ಯಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ. ತನ್ನಲ್ಲಿ ತಾನು ವಿಶ್ವಾಸ ಇಟ್ಟುಕೊಳ್ಳುವುದು ಅವಶ್ಯ.    

ಕೆಲವು ಸಾಧಕರು ನಿಮ್ಮ ಶಕ್ತಿಯನ್ನು ವೃದ್ಧಿಸುವ ಅಲೌಕಿಕ ಶಕ್ತಿಯನ್ನು ಒದಗಿಸಿಕೊಡಬಲ್ಲರು. ಮುಖ್ಯವಾಗಿ ಅವರ ಪಾಲಿಗೆ ಕೈವಶವಾದ ಸಾಧಕ ಶಕ್ತಿಯಿಂದ ಅಮೂರ್ತವನ್ನು ಮೂರ್ತಗೊಳಿಸುವ ವಿಚಾರಕ್ಕೆ ಮುಂದಾಗುತ್ತಾರೆ. ಇಂಥ ಸಂದರ್ಭಗಳಲ್ಲಿ, ಮನುಷ್ಯನಲ್ಲಿ ಅಡಕವಾದ ಷಟ್‌ಚಕ್ರಗಳನ್ನು ಉದ್ದೀಪನಗೊಳಿಸಬೇಕಾಗುತ್ತದೆ. ಮೂಲಾಧಾರ, ಸ್ವಾಧಿಷ್ಟಾನ, ಮಣಿಪುರ, ಅನಾಹತ, ವಿಶುದ್ಧ, ಆಜ್ಞಾದಿ ಚಕ್ರಗಳು ಜಾಗ್ರತಗೊಂಡಾಗ ವಿಶಿಷ್ಟವಾದ ಶಕ್ತಿಯನ್ನು, ಪ್ರಕೃತಿಯನ್ನು, ಪುರುಷನನ್ನು ಸಮ್ಮಿಶ್ರಗೊಳಿಸುವ ಸಾಫ‌ಲ್ಯತೆ ಪೂರೈಸಿ ಬಹುದೊಡ್ಡ ವಿಶಿಷ್ಟ ಸಾಧನೆ ಮಾಡಬಹುದಾಗಿದೆ. 

ಯಾವ ರಾಜ್ಯ ಅನ್ನುವುದು ಬೇಡ. ಒಂದು ರಾಜ್ಯದ ಮುಖ್ಯ ಮಂತ್ರಿ ಬಹುದೊಡ್ಡ ಶಕ್ತಿಯನ್ನು ಸಂಪಾದಿಸಲು ಮುಂದಾಗಿ, ಮುಂದೆ ಸೂಕ್ತವಾಗಿ ಶಕ್ತಿಯನ್ನು ಸಂಪಾದಿಸಲಾಗದೆ ಬಹಳಷ್ಟು ಕಷ್ಟದ ದಿನಗಳನ್ನು ಎದುರಿಸಬೇಕಾಯ್ತು. ನಂತರ ತೀವ್ರವಾದ ಅನಾರೋಗ್ಯದಿಂದ ಅವರ ಸಾವೂ ಸಂಭವಿಸಿತು. ಹಾಗಾದರೆ ಅಲೌಕಿಕ ಶಕ್ತಿ ಯಾಕೆ ಎಲ್ಲರಿಗೂ ವಶವಾಗುವುದಿಲ್ಲ? ಅದನ್ನು ಒಬ್ಬ ವ್ಯಕ್ತಿಯ ಮೇಲಣ ಮನೆಯ ಹೊಂದಾಣಿಕೆ ಪೂರ್ವ ಪುಣ್ಯ ಸ್ಥಾನ (5ನೇ ಮನೆ), ಧರ್ಮಸ್ಥಾನ (9ನೇ ಮನೆ) ಹೇಗೆ ಒಗ್ಗೂಡಿದೆ ಎಂಬುದನ್ನು ತಿಳಿಯಲು ಸಮರ್ಪಕ ಹೊಳಹುಗಳು ಒದಗುತ್ತವೆ. ಛಿದ್ರಸ್ಥಾನ (6ನೇ ಮನೆ), ಮರಣ ಸ್ಥಾನಗಳು (8ನೇ ಮನೆ) ಇವು ಸ್ವರ್ಗಕ್ಕಾಗಿನ ದಾರಿಯೂ ಹೌದು. ನಮ್ಮನ್ನು ನಾವೇ ನಾಶ ಮಾಡಿಕೊಳ್ಳುವ ದಾರಿಯೂ ಹೌದು. ಅಭೂತಪೂರ್ವವಾದುದನ್ನು ಸಂಪಾದಿಸಲು, ಸಂಪಾದಿಸಿದ್ದನ್ನು ಕಳಕೊಂಡು ಪರದಾಡಲು ಇವು ತಮ್ಮ ಪಾತ್ರವಹಿಸುತ್ತವೆ. ವ್ಯಕ್ತಿ, ತನ್ನ ಸಂಪನ್ನತೆಯನ್ನು ಸೂಕ್ತವಾಗಿ ಪ್ರದರ್ಶಿಸಿ, ಸಕಾರಾತ್ಮಕ ಶಕ್ತಿವಲಯ ಸಂಪಾದಿಸಿಕೊಂಡರೆ ಶಿವನ ಅಥವಾ ಮಹಾವಿಷ್ಣುವಿನ ಆ ಮೂಲಕ ಜ್ಞಾನ ನಿಧಿಯಾದ ಶಾರದೆ, ಲಕ್ಷಿ$¾à ಹಾಗೂ ದುರ್ಗಾ ಶಕ್ತಿಗಳು ನಮಗೆ ಲಭ್ಯ.

 ಮರಣದ ಮನೆಯ ಸಾಧಕ, ಬಾಧಕಗಳೇನು?

 ಮರಣದ ಮನೆಯು ಜಾತಕದ ಅಷ್ಟಮ ಸ್ಥಾನವಾಗಿರುತ್ತದೆ. ಮದದಿಂದ ಕೊಬ್ಬಿದ್ದ ಕಂಸನನ್ನು ಅಶರೀರವಾಣಿಯೊಂದು ಎಚ್ಚರಿಸುವಾಗ "ನಿನ್ನ ತಂಗಿಯ ಅಷ್ಟಮ ಗರ್ಭ ನಿನ್ನ ಸಾವಿಗೆ ದಾರಿ ಮಾಡುತ್ತದೆ ' ಎಂದು ಹೇಳಿದ ವಿಚಾರ ನೆನಪಿಸಿಕೊಳ್ಳಿ. ನಟ ದೇವಾನಂದ್‌ ಅವರ ಜಾತಕದಲ್ಲಿನ ಅಷ್ಟಮ ಸ್ಥಾನ, ನಮ್ಮ ದೇಶದ ಮಹಾನ್‌ ನ್ಯಾಯವಾದಿ ರಾಮ್‌ ಜೇಠ್ಮಲಾನಿ , ಭಾರತದ ಮಾಜಿ ಪ್ರಧಾನಿ ದೇವೇಗೌಡ, ದಿವಂಗತ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ, ತೊಂಭತ್ತರ ನಂತರವೂ ಹಾಯಾಗಿಯೇ ಇದ್ದು ಬದುಕನ್ನು ಆನಂದಿಸಿದ್ದ ಖುಷ್‌ವಂತ್‌ಸಿಂಗ್‌ ಮುಂತಾದವರೆಲ್ಲಾ ವೃದ್ಧಾಪ್ಯದಲ್ಲೂ ತಮ್ಮ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಪ್ರದರ್ಶಿಸಲು ಹೇಗೆ ಸಾಧ್ಯವಾಗುತ್ತಿದೆ? ಭಾರತದ ಮಾಜಿ ಉಪಪ್ರಧಾನಿ ಲಾಲಕೃಷ್ಣ ಆಡ್ವಾಣಿ ಈಗಲೂ ( ಬಂದರೆ, ಬರಬಹುದೆ?) ಪ್ರಧಾನಿ ಪಟ್ಟ ನಿರ್ವಹಿಸುವ ಕ್ರಿಯಾಶೀಲತೆ ಹೊಂದಿದ್ದಾರೆ. ಅವರಿಗೆ ವರ್ಷವೀಗ ಬರೋಬರಿ ತೊಂಭತ್ತು. ಸಾಯುವಾಗ ತೊಂಭತ್ತರ ಹತ್ತಿರ ಬಂದಿದ್ದ ದೇವಾನಂದರಿಗೆ ಹೊಸ ಚಿತ್ರದಲ್ಲಿ ನಟಿಸುವ ಉಮೇದಿ, ತಯಾರಿಗಾಗಿ ಓಡಾಟ ಇದ್ದೇ ಇತ್ತು. ಖುಷ್‌ವಂತ್‌ ಸಿಂಗ್‌ 90+ ಆದರೂ ವ್ಹಿಸ್ಕಿಯ ಗುಟುಕುಗಳಲ್ಲಿ ದಣಿಯದೇ ತರುಣರಂತೇ ಇದ್ದರು. 

 ದಿವಂಗತ ಪ್ರಧಾನಿ ಮೊರಾರ್ಜಿ 80+ ಆದಾಗಲೂ ಪ್ರಧಾನಿಗಳಾಗಿ ಕೆಲಸ ನಿರ್ವಹಿಸಿದರು. ದೇವೇಗೌಡರು ಈ ವಯಸ್ಸಿನಲ್ಲೂ ಮಾನಸಿಕ  ದಾರ್ಡ್ಯತೆ ಪಡೆದೇ ಇದ್ದಾರೆ. ನೆನಪಿಡಿ, ಇವರೆಲ್ಲರಿಗೂ ಚಂದ್ರನ ಸಿದ್ಧಿ ಇದೆ. ಚಂದ್ರ ಮಾತೃಕಾರ. ಈ ಕಾರಣದಿಂದಾಗಿ ಮಾತೆ ನೀಡುವ ಆರೈಕೆ, ಆಯಸ್ಸಿನ ಸಂಜೀವಿನಿ ದಕ್ಕಲು ಅನುಕೂಲ ಒದಗುತ್ತದೆ. ಆದರೆ ಮರಣ ಸ್ಥಾನಕ್ಕೂ  ಚಂದ್ರನಿಗೂ ಉಪಯುಕ್ತ ಸಂಬಂಧಗಳು ಬೇಕು. ಕೇತು, ಶುಕ್ರ, ಕುಜ ಅಥವಾ ರಾಹುಗಳು ಅಧಿಕವಾಗಿ ಅಲ್ಪಾಯುಷ್ಯಕ್ಕೆ ಅಥವಾ ಮರಣ ಶಾಸನಕ್ಕೆ ಕಾರಣರಾಗುತ್ತಾರೆ. ಜನರಲ್‌ ಮುಶರಫ್ ಆಡಳಿತಾವಧಿಯಲ್ಲಿ ಇಂದಿನ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್, ಹಾಗೂ ಜನರಲ್‌ ಜಿಯೋ ಉಲ್‌ಹಕ್‌ ಆಡಳಿತದ ಸಂದರ್ಭದಲ್ಲಿ ಭುಟ್ಟೋ ಎದುರಿಸಿದ ರಾಜದ್ರೋಹದ ಆಪಾದನೆಗಳು ಒಂದೇ ರೀತಿಯದ್ದಾದರೂ ಭುಟ್ಟೋ ಅವರ ರಾಹು ದೋಷ ಚಂದ್ರನ ಶಕ್ತಿಯನ್ನು ಕ್ಷೀಣಿಸಿದ್ದರಿಂದ ಅವರು ಗಲ್ಲಿಗೇರಲೇಬೇಕಾಗಿ ಬಂತು. ಕೆಲವು ನಿಗೂಢ ಕಾರಣಗಳು ಕುಜ ಹಾಗೂ ಶುಕ್ರರ ಕಾರಣದಿಂದಾಗಿ ಅಸಹಜ ಮರಣಕ್ಕೆ ಕಾರಣವಾಗಿತ್ತು. ಲಾಭದಾಯಕ ಚಂದ್ರ, ಮರಣದ ನೆರಳಲ್ಲಿದ್ದರೂ ತನ್ನ ಬಲಾಡ್ಯತೆಯ ನೆರವಿನಿಂದ ಮರಣ ತಪ್ಪಿಸಿದ್ದ. 

 ನಿಗೂಢಶಕ್ತಿಯೂ, ಅಲೌಕಿಕ ಬೆಂಬಲದ ದಿವ್ಯ ಪ್ರವಾಹವೂ 

  ಹಲವು ವ್ಯಕ್ತಿಗಳು ಅನೇಕ ರೀತಿಯ ಅಲೌಕಿಕ ಸಾಧನೆಗಳಿಂದ ಕೆಲವು ಅಲೌಕಿಕ ಶಕ್ತಿ ಪಡೆದಿರುತ್ತಾರೆ. ಆರನೇ ಜಾಗ್ರತ ಇಂದ್ರಿಯ, ತಂತಾನೇ ಹೊಸತೊಂದು ಅಲೌಕಿಕ ಶಕ್ತಿಯ ಮೂಲಕ ಗೋಚರಕ್ಕೆ ಬರುವುದನ್ನು ತಿಳಿವ ಶಕ್ತಿ ಇವರಿಗೆ ಒಲಿದಿರುತ್ತದೆ. ಇವರು ಕುಜನ ದುಷ್ಟ ಪ್ರಭಾವ, ರಾಹುವಿನ ಘಾತಕ ಶಕ್ತಿಯ ಫ‌ಲವಾಗಿ ಅಲೌಕಿಕ ದಿವ್ಯ ಶಕ್ತಿಯನ್ನು ಪಡೆದು ವಿಕೃತ ವ್ಯಕ್ತಿಗಳಾಗುವ ಸಾಧ್ಯೆತೆಯೂ ಇರುತ್ತದೆ. ಮರಣದ ಮನೆ ( 8ನೇ ಮನೆ) ಒಂದು ಹದದಲ್ಲಿ ಇವರಿಗೆ ಒದಗಿದಲ್ಲಿ ಪವಾಡ ಪುರುಷರಾಗುವ ಶಕ್ತಿ ಒದಗುತ್ತದೆ. ಎಲ್ಲಾ ತಿಳುವಳಿಕೆಯ ಶಕ್ತಿ ಸಂಪನ್ಮೂಲಗಳನ್ನು ಪಡೆದೂ ಶುಕ್ರನ ವಿಕೃತಿಯಿಂದ, ರಾಹುವಿನ ವಿಕೃತಿಯಿಂದ ಹಲವಾರು ರೀತಿ ಭ್ರಷ್ಟ ಜೀವನಕ್ಕೆ ಸಿಕ್ಕು ಬೀಳುತ್ತಾರೆ. ಕಾಮ, ಕ್ರೋಧ, ಲೋಭ, ಮೋಹಾದಿ ಅರಿಷಡ್ವರ್ಗಗಳಿಂದ ಕಳಂಕಿತರಾಗುತ್ತಾರೆ. ಅತ್ಯಾಚಾರ (ಮಹಿಳೆಯರು ಕುತ್ಸಿತ ಕೆಲಸಗಳಿಗೆ ತೊಡಗುವುದು ಸೇರಿ) ಡ್ರಗ್ಸ್‌, ಅನ್ಯರ ಚಾರಿತ್ರÂವಧೆ, ಕೊಲೆ, ಸುಲಿಗೆ, ವಶೀಕರಣದಂಥ ಜಾಲದಲ್ಲಿ, ಸ್ಥಾನಮಾನದ ಪವಿತ್ರ ಸ್ಥಳದಲ್ಲಿದ್ದು ದಾರಿ ತಪ್ಪುವುದು ಇತ್ಯಾದಿ ನಡೆಸುತ್ತಾರೆ.  ಇವರೆಲ್ಲಯಾರು ಎಂಬುದು ಸದ್ಯ ಬೇಡ. ತಮ್ಮ ದಿವ್ಯ ಸಾಧನೆಯನ್ನ ಕಿರಾತ ಶಕ್ತಿಯನ್ನಾಗಿ ರೂಪಿಸಿಕೊಂಡು ದುರ್ಮರಣ ಪಡೆದವರು ಹಲವರಿದ್ದಾರೆ. 

  ವಶೀಕರಣ, ಗುಪ್ತ ನಿಧಿ ಶೋಧನೆ, ದುಷ್ಟ ಶಕ್ತಿಗಳ ಕ್ರೂಢೀಕರಣ

  ಮರಣದ ಮನೆಯ ಶಕ್ತಿಯು ಪ್ರವಹಿಸುವ ಸಕಾರಾತ್ಮಕ ದಿಕ್ಕು ಅಥವಾ ನಕಾರಾತ್ಮಕ ದಿಕ್ಕು ಹಲವು ರೀತಿಯ ಶಿಷ್ಟ ಶಕ್ತಿಗಳನ್ನು ಒದಗಿಸಿದ ಹಾಗೇ ಸಕಾರಾತ್ಮಕ ಅಥವಾ ನಕಾರಾತ್ಮಕ ದಿಕ್ಕು ಹಲವು ರೀತಿಯ ಶಿಷ್ಟ ಶಕ್ತಿಗಳನ್ನು ಒದಗಿಸಿದ ಹಾಗೇ ಹಲವು ವೈಪರಿತ್ಯಗಳನ್ನು ನಂಟು ಹಾಕುತ್ತದೆ. ಆಯಾ ವ್ಯಕ್ತಿ ಈ ನಿಗೂಢ ಶಕ್ತಿಯನ್ನು ಒಳಿತಿಗೆ ಉಪಯೋಗಿಸಿಕೊಳ್ಳುತ್ತಾನೋ, ಕೆಟ್ಟದ್ದರ ಬಗೆಗೆ ಉಪಯೋಗಿಸಿಕೊಳ್ಳುತ್ತಾನೋ ಅವನ ವ್ಯಕ್ತಿತ್ವವು (ಅಥವಾ ಅವಳ ವ್ಯಕ್ತಿತ್ವವೂ) ಹರಳುಗಟ್ಟಿದ ರೀತಿಯ ಮೇಲಿಂದ ನಿರ್ಧಾರವಾಗುತ್ತದೆ. ಹಲವು ರೀತಿಯ ಮಾನಸಿಕ ವ್ಯಾಧಿಗಳನ್ನು ರೋಗರುಜಿನಗಳನ್ನು, ಪರಿಹಾರವಾಗದ ವ್ಯಾಕುಲತೆಗಳನ್ನು ಶಿಷ್ಟ ವ್ಯಕ್ತಿಗಳು ಅತ್ಯದ್ಬುತವಾಗಿ ನಿವಾರಿಸಿ ಕೊಡಬಲ್ಲರು. ಯಾರು ಶಿಷ್ಟರು ಎಂಬುದನ್ನು ಸರಿಯಾಗಿ ಹುಡುಕಬೇಕು. ಜಾತಕ ಕುಂಡಲಿಯಲ್ಲಿ ಒಬ್ಬ ವ್ಯಕ್ತಿ ಉತ್ತಮನೋ, ಕುತಂತ್ರಿಯೋ ಎಂಬುದನ್ನು ತಿಳಿಯಬಹುದು. ಉತ್ತಮನ ಬಳಿಗೆ ದುಷ್ಟರೂ, ದುಷ್ಟನ ಬಳಿಗೆ ಶಿಷ್ಟರೂ ಸಂಧಿಸುವ ವಿಚಿತ್ರ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಆದರೆ ಒಳ್ಳೆಯವರು ಶಿಷ್ಟ ಶಕ್ತಿ ಸಂಪಾದಿಸಿಕೊಂಡು ಇರುವವರು ಇದ್ದೇ ಇದ್ದಾರೆ. 

ಅನಂತ ಶಾಸ್ತ್ರಿ

Trending videos

Back to Top