CONNECT WITH US  

ಬೋಸ್‌ ಅಂತ್ಯಸಂಸ್ಕಾರದ ದಾಖಲೆ ಬಿಡುಗಡೆ

ಲಂಡನ್‌: ಭಾರತ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್‌ ಚಂದ್ರ ಬೋಸ್‌ ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಡಿದಿದ್ದು ನಿಜ ಎಂದು ಎರಡು ಕಂತುಗಳಲ್ಲಿ ದಾಖಲೆ ಬಿಡುಗಡೆ ಮಾಡಿದ್ದ ಬ್ರಿಟನ್‌ನ ವೆಬ್‌ಸೈಟ್‌ವೊಂದು, ಬೋಸ್‌ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಈಗ ಪ್ರಕಟಪಡಿಸಿದೆ.

ಇದೇ ವೇಳೆ, ವಿಮಾನ ಅಪಘಾತದಲ್ಲಿ ಬೋಸ್‌ ಅವರು ಮಡಿದರು ಎಂಬ ವಿಷಯ ವಿಶ್ವಾಸಾರ್ಹವಾಗಿದೆ ಎಂದು ಜರ್ಮನಿಯಲ್ಲಿ ವಾಸಿಸುತ್ತಿರುವ ಬೋಸ್‌ ಅವರ ಪುತ್ರಿ, ಪ್ರಾಧ್ಯಾಪಕಿ ಅನಿತಾ ಫಾಫ್ ತಿಳಿಸಿದ್ದಾರೆ.

ಸತ್ತ 4 ದಿನಗಳ ಬಳಿಕ ಅಂತ್ಯಕ್ರಿಯೆ
ನೇತಾಜಿ ಅವರ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಿದ್ದ ತೈವಾನ್‌ನ ಅಧಿಕಾರಿ ಟಾನ್‌ ಟಿ-ಟಿ ಎಂಬವರ ಹೇಳಿಕೆಯನ್ನು ಒಳಗೊಂಡ ದಾಖಲೆಯನ್ನು ಬೋಸ್‌ ಅಂತಿಮ ದಿನಗಳ ಕುರಿತಂತೆ ಮಾಹಿತಿ ಸಂಗ್ರ ಹಿಸಲು ಸ್ಥಾಪಿಸಲಾಗಿರುವ ಬೋಸ್‌ಫೈಲ್ಸ್‌ (www.bosefiles.info) ಎಂಬ ಈ ವೆಬ್‌ಸೈಟ್‌ ಪ್ರಕಟಪಡಿಸಿದೆ. ಇದು 1956ರ ದಾಖಲೆಯಾಗಿದೆ ಎಂದಿದೆ.

1945ರ ಆ. 18ರಂದು ಬೋಸ್‌ ಅವರಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಅದೇ ದಿನ ರಾತ್ರಿ 11ಕ್ಕೆ ಬೋಸ್‌ ಕೊನೆಯುಸಿರೆಳೆದಿದ್ದರು ಎಂದು ಬೋಸ್‌ ಫೈಲ್ಸ್‌ ವೆಬ್‌ಸೈಟ್‌ ಕೆಲ ದಿನಗಳ ಹಿಂದೆ ಮಾಹಿತಿ ನೀಡಿತ್ತು. ಈಗ 1945ರ ಆ. 22ರಂದು ಬೋಸ್‌ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅವರ ಚಿತಾಭಸ್ಮವನ್ನು ಆ. 23ರಂದು ಸಂಬಂಧಿಸಿದ ವ್ಯಕ್ತಿಗಳಿಗೆ ನೀಡಲಾಯಿತು ಎಂಬ ಟಾನ್‌ ಟಿ-ಟಿ ಅವರ ಹೇಳಿಕೆಯನ್ನು ಪ್ರಕಟಿಸಿದೆ.

Trending videos

Back to Top