CONNECT WITH US  

ಪಠಾಣ್‌ಕೋಟ್‌ ಬಳಿ ಒಳನುಸುಳುಕೋರನ ಹತ್ಯೆ

ಗುರುದಾಸ್‌ಪುರ: ಇತ್ತೀಚೆಗೆ ವಾಯು ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಪಠಾಣ್‌ಕೋಟ್‌ ಸಮೀಪವಿರುವ ಭಾರತ- ಪಾಕಿಸ್ತಾನ ಗಡಿಯಲ್ಲಿ ಒಳನುಸುಳುಕೋರನೊಬ್ಬನನ್ನು ಬಿಎಸ್‌ಎಫ್ ಗುರುವಾರ ಹತ್ಯೆ ಮಾಡಿದೆ.

ದಾಳಿ ಹಿನ್ನೆಲೆಯಲ್ಲಿ ಪಠಾಣ್‌ಕೋಟ್‌ನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿತ್ತು. ಬನಿಯಾಲ್‌ ಪ್ರದೇಶದ ತಾಶ್‌ ಎಂಬಲ್ಲಿ ಬೆಳಗಿನ ವೇಳೆ ಮೂರು ಮಂದಿ ಒಳನುಸುಳುತ್ತಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಗಡಿಯಿಂದ 5ರಿಂದ 10 ಮೀಟರ್‌ ಭಾರತದ ಒಳಕ್ಕೆ ಬಂದಿದ್ದ 30 ವರ್ಷದ ಒಬ್ಬ ಒಳನುಸುಕೋರನನ್ನು ಮುಂಜಾನೆ 6 ಗಂಟೆಗೆ ಹತ್ಯೆ ಮಾಡಲಾಗಿದೆ. ಆತನ ಜತೆಗೆ ಬಂದಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ. ಪಠಾಣ್‌ಕೋಟ್‌ನಿಂದ ಕೇವಲ 5 ಕಿ.ಮೀ ದೂರದಲ್ಲಿ ಒಳನುಸುಳುವಿಕೆ ಯತ್ನ ನಡೆದಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ಎಫ್ ಯೋಧರು ಒಳನುಸುಳುಕೋರನ ಮೃತ ದೇಹವನ್ನು ವಶಪಡಿಸಿಕೊಂಡಿದ್ದು, ಉರ್ದುವಿನಲ್ಲಿ ಏನನ್ನೋ ಬರೆದ ಹಾಳೆಯೊಂದು ಸಿಕ್ಕಿದೆ. ಅದನ್ನು ಬಿಟ್ಟರೆ ಆತನ ದೇಹದಲ್ಲಿ ಮತ್ತೇನೂ ಸಿಕ್ಕಿಲ್ಲ. ಮುಂಜಾನೆಯಲ್ಲಿ ಗಡಿಯಲ್ಲಿ ಫ್ಲಡ್‌ಲೈಟ್ಸ್‌ಗಳನ್ನು ಆಫ್ ಮಾಡಿದ್ದ ವೇಳೆ ಒಳನುಸುವಿಕೆಗೆ ಯತ್ನ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಪಠಾಣ್‌ಕೋಟ್‌ ಮೇಲೆ ದಾಳಿ ನಡೆಸಿದ ಉಗ್ರರು ಬಮಿಯಾಲ್‌ ಪ್ರದೇಶದ ಮೂಲಕವೇ ಭಾರತದೊಳಕ್ಕೆ ನುಸುಳಿದ್ದರು ಎನ್ನುವುದು ಗಮನಾರ್ಹ.

ಶಂಕಿತ ಉಗ್ರ ರೈಲಿನಿಂದ ಪರಾರಿ
ಇಟಾರ್ಸಿ (ಮಧ್ಯಪ್ರದೇಶ): ಕೋರ್ಟ್‌ ವಿಚಾರಣೆಗಾಗಿ ತಮಿಳುನಾಡಿನಿಂದ ಲಕ್ನೋಗೆ ತೆರಳುತ್ತಿದ್ದ ವೇಳೆ ಶಂಕಿತ ಭಯೋತ್ಪಾದಕನೊಬ್ಬ ಸಿನಿಮೀಯ ರೀತಿಯಲ್ಲಿ ಚಲಿಸುತ್ತಿರುವ ರೈಲಿನಿಂದ ಜಿಗಿದು ಪಾರಾಗಿರುವ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.

ಸಯ್ಯದ್‌ ಅಹಮದ್‌ ಅಲಿ (38) ರಪ್ತಿಸಾಗರ್‌ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಿಂದ ಕೈಕೋಳದ ಸಮೇತ ಬುಧವಾರ ಮಧ್ಯರಾತ್ರಿ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ.

Trending videos

Back to Top